No menu items!
17.6 C
Munich
Wednesday, April 29, 2026

ಯಮನನ್ನೆ ಹಾಸ್ಯಮಾಡಿದ ಥ್ಯಾಂಕ್ ಗಾಡ್ ಗೆ ಶಾಕ್

Must read

ಹಿಂದೂ ದೇವತೆಗಳ ಅಪಹಾಸ್ಯ ಮಾಡುವಂತೆ ಚಿತ್ರಿಸಿರುವ ಥ್ಯಾಂಕ್ ಗಾಡ್’ ಸಿನಿಮಾವನ್ನು ನಿಷೇಧಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಅಗ್ರಹಿಸಿದೆ. ನಟ ಅಜಯ ದೇವಗನ ಅಭಿನಯದ ‘ಥ್ಯಾಂಕ್ ಗಾಡ್’ ಚಲನಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಚಲನಚಿತ್ರದಲ್ಲಿ ಹಿಂದೂ ಧರ್ಮದಲ್ಲಿ ಮೃತ್ಯುವಿನ ನಂತರ ಪ್ರತಿಯೊಬ್ಬರ ಪಾಪ-ಪುಣ್ಯಗಳನ್ನು ಲೆಕ್ಕ ಹಾಕುವ ‘ಚಿತ್ರಗುಪ್ತ’ ದೇವರು ಮತ್ತು ಮೃತ್ಯುವಿನ ನಂತರ ಆತ್ಮವನ್ನು ತೆಗೆದುಕೊಂಡು ಹೋಗುವ ‘ಯಮದೇವತೆ’ಯನ್ನು ಆಧುನಿಕ ರೂಪದಲ್ಲಿ ತೋರಿಸಲಾಗಿದೆ. ಅವರನ್ನು ನಿಷ್ಪ್ರಯೋಜಕ ಹಾಸ್ಯದ ಮಾತುಗಳನ್ನಾಡುವಂತೆ ತೋರಿಸಲಾಗಿದೆ.

 

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮದ ಚಿತ್ರಗುಪ್ತ ಮತ್ತು ಯಮ ದೇವರ ಅಪಹಾಸ್ಯವನ್ನು ನಾವು ಎಂದಿಗೂ ಸಹಿಸುವುದಿಲ್ಲ. ಈ ಟ್ರೇಲರ್ ಬಿಡುಗಡೆ ಆಗುವವರೆಗೂ ಸೆನ್ಸಾರ್ ಮಂಡಳಿ ನಿದ್ರೆ ಮಾಡುತ್ತಿತ್ತೇ ? ಸೆನ್ಸಾರ್ ಮಂಡಳಿ ಈ ಚಲನಚಿತ್ರಕ್ಕೆ ಸರ್ಟಿಫಿಕೇಟ್ ನೀಡಬಾರದು, ಇಲ್ಲದಿದ್ದರೆ ನಾವು ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡುತ್ತಾ ರಾಜ್ಯ ಹಾಗೂ ಕೇಂದ್ರ ಗೃಹಸಚಿವಾಲಯವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಈ ಚಲನಚಿತ್ರದ ಮೇಲೆ ನಿಷೇಧ ಹೇರಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಬೆಂಗಳೂರಿನಲ್ಲಿ ಆಗ್ರಹಿಸಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article