ರೇಗಿಸುತ್ತಾ ಆಡಿದ ಮಾತೇ ಹಾಡಿಗೆ ಕಾರಣವಾಯ್ತು

Date:

ಹಾಡಿನ ಜಾಡು ಹಿಡಿದು….

||ಸಂಗೀತಕ್ಕೆ ಮನಸೋಲದೇ ಇರೋರು ಇದ್ದಾರ? ಖಂಡಿತಾ ಇಲ್ಲ…!‌ ಕೆಲವು ಸಿನಿಮಾ ಹಾಡುಗಳನ್ನಂತು ಪದೇ ಪದೇ ಗುನುಗುತ್ತಿರುತ್ತೇವೆ. ಕೆಲವೊಂದು ಹಾಡುಗಳಿಗೆ ಕೇಳುಗರಾದ ನಾವು-ನೀವು ನಮ್ಮದೇ ಆದ ಅರ್ಥ ಕಂಡುಕೊಂಡಿರುತ್ತೇವೆ. ಆದರೆ, ಎಷ್ಟೋ ಹಾಡುಗಳ ಬಗ್ಗೆ ನಾವು ಅಂದುಕೊಂಡಿರೋದೇ ಬೇರೆ, ರಚನೆಕಾರರು ಬರೆಯುವಾಗ ಕಲ್ಪಿಸಿಕೊಂಡಿರೋದೇ ಬೇರೆ ಆಗಿರುತ್ತೆ..!
ನಾವಿಲ್ಲಿ ಕೆಲವೊಂದು ಕನ್ನಡ ಹಾಡುಗಳ ಹುಟ್ಟಿನ ಮೂಲ ಮತ್ತು ರಚನೆಗಾರರು ಯಾವ ಅರ್ಥದಲ್ಲಿ ಬರೆದಿದ್ದಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ…||

ಭಾಗ-17 

ಬಂಗಾರದ ಮನುಷ್ಯ

ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಬಂದ ಸಿನ್ಮಾಗಳದ್ದೆಲ್ಲಾ ಒಂದು ತೂಕವಾದ್ರೆ, `ಬಂಗಾರದ ಮನುಷ್ಯ’ ಚಿತ್ರದ್ದೆ ಒಂದು ತೂಕ. ಯಾಕಂದ್ರೆ ಯಾವ ಚಿತ್ರವೂ ನೀಡಿರದ ಒಂದು ವಿಭಿನ್ನ ಮೆಸೇಜ್ ಈ ಸಿನ್ಮಾ ನಮ್ ಯೂತ್ಸ್ ಗೆ ನೀಡಿದೆ, ಈಗಲೂ ನೀಡುತ್ತೆ. ಇನ್ನು ಈ ಸಿನ್ಮಾ ಮಾಡಿದ ರೆಕಾರ್ಡ್‍ಗಳಿಗೆ ಕೊನೆಯೇ ಇಲ್ಲ. ಈಗ್ಲೂ ಸಿನ್ಮಾ ರಿಲೀಸ್ ಆದ್ರೆ ಹೌಸ್‍ಫುಲ್ ಓಡುವಷ್ಟು ಸಾಮರ್ಥ್ಯ ಬಂಗಾರದ ಮನುಷ್ಯನಿಗಿದೆ. ಟಿ.ಕೆ. ರಾಮರಾವ್  ಅವ್ರ ಕಾದಂಬರಿ ಆಧಾರಿತ ಚಿತ್ರ ಇದು. ನಿರ್ದೇಶಕ ಸಿದ್ದಲಿಂಗಯ್ಯ ಈ ಚಿತ್ರದ ಹಾಡಿನ ಜವಾಬ್ದಾರಿಯನ್ನ ನೀಡಿದ್ದು, ಆರ್.ಎನ್ ಜಯಗೋಪಾಲ್, ಹುಣಸೂರು ಕೃಷ್ಣಮೂರ್ತಿ, ಚಿ.ಉದಯಶಂಕರ್ ಅವ್ರಿಗೆ.

ಇನ್ನು ಈ ಹಾಡನ್ನ ಬರೆದದ್ದು ಆರ್.ಎನ್ ಜಯಗೋಪಾಲ್. ಚಿತ್ರದ ನಾಯಕ ವಿದ್ಯಾವಂತ, ಡಿಗ್ರಿ ಮುಗಿಸಿ ಸರ್ಕಾರಿ ಕೆಲಸದ ಮೋಹಕ್ಕೆ ಬೀಳದೆ, ಊರಿನಲ್ಲಿ ಬರಡು ಬಿದ್ದ ಭೂಮಿಯಲ್ಲಿ ಹಸಿರು ಬೆಳೆಯುವ ಕಾಯಕಕ್ಕೆ ಮುಂದಾಗುತ್ತಾನೆ. ಆದ್ರೆ ಊರಿನ ಮತ್ತೊಬ್ಬ ವ್ಯಕ್ತಿ ಇದನ್ನ ನೊಡಿ ಏನಾಗುತ್ತೆ ನಿನ್ ಕೈಲಿ ಅಂತ ರೇಗಿಸಿದಾಗ ಬರೋ ಸಾಲುಗಳೇ, ಆಗದು ಎಂದು ಕೈ ಕಟ್ಟಿ ಕುಳಿತರೆ ಅನ್ನೋ ಹಾಡು. ಕಥೆ ಕೇಳಿ ಪದ ಪೋಣಿಸೋಕೆ ಕುಳಿತ್ರು. ಎಷ್ಟೇ ಒದ್ದಾಡಿದ್ರೂ ಕೆಲಸ ಆಗ್ತಾನೆ ಇಲ್ವಲ್ಲಾ ಅಂತ ತಮ್ಮಲ್ಲೇ ತಾವು ಮಾತಾಡಿಕೊಂಡ್ರು. ಆಗ ಬಂದ ನಿರ್ದೇಶಕರು, ಆಗಲ್ಲ ಅಂತ ಕುಳಿತ್ರೆ ಏನು ಆಗಲ್ಲ, ವಿಶ್ವೇಶ್ವರಯ್ಯಾ ಸುಮ್ನೆ ಕೂತಿದ್ರೆ ಆಣೆಕಟ್ಟಾಗ್ತಾ ಇತ್ತಾ? ಶಿಲ್ಪಿಗಳು ಆಗಲ್ಲ ಅಂತ ಕೂತಿದ್ರೆ ಬೇಲೂರಾಗ್ತಿತ್ತಾ ಅಂತ ರೇಗಿಸಿದ್ರು. ತಕ್ಷಣವೇ ಸಿದ್ದಲಿಂಗಯ್ಯನವರ ಮಾತಿಗೆ ಬೆರಗಾದ ಜಯಗೋಪಾಲ್, ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಅನ್ನೋ ಸಾಲನ್ನು ಬರೆದೇ ಬಿಟ್ರು. ಇನ್ನು ಡೈರೆಕ್ಟರ್ ಕೊಟ್ಟ ಉದಾಹರಣೆಗಳನ್ನೇ ಬಳಸಿ ಎರೆಡು ಚರಣ ಕೂಡ ಬರೆದು ಮುಗಿಸಿದ್ರು. ಛೇ ನನ್ನಿಂದ ಏನಾಗುತ್ತೆ ಎಂದು ಹತಾಶೆಗೆ ಒಳಗಾಗಿ ಕುಳಿತುಕೊಳ್ಳುವ ಪ್ರತಿಯೊಬ್ಬರಿಗೂ ಈ ಹಾಡು ಸ್ಪೂರ್ತಿಯಾಗಿ ಧೈರ್ಯ ತುಂಬುತ್ತಿದೆ.

-ಅಕ್ಷತಾ

 

Share post:

Subscribe

spot_imgspot_img

Popular

More like this
Related

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ ಸೇವಿಸಿ

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ...

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌ ಬೆಂಗಳೂರು: ಗ್ಯಾರಂಟಿ...

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್ ಹಾಸನ: ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ದೇವಸ್ಥಾನದ...

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್!

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್! ಚಿನ್ನ ಖರೀದಿಗೆ...