ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಘೋಷಣೆ

admin
1 Min Read

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಸೇರಿದಂತೆ ಮೂವರು ಸಾಧಕರಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ವಿವಿಯ ಕುಲಪತಿ ಪ್ರೊ.ನಿರಂಜನ ವಾನಳ್ಳಿಯವರು ಮಾಹಿತಿ ನೀಡಿದ್ದು, ಸ್ಯಾಂಡರ್ ವುಡ್ ಹಿರಿಯ ನಟ ಅನಂತ್ ನಾಗ್, ಪ್ರಸಿದ್ಧ ಶಹನಾಯ್ ವಾದಕ ಎಸ್.ಬಲ್ಲೇಶ್ ಭಜಂತ್ರಿ ಹಾಗೂ ಶರತ್ ಶರ್ಮ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ ಬೆಂಗಳೂರು ವಿವಿಯ ಘಟಿಕೋತ್ಸವವನ್ನು ಕೋಲಾರದ ನಂದಿನಿ ಪ್ಯಾಲೇಸ್‌ ನಲ್ಲಿ ಶುಕ್ರವಾರ ನಡೆಸಲು ವಿವಿ ನಿರ್ಧರಿಸಿದೆ. ಈ ವಿ.ವಿಯ ಘಟಿಕೋತ್ವವ ಸಮಾರಂಭದಲ್ಲಿ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ್ ಸೇರಿದಂತೆ ಮತ್ತಿತರ ಗಣ್ಯರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿದ್ದಾರೆ ಎಂದು ಹೇಳಿದ್ದಾರೆ.

Share This Article
Leave a Comment