No menu items!
11.1 C
Munich
Wednesday, April 29, 2026

ಈ ನಾಯಿಗಳಿಗಿರೋ ಬುದ್ಧಿ ಮನುಷ್ಯರಿಗಿಲ್ಲ..! ಮಗುವಿನ ಪ್ರಾಣ ಉಳಿಸಿದ ಮನಕಲುಕುವ ಸ್ಟೋರಿ..

Must read

ಮಾಂಸ ಕಂಡರೆ ಮುಗಿಬೀಳುವುದು ನಾಯಿಗಳಿಗಂಟಿದ ಚಟ. ಹೆಣ್ಣು ಹುಟ್ಟಿದರೆ ತಿಪ್ಪೆಗುಂಡಿಗೆ ಎಸೆಯುವುದು ಮಾನವನ ಕರ್ಮ. ಹಾಗೆ ಎಸೆದ ಮಗು ಕೆಲವೊಮ್ಮೆ ನಾಯಿಗಳ ಪಾಲಿಗೆ ಮೃಷ್ಠಾನ್ನ ಭೋಜನವಾಗಿದ್ದನ್ನು ಕಂಡಿದ್ದೇವೆ. ಛೇ ಮಗುವನ್ನು ನಾಯಿಗಳು ತಿನ್ನುತ್ತಿವೆಯಲ್ಲ ಅಂತ ರಕ್ಷಿಸುವ ಗೋಜಿಗೆ ಹೋಗದೇ ಸುಮ್ಮನೆ ನಿಂತಿದ್ದೇವೆ. ಆದರೆ ಅದೇ ನಾಯಿಗಳು ಮಗುವನ್ನು ರಕ್ಷಿಸಿದರೆ ಹೇಗಿರುತ್ತೆ..?
ಯಸ್.. ಅದು 1996 ಮೇ 24. ಯಾವುದೋ ಪಾಪಿ ತಾಯಿಯ ಪಾಪದ ಕರ್ಮಕ್ಕೆ ಹುಟ್ಟಿದ ಮಗು ರಸ್ತೆ ಮೇಲೆ ಅನಾಥವಾಗಿ ಬಿದ್ದಿತ್ತು. ಕೆಲ ಜನರು ಕಂಡೂ ಕಾಣದಂತೆ ಹೋದರು. ಕೆಲವರು ಯಾವ ಪಾಪಿಗೆ ಹುಟ್ಟಿದ ಮಗುವೇನೋ ಎನ್ನುತ್ತಾ ಪಾಪದ ಮಾತುಗಳನ್ನಾಡಿ ಹೋದರು. ಆದರೆ ಆ ಮಗುವನ್ನು ರಕ್ಷಿಸುವ ಗೋಜಿಗೆ ಮಾತ್ರ ಹೋಗಲಿಲ್ಲ. ಅದು ನಮ್ಮ ಕರ್ಮ ಸಮಾಜಕ್ಕಂಟಿದ ಕರ್ಮ. ಆದರೆ ಆ ದಾರಿಯಲ್ಲಿ ಹಾದು ಹೋದ ಮನುಷ್ಯತ್ವವಿಲ್ಲದ ಮನುಷ್ಯರು ನಾಚುವಂತಹ ಕೆಲಸವನ್ನು ಅಂದು ಆ ಮೂರು ನಾಯಿಗಳು ಮಾಡಿದ್ದವು. ಯಸ್ ನಾಯಿಗಳೇ..!
ರಸ್ತೆ ಮೇಲೆ ಯಾರೂ ಇಲ್ಲದಿರುವಾಗ ಮಗುವನ್ನು ಹೊತ್ತೊಯ್ದು ತಿನ್ನಲು ಕೆಲ ನಾಯಿಗಳು ಹವಣಿಸುತ್ತಿದ್ದವು. ಆದರೆ ಅಲ್ಲಿಗೆ ಬಂದ ಮೂರು ನಾಯಿಗಳು ಮಾತ್ರ ಆ ಮಗುವಿನ ರಕ್ಷಣೆಗೆ ನಿಂತುಬಿಟ್ಟಿದ್ದವು. ಮಗುವನ್ನು ತಿನ್ನಲು ಬರುವ ನಾಯಿಗಳನ್ನು ಓಡಿಸಿದವು. ಹತ್ತಿರ ಬರುವ ವಾಹನಗಳನ್ನು ಬೊಗಳುವ ಮೂಲಕ ದೂರ ಸರಿಸಿದವು. ಮಗು ಅತ್ತರೆ ಅವುಗಳು ಅಸಹಾಯಕವಾಗಿದ್ದವು.
ಆದರೆ, ಅಲ್ಲಿಗೆ ಬಂದ ಕಾರಿನಲ್ಲಿದ್ದವರು ನಾಯಿಗಳನ್ನು ಓಡಿಸಿ ಆ ಮಗುವನ್ನು ಪೊಲೀಸ್ ಸ್ಟೇಷನ್ ಗೆ ತಲುಪಿಸಿದರು. ಆ ನಾಯಿಗಳು ಅಸಹಾಯಕತೆಯಿಂದಲೇ ಹೋದವು. ಏನನ್ನೋ ರಕ್ಷಿಸಿದ, ಅಲ್ಲಿ ಮಾನವೀಯತೆ ಮರೆತು ಆ ಮಗುವನ್ನು ನೋಡುತ್ತಿದ್ದವರಿಗೆ ಪಾಠ ಕಲಿಸಿದ ಖುಷಿ ಆ ನಾಯಿಗಳ ಕಣ್ಣಲ್ಲಿ ಮೂಡಿತ್ತು. ಆದರೆ ಅಲ್ಲಿ ನಿಂತವರು, ಏನೋ ಒಂದು ಚಿಕ್ಕ ಘಟನೆ ನಡೆಯಿತೇನೋ ಎಂಬಂತೆ ಹೋದರು. ಮಾನವೀಯತೆಯನ್ನು ಮರೆತು.
ಇಷ್ಟಕ್ಕೂ ಈ ಘಟನೆ ನಡೆದಿದ್ದು, ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಲ್ಲಿ. ಈ ಫೋಟೋ ಕ್ಲಿಕ್ಕಿಸಿದ್ದು ಆಜ್ಕಾಲ್ ಎಂಬ ಬಂಗಾಳಿ ಪತ್ರಿಕೆಯ ಪತ್ರಕರ್ತ ತಪನ್ ಮುಖರ್ಜಿ. ಅಂದು ಈ ಸ್ಟೋರಿ ಎಷ್ಟು ಮಹತ್ವ ಪಡೆದಿತ್ತೋ ಗೊತ್ತಿಲ್ಲ. ಆದರೆ ಇಂದು ಆ ಒಂದು ಫೋಟೋ ಮಾನವೀಯತೆಯ ಪಾಠ ಹೇಳುತ್ತಿವೆ.

  • ರಾಜಶೇಖರ ಜೆ

POPULAR  STORIES :

ನೋಡಿ ನಮ್ಮ ಸ್ಮಾರ್ಟ್ ಬಾಯ್ ಟಿವಿ9 ರೆಹಮಾನ್..! ನಾನೇ ಮಹಾರಾಜ ವೀಡಿಯೋ ನೀವಿನ್ನೂ ನೋಡಿಲ್ವಾ..?

ಟಿವಿ ಸ್ಟೂಡಿಯೋದಲ್ಲೇ ಸಖತ್ ಫೈಟಿಂಗ್..! ಬಾಬಾಗೂ, ಲೇಡಿ ಜ್ಯೋತಿಷಿಗೂ ಲೈವ್ ಜಟಾಪಟಿ..!

ಅವನ ಕಣ್ಣು ಕಿವಿಯಲ್ಲಿತ್ತು..!? ಮಾನವ ಜಗತ್ತಿನಲ್ಲಿ ಇವನೊಂದು ಅದ್ಭುತ..!

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

ಮದುವೆ ಆಯ್ತಾ..? ಡೈವೋರ್ಸ್ ಯಾವಾಗ..?!

ಸಿಹಿ ಚಹಾದ ಹಿಂದಿನ ಕಹಿ ಸತ್ಯ…!

ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ಜನಸಾಮಾನ್ಯನ ಲೈಫ್ ಚಿಂದಿ ಚಿತ್ರಾನ್ನ..! 

ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article