ಬೆಂಗಳೂರಿನ ಜನರೇಕೆ ಪದೇಪದೇ ಕಾಯಿಲೆಗೆ ತುತ್ತಾಗ್ತಾ ಇದ್ದಾರೆ..?

0
93

ಈಗೀಗ, ಬೆಂಗಳೂರಿನ ಜನ ತುಂಬಾನೇ ಅನೋರೋಗ್ಯ ಪೀಡಿತರಾಗ್ತಾ ಇದ್ದಾರೆ..! ಇಲ್ಲಿನ ಜನರೇಕೆ ಪದೇ ಪದೇ ಕಾಯಿಲೆಗೆ ತುತ್ತಾಗ್ತಾ ಇದ್ದಾರೆ..? ಇದಕ್ಕೆಲ್ಲಾ ಕಾರಣವಾದರೂ ಏನಿರಬಹುದು..? ಬೆಂಗಳೂರಿನ ಜನರ ರೋಗನಿರೋಧಕ ಶಕ್ತಿಯ ಮಟ್ಟ ತೀರಾ ಕಡಿಮೆ ಆಗ್ತಾ ಇದೆಯೇ..? ಮಾಲಿನ್ಯಕಾರಕಗಳು ದಿನೇ ದಿನೇ ಅಪಾಯಕಾರಿಗಳಾಗಿ ಪರಿಣಮಿಸಲ್ಪಡುತ್ತಿವೆಯೇ..? ಹೊಸ ತಳಿಯ ಅಥವಾ ಹೊಸ ಹೊಸ ರೀತಿಯ ವೈರಸ್ ಗಳು, ಬ್ಯಾಕ್ಟೀರಿಯಾಗಳು ಬೆಂಗಳೂರು ನಗರದಲ್ಲಿ ಹೆಚ್ಚಾಗ್ತಾ ಇವೆಯೇ..? ಈ ಎಲ್ಲಾ ಪ್ರಶ್ನೆಗಳನ್ನು, ಸಂಶೋಧಕರು, ನುರಿತ ವೈಧ್ಯತಜ್ಞರು ಇತ್ತೀಚಿನ ದಿನಗಳಲ್ಲಿ ತಮಗೇ ತಾವೇ ಹಾಕಿಕೊಳ್ಳುತ್ತಿದ್ದಾರೆ..! ಅಷ್ಟೇ ಅಲ್ಲದೆ ಸಾಮಾನ್ಯ ಜನರೂ ಕೂಡ ಇವರಿಗೆ ಇದೇ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ..! ನಗರದಲ್ಲಿ ಏಕೆ ಇಷ್ಟೊಂದು ರೋಗಗಳು ಹುಟ್ಟಿಕೊಳ್ಳುತ್ತಿವೆ ಅನ್ನೋದು ಪರಿಸರ ವಿಜ್ಞಾನಿಗಳಲ್ಲಿ ಕೊರೆಯುವ ಪ್ರಶ್ನೆಯೂ ಆಗಿದೆ..!
ಈ ಎಲ್ಲಾ ಪ್ರಶ್ನೆಗಳಿಗೆ ಪರಿಸರ ವಿಜ್ಞಾನಿಯೊಬ್ಬರು ಸ್ಪಷ್ಟವಾಗಿ ಉತ್ತರಿಸಿದ್ದಾರೆ..! ತಮ್ಮ ಸಂಶೋಧನೆಯ ಮೂಲಕ ಬೆಂಗಳೂರಿನ ಜನ ಅನೇಕ ರೋಗಗಳಿಂದ ನರಳಾಡುತ್ತಿರುವುದೇಕೆ ಎಂಬುದನ್ನು ಕಂಡುಹಿಡಿದಿದ್ದಾರೆ..! ಇವರ ಸಂಶೋಧನೆಯ ಪ್ರಕಾರ ನಗರದ ಗಾಳಿಯಲ್ಲಿನ ಬ್ಯಾಕ್ಟೀರಿಯಾಗಳೇ ಕಾಯಿಲೆ ಹರಡುತ್ತಿವೆಯಂತೆ..! “ಸ್ಟ್ರೆಪ್ಟೋಕೋಕಸ್”, “ಸ್ಟ್ಯಾಫಿಲೋಕೋಕಸ್”, “ಎಂಟೆರೋಕೋಕಸ್”, “ಸಾಲ್ಮನೆಲ್ಲಾ ಟಿಫಿಮ್ಯೂರಿಯಮ್” ಎಂಬ ನಾಲ್ಕು ಬಗೆಯ ಬ್ಯಾಕ್ಟಿರಿಯಾಗಳು ನಗರದ ಗಾಳಿಯಲ್ಲಿ ತುಂಬಾ ಕ್ರೀಯಾಶೀಲವಾಗಿವೆಯಂತೆ..! ಈ ಬ್ಯಾಕ್ಟೀರಿಯಾಗಳು ಜ್ವರವನ್ನು ಹರಡುತ್ತವಂತೆ..! ಉಸಿರಾಟದ ಸಮಸ್ಯೆಗಳಿಗೆ ಪ್ರಚೋದನಾಕಾರಿಗಳಂತೆ..!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

“ಶಿವಶಕ್ತಿವೆಲ್ ಎಸ್” ಎಂಬ ವಿಜ್ಞಾನಿಯು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಸಂಶೋಧನಾ ಪ್ರಬಂಧದಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ..! ಅವರು ”Microbial diversity in ambient air associated with seasonal meteorological parameters’  ‘ ಎಂಬ ವಿಷಯದಲ್ಲಿ ಮಾಡಿದ ಸಂಶೋಧನೆಗೆ ಕಳೆದವಾರ ಪಿಎಚ್ಡಿ ಪದವಿಯನ್ನೂ ಪಡೆದಿದ್ದಾರೆ..! ಇದರಲ್ಲಿ ಇವರು ಕಾಲೋಚಿತವಾಗಿ ವಾತಾವರಣದಲ್ಲಿ ಹುಟ್ಟಿಕೊಳ್ಳುವ ಸೂಕ್ಷ್ಮಜೀವಿಗಳ ವೈವಿಧ್ಯತೆಯನ್ನೂ ಸಹ ಗುರುತಿಸಿದ್ದಾರೆ..! ಅವರ ಈ ಸಂಶೋಧನೆಯ ಭಾಗವಾಗಿ ಬೆಂಗಳೂರಿನ ವಾತಾವರಣದಲ್ಲಿ ಕಾಲಕಾಲಕ್ಕೆ ಯಾವ ಯಾವ ಬ್ಯಾಕ್ಟಿರಿಯಾಗಳು ಸೇರಿಕೊಳ್ಳುತ್ತವೆ, ಅವು ಯಾವರೀತಿಯಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ ಎಂಬುದನ್ನೂ ಸಹ ಅಧ್ಯಯನದಿಂದ ಕಂಡುಹಿಡಿದಿದ್ದಾರೆ..! ಬೆಂಗಳೂರಿನ ವಾತಾವರಣದಲ್ಲಿನ ಗಾಳಿಯಲ್ಲಿರುವ “ರೋಗಕಾರಕ” ಬ್ಯಾಕ್ಟೀರಿಯಾಗಳು ಮತ್ತು ಫಂಗೈ(ಶಿಲೀಂಧ್ರ)ಗಳನ್ನು ಪತ್ತೆಹಚ್ಚುವುದೇ ಇವರ ಸಂಶೋಧನೆಯ ಉದ್ದೇಶವಾಗಿತ್ತಂತೆ..! ಅದೇ ರೀತಿ ನಮ್ಮ ಬೆಂಗಳೂರಿನ ವಾತಾವರಣದಲ್ಲಿರುವ ರೋಗಕಾರಕಗಳನ್ನು ಪತ್ತೆಹಚ್ಚಿ.., ಇವುಗಳೇ ನಗರದಲ್ಲಿ ಇಂದು ರೋಗಗಗಳು ಹೆಚ್ಚಾಗಲು ಕಾರಣವೆಂಬ ಆಘಾತಕಾರಿ ಅಂಶವನ್ನು ಬಯಲು ಮಾಡಿದ್ದಾರೆ..! ಕಾಲಾನುಗುಣವಾಗಿ(ಸೀಸನ್ ಗೆ ತಕ್ಕಂತೆ) ಬ್ಯಾಕ್ಟೀರಿಯಾಗಳು ವಾತಾವರಣದಲ್ಲಿ ಬೆಳವಣಿಗೆ ಹೊಂದುತ್ತಿವೆ..! ಇದೇ ಕಾರಣಕ್ಕೆ ಒಂದೊಂದು ಸೀಸನಲ್ಲಿ ಒಂದೊಂದು ರೀತಿಯ ಕಾಯಿಲೆಗಳು ಹೆಚ್ಚುತ್ತಿವೆಯಂತೆ..!
ನಗರದ ವಾತಾವರಣ “ರೋಗಕಾರಕಗಳ” ಸ್ವರ್ಗ:
ನಮ್ಮ ಬೆಂಗಳೂರಿನ ವಾತಾವರಣ ರೋಗಕಾರಕಗಳಿಗೆ ಉತ್ತಮವಾಗಿದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ..! ನಗರವೆಲ್ಲಾ ಕಸಮಯವಾಗಿದ್ದು, ನೀರಿನ ಮೂಲಗಳು ಮಲಿನವಾಗಿವೆ..! ವೇಸ್ಟ್ ಸಿರಿಂಜಿನ್ಸ್, ಅವಧಿ ಮುಗಿದ ಔಷಧಿಗಳು, ಸುಗಂಧ ದ್ರವ್ಯಗಳು, ಟೂತ್ ಪೇಸ್ಟ್, ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಭೂ ಮತ್ತು ಜಲಮಾಲಿನ್ಯಗಳು ಹೆಚ್ಚಾಗುತ್ತಿದ್ದು, ಇದೇ ಕಾರಣಕ್ಕಾಗಿ ವಾತಾವರಣದ ಗಾಳಿಯೂ ರೋಗಕಾರಕಗಳ ಬೆಳವಣಿಗೆಗೆ ಪೂರಕವಾಗಿ ಪರಿಣಮಿಸಿದೆ..! ಹೀಗೆ ಇಡೀ ಬೆಂಗಳೂರು ನಗರದ ಸಂಪೂರ್ಣ ವಾತಾವರಣ ರೋಗಕಾರಕಗಳ ಸ್ವರ್ಗವಾಗಿರುವಾಗ ರೋಗಗಳು ಹರಡದೇ ಇರುತ್ತದೆಯೇ..?
ಈ ಎಲ್ಲಾ ಕಾರಣದಿಂದ ವಾತಾವರಣದಲ್ಲಿಹೆಚ್ಚಾಗುತ್ತಿರುವ ಬ್ಯಾಕ್ಟೀರಿಯಾಗಳಿಂದ, ರೋಗಕಾರಕ ಶಿಲೀಂಧ್ರಗಳಿಂದಾಗಿ ಬೆಂಗಳೂರಿನ ಜನ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದು, ಇದರಿಂದ ಪಾರಾಗಬೇಕೆಂದರೆ ತ್ಯಾಜ್ಯಗಳ ವಿಲೇವಾರಿ ಸಮರ್ಪಕರೀತಿಯಲ್ಲಿ ಮಾಡಲೇ ಬೇಕಾಗಿದೆ..! ಇನ್ನಾದರೂ ನಮ್ಮ ನಗರವನ್ನು ನಾವು ಶುಚಿ ಆಗಿಡೋಣ..! ಎಲ್ಲಿಬೇಕಲ್ಲಿ, ತ್ಯಾಜ್ಯಗಳನ್ನು ಎಸೆಯ ಬೇಡಿ.. ನಮ್ ಬೆಂಗಳೂರು ನಮ್ಮಿಂದಲೇ, ನಮ್ಮ ಬೇಜವಬ್ದಾರಿಯಿಂದಲೇ ಹಾಳಾಗುತ್ತಿದೆ..! ಬೆಂಗಳೂರು ಮಲಿನವಾದರೇ ಸಾಯುವುದು ಉದ್ಯಾನನಗರಿಯಲ್ಲ.., ನಾವೇ..! ನಮ್ಮ ಸಾವಿಗೇ ನಾವೇ ಕಾರಣ..!

  • ಶಶಿಧರ ಡಿ ಎಸ್ ದೋಣಿಹಕ್ಲು

POPULAR  STORIES :

ನೋಡಿ ನಮ್ಮ ಸ್ಮಾರ್ಟ್ ಬಾಯ್ ಟಿವಿ9 ರೆಹಮಾನ್..! ನಾನೇ ಮಹಾರಾಜ ವೀಡಿಯೋ ನೀವಿನ್ನೂ ನೋಡಿಲ್ವಾ..?

ಟಿವಿ ಸ್ಟೂಡಿಯೋದಲ್ಲೇ ಸಖತ್ ಫೈಟಿಂಗ್..! ಬಾಬಾಗೂ, ಲೇಡಿ ಜ್ಯೋತಿಷಿಗೂ ಲೈವ್ ಜಟಾಪಟಿ..!

ಅವನ ಕಣ್ಣು ಕಿವಿಯಲ್ಲಿತ್ತು..!? ಮಾನವ ಜಗತ್ತಿನಲ್ಲಿ ಇವನೊಂದು ಅದ್ಭುತ..!

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

ಮದುವೆ ಆಯ್ತಾ..? ಡೈವೋರ್ಸ್ ಯಾವಾಗ..?!

ಸಿಹಿ ಚಹಾದ ಹಿಂದಿನ ಕಹಿ ಸತ್ಯ…!

ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ಜನಸಾಮಾನ್ಯನ ಲೈಫ್ ಚಿಂದಿ ಚಿತ್ರಾನ್ನ..! 

ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

LEAVE A REPLY

Please enter your comment!
Please enter your name here