ಒಂದು ರೂಪಾಯಿಯೂ ಇಲ್ಲದವನು ಸಂಜೆಯೊಳಗೆ ದುಡ್ಡು ಉಳಿಸೋ ಕಥೆ..!

0
225

ಆ ಹುಡುಗನ ಬಳಿ ಒಂದೇ ಒಂದು ರೂಪಾಯಿ ದುಡ್ಡಿರಲ್ಲ..! ಬೆಳಗ್ಗೆ ಎದ್ದರೆ ಅವನ ಕಣ್ಣಿಗೆ ಬೀಳೋದು ಅಪ್ಪ ಹಿಂದಿನ ರಾತ್ರಿ ಕುಡಿದು ಬಿಸಾಕಿದ್ದ ಬಾಟಲಿಗಳು..! ಅದೇ ಅವನ ಇನ್ವೆಸ್ಟ್ ಮೆಂಟ್..! ಅಲ್ಲಿಂದ ಅವನು ಸಂಜೆಯೊಳಗೆ ಏನೇನು ಮಾಡ್ತಾನೆ ಅನ್ನೋದಿದಿಯಲ್ಲ, ಅದು ನಿಮ್ಮನ್ನು ಅದ್ಭುತ ಪ್ರಪಂಚಕ್ಕೆ ಕರ್ಕೊಂಡು ಹೋಗುತ್ತೆ..! ಆ ಹುಡುಗ ಅದೆಷ್ಟು ಗ್ರೇಟ್ ಅನಿಸಿಬಿಡುತ್ತೆ..! ಒಂದೇ ಒಂದು ರೂಪಾಯಿ ದುಡ್ಡಿಲ್ಲದ ಹುಡುಗ ಸಂಜೆಯೊಳಗೆ ಹಣ ಉಳಿಸಿ ಹುಂಡಿಗೆ ಹಾಕ್ತಾನೆ ಅಂದ್ರೆ ಅವನು ನಿಜಕ್ಕೂ ಗ್ರೇಟ್..! ಆದ್ರೆ ಹಾಗೆ ಉಳಿಸೋಕೆ ಅವನು ಏನೇನೋ ಮಾಡ್ತಾನಲ್ಲಾ, ಅದೇ ಇಲ್ಲಿ ಇಂಟರೆಸ್ಟಿಂಗ್..! ಇದು ನೀವು ನೋಡಲೇಬೇಕಾದ ವೀಡಿಯೋಗಳಲ್ಲೊಂದು. ಕನ್ನಡದ ಬೆಸ್ಟ್ ಶಾರ್ಟ್ ಫಿಲ್ಮ್ ಗಳಲ್ಲಿ ಇದೂ ಒಂದು ಅಂದ್ರೆ ಖಂಡಿತ ತಪ್ಪಲ್ಲ..! ಡಾಟಾ ಖಾಲಿ ಆಗುತ್ತೆ, ಅಯ್ಯೋ ಯಾರು ನೋಡ್ತಾರೆ ಅಂತೆಲ್ಲ ಇದನ್ನು ನೋಡೋದು ಮಿಸ್ ಮಾಡ್ಕೊಂಡ್ರೆ ನೀವು ಖಂಡಿತ ಒಂದು ಅದ್ಭುತ ವೀಡಿಯೋ ಮಿಸ್ ಮಾಡ್ಕೋತೀರಿ..! ಕೆಲವು ಅವಾರ್ಡ್ ಸಹ ಪಡೆದಿರೋ ಈ ಕಿರುಚಿತ್ರದ ಹೆಸರು `ಅಂಬಾನಿ..ದಿ ಇನ್ವೆಸ್ಟರ್..’  ವಿನೋದ್ ನಾಗ್ ಅನ್ನೋರು ಕಥೆ-ಚಿತ್ರಕತೆ ಹಾಗೂ ನಿರ್ದೇಶನ ಮಾಡಿದ್ದಾರೆ. ಮಾಸ್ಟರ್ ಮನೋಜ್ ಅನ್ನೋ ಹುಡುಗ ತುಂಬಾ ಇಷ್ಟವಾಗ್ತಾನೆ..! ಮಿಸ್ ಮಾಡದೇ ಈ ವೀಡಿಯೋ ನೋಡಿ..! 100% ನಿಮಗೆ ಇಷ್ಟವಾಗುತ್ತೆ…!  ಅಂಬಾನಿ ಟೀಮಿಗೆ ಹ್ಯಾಟ್ಸಾಫ್..

Video :

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com