ಇದನ್ನು ಓದಿ.. ಕಲಾಂ ವ್ಯಕ್ತಿತ್ವ ಎಂಥದ್ದು ಅಂತ ಗೊತ್ತಾಗಿಬಿಡುತ್ತೆ..!

Date:

ಅವರು ಡಾ. ಎ.ಪಿ.ಜೆ ಅಬ್ದುಲ್ ಕಲಾಂ..! ನಿಜವಾದ `ಭಾರತರತ್ನ’ ಎ.ಪಿ.ಜೆ ಅಬ್ದುಲ್ ಕಲಾಂ..!
ಅವರು ಎಲ್ಲಿ ಹುಟ್ಟಿದ್ರು..? ಎಲ್ಲಿ ಬೆಳೆದ್ರು..? ಏನೇನೆಲ್ಲಾ ಮಾಡಿದ್ರು..? ಅದು ಇಡೀ ವಿಶ್ವಕ್ಕೇ ಗೊತ್ತು..! ಆದ್ರೆ ಅವರ ಜೀವನದ ಕೆಲವು ಪುಟ್ಟ ಸ್ಟೋರಿಗಳಿವೆ..! ಅಂತಹ ವಿಚಾರಗಳೇ ಅವರನ್ನು ಮುಗಿಲೆತ್ತರಕ್ಕೆ ಏರಿಸೋದು..!

ಕಲಾಂ ರವರು ಡಿ.ಆರ್.ಡಿ.ಓದಲ್ಲಿ ಕಾರ್ಯನಿರ್ವಹಿಸುವಾಗ, ಅಲ್ಲಿನ ಕಾಂಪೌಂಡ್ ಮೇಲೆ ಗ್ಲಾಸ್ ಪೀಸ್ ಗಳನ್ನು ಹಾಕಬೇಕಂತ ಚರ್ಚೆ ನಡೀತಿತ್ತಂತೆ. ಇದಕ್ಕೆ ಅಬ್ದುಲ್ ಕಲಾಂ ಸುತಾರಾಂ ಒಪ್ಪಲಿಲ್ಲವಂತೆ..! ಕಾರಣವೇನು ಗೊತ್ತಾ..? ಹಾಗೇನಾದ್ರೂ ಗ್ಲಾಸ್ ಪೀಸ್ ಗಳನ್ನು ಕಾಂಪೌಂಡ್ ಮೇಲೆ ಹಾಕಿದ್ರೆ ಹಕ್ಕಿಗಳು ಬಂದು ಕೂರಲಾಗುವುದಿಲ್ಲ. ಅವುಗಳಿಗೆ ವಿಶ್ರಾಂತಿ ತೆಗೆದುಕೊಳ್ಳೋಕೆ ಕಷ್ಟವಾಗಬಹುದು, ರಾತ್ರಿ ಗ್ಲಾಸ್ ಇರೋದು ಗೊತ್ತಿಲ್ಲದೇ ಬಂದು ಕೂತರೆ ಪಕ್ಷಿಗಳಿಗೆ ಗಾಯವಾಗಬಹುದು ಅಂತ..!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಮಕ್ಕಳು ಹಾಗೂ ಯುವ ಸಮುದಾಯ ಅಬ್ದುಲ್ ಕಲಾಂರನ್ನು ಭೇಟಿ ಆಗ್ಬೇಕು ಅಂತ ಪತ್ರ ಬರೆದರೆ ಯಾವತ್ತೂ ಇಲ್ಲ ಅಂತಿರ್ಲಿಲ್ವಂತೆ..! ಅವರನ್ನು ರಾಷ್ಟ್ರಪತಿ ಭವನಕ್ಕೆ ಕರೆಸಿ, ಅವರ ಜೊತೆ ಕೂತು ಮಾತನಾಡಿ, ಅವರ ಐಡಿಯಾಗಳನ್ನು ಆಲಿಸುತ್ತಿದ್ರಂತೆ. ಅದಕ್ಕೇ ಅಲ್ವೇ ಅವರು ಮಕ್ಕಳಿಗೆ ಸಖತ್ ಇಷ್ಟ..!

ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ ಅಂತ ಆದೇಶ ಬರುವಾಗ ಅವರು ಕಾಲೇಜ್ ಒಂದರಲ್ಲಿ ಉಪನ್ಯಾಸ ಮಾಡ್ತಿದ್ರು. ಆ ಸಂದರ್ಭದಲ್ಲಿ ಕರೆಂಟ್ ಹೋಗುತ್ತೆ. ಆದ್ರೆ ಅದು ಕಲಾಂರಿಗೆ ಉಪನ್ಯಾಸ ನೀಡೋದಕ್ಕೆ ತೊಂದರೆ ಅನಿಸೋದೇ ಇಲ್ಲ. ವೇದಿಕೆಯಿಂದ ಕೆಳಗಿಳಿದು ಬಂದು, ಅಲ್ಲಿದ್ದ 400 ವಿದ್ಯಾರ್ಥಿಗಳನ್ನೂ ತಮ್ಮ ಸುತ್ತಲೂ ನಿಲ್ಲಿಸಿಕೊಂಡು, ಉಪನ್ಯಾಸ ಮುಂದುವರೆಸಿದ್ರು ಡಾ. ಅಬ್ದುಲ್ ಕಲಾಂ..!

ರಾಷ್ಟ್ರಪತಿಯಾದಾಗ ಅಬ್ದುಲ್ ಕಲಾಮರು ಅವರ ಆಸ್ತಿಪಾಸ್ತಿ, ಸಂಬಳ, ಎಲ್ಲವನ್ನೂ ಗ್ರಾಮೀಣಾಭಿವೃದ್ಧಿಗೆ ಶ್ರಮಿಸೋ ಸಂಸ್ಥೆಯೊಂದಕ್ಕೆ ದಾನವಾಗಿ ನೀಡಿಬಿಟ್ರು. ಯಾಕೆ ಹೀಗೆ ಮಾಡಿದ್ರಿ ಅಂತ ಅವರ ಸ್ನೇಹಿತರು ಕೇಳಿದ್ದಕ್ಕೆ `ನಾನೀಗ ರಾಷ್ಟ್ರಪತಿ, ನಾನು ಸಾಯೋ ತನಕ ಸರ್ಕಾರ ನನ್ನೆಲ್ಲಾ ಖರ್ಚು ವೆಚ್ಚ ನೋಡಿಕೊಳ್ಳುತ್ತೆ, ನಂಗ್ಯಾಕೆ ಇದೆಲ್ಲಾ?’ ಅಂದರಂತೆ..!

ಯಾರಾದ್ರೂ ಏನಾದ್ರೂ ಉಡುಗೊರೆ ನೀಡಿದ್ರೆ, ಅದಕ್ಕೆ ಪ್ರತಿಯಾಗಿ ಅಬ್ದುಲ್ ಕಲಾಮರು ಅವರ ಕೈ ಬರಹದಲ್ಲೇ ಧನ್ಯವಾದ ಪತ್ರ ಕಳಿಸ್ತಿದ್ರಂತೆ..! ಪುಟ್ಟದೊಂದು ಕಾರ್ಡ್ ತರಹ ಇದ್ದ ಅದರಲ್ಲಿ, ಅವರದೇ ಹ್ಯಾಂಡ್ ರೈಟಿಂಗ್ ನಲ್ಲಿ ಥ್ಯಾಂಕ್ಸ್ ಹೇಳುತ್ತಿದ್ರಂತೆ..!

ಆಗ ಡಾ. ಅಬ್ದುಲ್ ಕಲಾಂರವರು ಡಿ.ಆರ್.ಡಿ.ಓದಲ್ಲಿದ್ರು, ಒಮ್ಮೆ ಅವರು ಕಾಲೇಜು ಕಾರ್ಯಕ್ರವೊಂದಕ್ಕೆ ಮುಖ್ಯ ಅತಿಥಿಯಾಗಿ ಹೋಗ್ಬೇಕಿತ್ತು. ಆದ್ರೆ ಹಿಂದಿನ ದಿನ ರಾತ್ರಿಯೇ ಕಾರ್ಯಕ್ರಮ ನಡೀಬೇಕಿದ್ದ ಜಾಗಕ್ಕೆ ಹೋಗಿ ಅಲ್ಲಿದ್ದ ವಿದ್ಯಾರ್ಥಿಗಳಿಗೆ ಶಾಕ್ ನೀಡಿದ್ರಂತೆ..! `ನಾಳಿನ ಕಾರ್ಯಕ್ರಮ ಯಶಸ್ವಿಯಾಗೋಕೆ ಯಾರೆಲ್ಲಾ ನಿಜವಾಗಿ ಶ್ರಮಿಸುತ್ತಿದ್ದಾರೋ, ಅವರನ್ನು ಮಾತಾಡಿಸ್ಕೊಂಡು ಹೋಗೋಕೆ ಬಂದೆ ಅಷ್ಟೆ’ ಅಂದ್ರಂತೆ ಕಲಾಂ..!

ಮತ್ತೊಂದು ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಲಾಂ ಹೋಗಿದ್ರು, ಅಲ್ಲಿ 50-60 ಮಕ್ಕಳು ಅವರನ್ನು ಸುತ್ತುವರಿದುಬಿಟ್ರು, ಎಲ್ಲರಿಗೂ ಕಲಾಂ ಅವರ ಜೊತೆ ಫೋಟೋ ತೆಗೆಸಿಕೊಳ್ಳುವ ಆಸೆ..! ಆದ್ರೆ ಅಷ್ಟರಲ್ಲೇ ಕಾರ್ಯಕ್ರಮಕ್ಕೆ ತಡವಾಗಿದ್ದರಿಂದ, ಆಯೋಜಕರು ಕಲಾಂ ಅವರನ್ನು ವೇದಿಕೆಗೆ ಬರುವಂತೆ ಕೇಳಿಕೊಳ್ತಿದ್ರು. ಮಕ್ಕಳು ಕಲಾಂ ಅವರನ್ನು ಬಿಡುತ್ತಲೇ ಇರ್ಲಿಲ್ಲ. ಆಗ ಆಯೋಜಕರು ಮಕ್ಕಳ ಮೇಲೆ ಜೋರಾಗಿ ಗದರಿಬಿಡ್ತಾರೆ..! ತಕ್ಷಣವೇ ಕಲಾಂ ಉತ್ತರ `ನಾನು ಎಲ್ಲಾ ಮಕ್ಕಳ ಜೊತೆ ಫೋಟೋ ತೆಗೆಸಿಕೊಳ್ಳೋ ತನಕ ವೇದಿಕೆ ಹತ್ತಲ್ಲ..’! ಅಷ್ಟೆ..! ಆಯೋಜಕರು ಅಷ್ಟೂ ಮಕ್ಕಳು ಅವರ ಜೊತೆ ಫೋಟೋ ತೆಗೆಸಿಕೊಳ್ಳುವ ತನಕ ಕಾದು ನಂತರ ಕಾರ್ಯಕ್ರಮ ಆರಂಭಿಸಿದ್ರು..!

ಇತ್ತೀಚೆಗೆ ವಾರಣಾಸಿ ಐಐಟಿ ವಿಶ್ವವಿದ್ಯಾನಿಲಯದ ಘಟಿಕೋತ್ಸವಕ್ಕೆ ಎ.ಪಿ.ಜೆ ಅಬ್ದುಲ್ ಕಲಾಂ ಮುಖ್ಯ ಅತಿಥಿಯಾಗಿ ಹೋಗಿದ್ರು. ಅಲ್ಲಿ ವೇದಿಕೆ ಮೇಲೆ 5 ಕುರ್ಚಿಗಳಿತ್ತು. ಮಧ್ಯದಲ್ಲೊಂದು ದೊಡ್ಡ ಕುರ್ಚಿ ಇಡಲಾಗಿತ್ತು. ಅದು ಕಲಾಂ ಅವರಿಗೆ ಮೀಸಲು. ಆದ್ರೆ ` ಆ ಕುರ್ಚಿ, ಉಳಿದ ಗಣ್ಯರಿಗೆ ಹಾಕಲಾಗಿರೋ ಕುರ್ಚಿಗಿಂತ ದೊಡ್ಡದಿದೆ, ನಾನು ಅದರಲ್ಲಿ ಕೂರೋದಿಲ್ಲ’ ಅಂತ ಕುಲಪತಿಗಳನ್ನು ಅದರಲ್ಲಿ ಕೂರಿಸೋ ಪ್ರಯತ್ನ ಮಾಡ್ತಾರೆ..! ಆದ್ರೆ ಅದು ಸಾಧ್ಯವೇ..? ಕಲಾಮರ ಎದುರು ಯಾರು ತಾನೇ ದೊಡ್ಡ ಕುರ್ಚಿಯಲ್ಲಿ ಕೂರಲು ಒಪ್ತಾರೆ..? ಕೊನೆಗೆ ಆಯೋಜಕರು ಮತ್ತೊಂದು ಸಾಮಾನ್ಯ ಕುರ್ಚಿ ತರಸಿ ಹಾಕಿಸಿದ ಮೇಲೆ ಕಲಾಮರು ಆಸೀನರಾದರಂತೆ..!

ಡಿ.ಆರ್.ಡಿ.ಓದಲ್ಲಿ ಕೆಲಸ ಮಾಡುತ್ತಿದ್ದಾಗ ಅವರ ಸಹೋದ್ಯೋಗಿಯೊಬ್ಬರಿಗೆ ಕೆಲಸದ ಒತ್ತಡದಿಂದಾಗಿ ಅಲ್ಲಿ ನಡೆಯುತ್ತಿದ್ದ ಪ್ರಸಿದ್ಧ ವಸ್ತು ಪ್ರದರ್ಶನಕ್ಕೆ ಅವರ ಮಕ್ಕಳನ್ನು ಕರೆದುಕೊಂಡು ಬರಲು ಸಾಧ್ಯವಾಗೋದಿಲ್ಲ. ಆದ್ರೆ ಇಂತಹ ಪ್ರದರ್ಶನಗಳು ಮಕ್ಕಳಿಗೆ ತುಂಬಾ ಸಹಕಾರಿ ಎಂಬುದರ ಅರಿವಿದ್ದ ಅಬ್ದುಲ್ ಕಲಾಂ, ತಮ್ಮ ಸಹೋದ್ಯೋಗಿಯ ಮನೆಗೆ ಹೋಗಿ, ಅವರ ಮಕ್ಕಳನ್ನು ವಸ್ತು ಪ್ರದರ್ಶನಕ್ಕೆ ಕರೆದುಕೊಂಡು ಬಂದು, ಸಹೋದ್ಯೋಗಿಗೆ ಶಾಕ್ ನೀಡಿದ್ರಂತೆ…!

ಸಾಮಾನ್ಯವಾಗಿ `ಯಾಹೂ ಆನ್ಸರ್’ನಲ್ಲಿ ವಿಶ್ವದ ಮೂಲೆಮೂಲೆಯ ಜನಸಾಮಾನ್ಯರು ಪ್ರಶ್ನೆಗಳನ್ನು ಕೇಳೋದು ಮಾಮೂಲಿ. ಆದ್ರೆ ಅಬ್ದುಲ್ ಕಲಾಮರು ಸ್ವತಃ `ಯಾಹೂ ಆನ್ಸರ್’ನಲ್ಲಿ ಪ್ರಶ್ನೆ ಹಾಕಿದ್ರು..! `ಈ ಗ್ರಹದಿಂದ ಉಗ್ರಗಾಮಿ ಚಟುವಟಿಕೆಗಳನ್ನು ಹೊಡೆದೋಡಿಸೋದು ಹೇಗೆ..?’ ಅಂತ. ಅದನ್ನು ನೋಡಿ, ರವಿಶಂಕರ್ ಗುರೂಜಿ, ಲಿಯಾಂಡರ್ ಪೇಸ್, ಕಿರಣ್ ಬೇಡಿಯವರೆಲ್ಲಾ ಅದಕ್ಕೆ ಉತ್ತರ ನೀಡಿದ್ರು.

ರಾಷ್ಟ್ರಪತಿಗಳಾದ ಮೇಲೆ ಕೇರಳಕ್ಕೆ ಭೇಟಿ ನೀಡಿದಾಗ, ರಾಷ್ಟ್ರಪತಿಗಳ ಅತಿಥಿಗಳಾಗಿ ಯಾರನ್ನು ಅವರ ಜೊತೆ ಭೋಜನಕ್ಕೆ ಆಹ್ವಾನಿಸಿದ್ರು ಗೊತ್ತಾ..? ಒಬ್ಬರು ರಸ್ತೆಬದಿಯಲ್ಲಿ ಶೂ ಮಾರೋರನ್ನು, ಮತ್ತೊಬ್ಬರು ಪುಟ್ಟ ಹೋಟೆಲ್ ಮಾಲಿಕರನ್ನು..! ಹೌದು, ಈ ಹಿಂದೆ ಕಲಾಮರು ಕೇರಳದಲ್ಲಿದ್ದಾಗ ಇವರಿಬ್ಬರ ಪರಿಚಯವಿತ್ತಂತೆ. ಆತ್ಮೀಯರೂ ಆಗಿದ್ರಂತೆ..! ಹಾಗಾಗಿ ಕೇರಳದ ರಾಜಭವನಕ್ಕೆ ಇವರಿಬ್ಬರನ್ನೂ `ರಾಷ್ಟ್ರಪತಿ ಅತಿಥಿ’ಯಾಗಿ ಆಹ್ವಾನಿಸಿದ್ರು ಕಲಾಂ ಚಾಚಾ..!

ಹೀಗೆ ಅವರ ಜೀವನದುದ್ದಕ್ಕೂ ಇಂತಹ ಅದೆಷ್ಟೋ ಸ್ಟೋರಿಗಳಿವೆ. ದೇಶಕ್ಕಾಗಿ ನಾನು, ನಮಗಾಗಿ ದೇಶ ಅಂತ ಇರುವ ಅಷ್ಟೂ ದಿನ ದೇಶದ ಹೆಸರನ್ನು ವಿಶ್ವಮಟ್ಟದಲ್ಲಿ ಮೆರೆಸಲು ಶ್ರಮಿಸಿದ ಅಬ್ದುಲ್ ಕಲಾಮರು ದೇಶದ ಸ್ಪೂರ್ತಿ..! ಅವರು ಯಾವತ್ತೂ ಸುಸ್ತಾಗಿ ಮಲಗಲೇ ಇಲ್ಲ..! ಯಾವತ್ತೂ ದಣಿದಿದ್ದೇನೆ ಅಂತ ಹೇಳಲೇ ಇಲ್ಲ..! ರಾಷ್ಟ್ರಪತಿಯಂತಹ ಅತ್ಯುನ್ನತ ಹುದ್ದೆ ಏರಿದ ಮೇಲೂ ಉಪನ್ಯಾಸ ನೀಡುವುದನ್ನು ನಿಲ್ಲಿಸಲಿಲ್ಲ..! ಕೊನೆಯುಸಿರೆಳೆಯುವ ಸ್ವಲ್ಪ ಸಮಯದ ಮುಂಚೆಯೂ ಉಪನ್ಯಾಸ ನೀಡುತ್ತಲೇ ಕುಸಿದು ಬಿದ್ರು..! ಅವರಿಗೆ ಅವರೇ ಸಾಟಿ..! ಅವರನ್ನು ಕಳೆದುಕೊಂಡಿದ್ದು ಭಾರತಕ್ಕೆ ತುಂಬಲಾರದ ನಷ್ಟ..! ಅವರಿಲ್ಲದಿದ್ದರೂ ಅವರ ಸಂಶೋಧನೆಗಳು, ಅವರ ಕೊಡುಗೆಗಳು ಎಂದೆಂದಿಗೂ ಶಾಶ್ವತ.. ಅವರಿಲ್ಲ..ಅಂತ ಕಣ್ಣೀರು ಹಾಕೋದು ಬೇಡ, ಅದರ ಬದಲು ಅವರ ಕನಸಿನ ಭಾರತ-2020 ಕಟ್ಟುವತ್ತ ಶ್ರಮಿಸೋಣ. ಶ್ರೀಮಂತ, ಆರೋಗ್ಯ ಭಾರತದ ಅವರ ಕನಸು ನನಸಾಗಿಸಿ `ಕಲಾಂ ಭಾರತ’ ಸೃಷ್ಟಿಸುವತ್ತ ಪಣತೊಡೋಣ..!
ಮತ್ತೆ ಹುಟ್ಟಿಬನ್ನಿ ಕಲಾಂ..!

If you Like this Story , Like us on Facebook  The New India Times

 

POPULAR  STORIES :

ಕರ್ನಾಟಕದ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ “ಪ್ರೇಮ”…! ಅಷ್ಟಕ್ಕೂ ಇವರು ಬಸ್ ಡ್ರೈವರ್ ಆಗಿದ್ದು ಯಾಕೆ ಗೊತ್ತಾ..?

ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!

ಇವರೆಂಥಾ ಸ್ವಾಭಿಮಾನಿ, ಸ್ವಾವಲಂಭಿ ಅಜ್ಜಿ..! ವಯಸ್ಸು 78, ಆದ್ರೂ…!

ಬೆಂಗಳೂರಿಗೂ ಬಂತು ತ್ರಿಡಿ ಬಾಬಾ ಫೋಟೋ..! ಈ ಫೋಟೋದ ವಿಶೇಷತೆ ಏನು ಗೊತ್ತಾ..?

ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!

10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

 ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...