ರಾಜಕಾಲುವೆ ಒತ್ತುವರಿಗಳ ವಿರುದ್ಧ ಭರ್ಜರಿ ಕಾರ್ಯಾಚರಣೆ

1
105

ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿಗಳ ವಿರುದ್ಧ ಸಮರ ಸಾರಿರುವ ಬಿಬಿಎಂಪಿಯು, ಇಂದು ದಾಸರಹಳ್ಳಿ, ಯಲಹಂಕ, ಬೊಮ್ಮನಹಳ್ಳಿ ಹಾಗೂ ಮಹದೇವಪುರ ವಲಯ ಸೇರಿದಂತೆ ಒಟ್ಟು 29 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ದಾಸರಹಲ್ಳಿ ವಲಯದಲ್ಲಿ 11 ಒತ್ತುವರಿಗಳನ್ನು ತೆರವುಗೊಳಿಸಲಾಗಿದ್ದು, ಈ ಪೈಕಿ ನೆಲಗದರನಹಳ್ಳಿ ರಸ್ತೆ ರುಕ್ಮಿಣಿ ನಗರದಲ್ಲಿ ಎಲೆಕ್ಟ್ರಿಕಲ್ ಬಾಕ್ಸ್ ರೂಂ ಹಾಗೂ ಕಾಲುವೆಯ ಮೇಲಿದ್ದ ಮನೆಯ ಮೂಲೆ ಭಾಗಗಳ 4 ತಡೆಗೋಡೆ, 1 ಮೆಟ್ಟಿಲು ಜಾಗ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಇನ್ನೂ ಯಲಹಂಕ ವಲಯದಲ್ಲಿ 2 ಒತ್ತುವರಿಗಳನ್ನು ತೆರವುಗೊಳಿಸಲಾಗಿದ್ದು, ಈ ಪೈಕಿ ಕುವೆಂಪುನಗರ ವಾರ್ಡ್ ಸಿಂಗಾಪುರ ಲೇಔಟ್ ನಲ್ಲಿ ಸರ್ವೇ ಸಂಖ್ಯೆ 97 ಹಾಗೂ 100 ರಲ್ಲಿ ಸಿಂಗಾಪುರ ಕೆರೆ ಹಿಂಭಾಗದಲ್ಲಿರುವ ಲ್ಯಾಂಡ್ ಮಾರ್ಕ್ ಅಪಾರ್ಟ್ಮ್ಂಟ್ ನಿಂದ 2.4 ಅಡಿ ಅಗಲ ಹಾಗೂ 75 ಮೀಟರ್ ಉದ್ದದ ತೂಬುಗಾಲುವೆ ಒತ್ತುವರಿ ಮಾಡಿಕೊಂಡಿದ್ದು, ತೂಬುಗಾಲವೆ ಮೇಲ್ಭಾಗದಲ್ಲಿ ನಿರ್ಮಿಸಿದ್ದ ಸೆಕ್ಯೂರಿಟಿ ಕೊಠಡಿಯನ್ನು ತೆರವುಗೊಳಿಸಲಾಗಿದೆ. ಇನ್ನೂ ಕೋಣನಕುಂಟೆ ವ್ಯಾಪ್ತಿಯ ಸರ್ವೇ ಸಂಖ್ಯೆ 29 ರಲ್ಲಿ ಒತ್ತುವರಿ ಮಾಡಿಕೊಂಡಿದ್ದ 11 ಒತ್ತುರಿಗಳನ್ನು ತೆರವುಗೊಳಿಸಲಾಗಿದೆ. ಅದರಂತೆ ಬೊಮ್ಮನಹಳ್ಳಿಯಲ್ಲಿ 3 ಒತ್ತುವರಿ ತೆರವುಗೊಳಿಸಲಾಗಿದ್ದು, ಮಹದೇವಪುರದಲ್ಲಿ 2 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಇನ್ನೂ ರಾಜಕಾಲುವೆ ಒತ್ತುವರಿಯಿಂದ ನಗರದಲ್ಲಿ ಸುರಿದ ಭೀಕರ ಮಳೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಅಪಾಯ ಮನಗಂಡ ನಂತರ ಸರ್ಕಾರದ ಸೂಚನೆ ಮೇರೆಗೆ ಒತ್ತುವರಿ ವಿರುದ್ಧ ಬಿಬಿಎಂಪಿ ಜೆಸಿಬಿಗಳು ಘರ್ಜಿಸುತ್ತಿವೆ.

1 COMMENT

LEAVE A REPLY

Please enter your comment!
Please enter your name here