Home ಎಲ್ಲೆಲ್ಲಿ ಏನೇನು.? ಇಲ್ಲಿದೆ ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ ಟಿಆರ್‍ಪಿ ಕಥೆ

ಇಲ್ಲಿದೆ ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ ಟಿಆರ್‍ಪಿ ಕಥೆ

0
ಇಲ್ಲಿದೆ ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ ಟಿಆರ್‍ಪಿ ಕಥೆ

ಈ ವಾರದ ಟಿಆರ್‍ಪಿ ಬಿಡುಗಡೆಯಾಗಿದೆ. ಕನ್ನಡ ಸುದ್ದಿವಾಹಿನಿಗಳಲ್ಲಿ ಎಂದಿನಂತೆ ಟಿವಿ9 ನಂಬರ್ 1 ಸ್ಥಾನದಲ್ಲಿಯೇ ಮುಂದುವರೆದಿದೆ. ಕಳೆದವಾರ 105 ಪಾಯಿಂಟ್ ಪಡೆದಿದ್ದ ಟಿವಿ9 ಈ ಬಾರಿ 121 ಪಾಯಿಂಟ್ ಪಡೆದಿದೆ.


ಕಳೆದವಾರ 75 ಪಾಯಿಂಟ್ ಗಳೊಂದಿಗೆ 2ನೇ ಸ್ಥಾನದಲ್ಲಿದ್ದ ಪಬ್ಲಿಕ್ ಟಿವಿ, ಈ ವಾರವೂ ಎರಡನೇ ಸ್ಥಾನದಲ್ಲಿದ್ದು, 81 ಪಾಯಿಂಟ್ ಪಡೆದಿದೆ.


52 ಪಾಯಿಂಟ್‍ಗಳಿಸಿರುವ ಸುವರ್ಣ ನ್ಯೂಸ್ 3ನೇ ಸ್ಥಾನದಲ್ಲಿದ್ದು, ಇದು ಕಳೆದವಾರ 48 ಪಾಯಿಂಟ್ ಗಳಿಸಿತ್ತು. ನ್ಯೂಸ್ 18ಕನ್ನಡ ಕಳೆದವಾರ 32 ಪಾಯಿಂಟ್ ಗಳೊಂದಿಗೆ 4ನೇ ಸ್ಥಾನದಲ್ಲಿತ್ತು. ಈ ವಾರವೂ ಸ್ಥಾನದಲ್ಲಿ ಯಾವುದೇ ಪಲ್ಲಟವಾಗಿಲ್ಲ. ಆದರೆ 31 ಪಾಯಿಂಟ್ ಗೆ ತೃಪ್ತಿ ಪಟ್ಟಿದೆ.


ಇನ್ನುಳಿದಂತೆ ಬಿಟಿವಿ 28 ಪಾಯಿಂಟ್ (ಕಳೆದವಾರ 27), ಪ್ರಜಾ ಟಿವಿ 18 (ಕಳೆದವಾರವ 17), ದಿಗ್ವಿಜಯ 16 ಪಾಯಿಂಟ್ (ಕಳೆದ ವಾರವೂ 16), ಕಸ್ತೂರಿ 10 ಪಾಯಿಂಟ್ (ಕಳೆದ ವಾರ 9), ಸುದ್ದಿ 9 ಪಾಯಿಂಟ್ (ಕಳೆದವಾರ 8), ರಾಜ್ ನ್ಯೂಸ್ 8 (ಕಳೆದವಾರ 9) ಪಾಯಿಂಟ್ ಪಡೆದಿವೆ.


ಹೊಸ ಸುದ್ದಿವಾಹಿನಿ ಟಿ5 ರೇಟಿಂಗ್ ಲೀಸ್ಟ್ ಗೆ ಇನ್ನೂ ಸೇರ್ಪಡೆಯಾಗಿಲ್ಲ.

LEAVE A REPLY

Please enter your comment!
Please enter your name here