ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಜಹೀರ್ ಖಾನ್ ನಿವೃತ್ತಿ..! ಜಹೀರ್ ನಿವೃತ್ತಿ ಘೋಷಿಸಿದ್ದೇಕೆ..?

0
106

ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೆಲವೊಂದು ಅಭೂತಪೂರ್ವ ಕ್ಷಣಗಳನ್ನೆಂದೂ ಮರೆಯಲು ಸಾಧ್ಯವೇ ಇಲ್ಲ..! ಅಂತಹ ಮರೆಯಲಾಗದ ಕ್ಷಣಗಳಲ್ಲಿ 2011ರ ವಿಶ್ವಕಪ್ ಕೂಡ ಒಂದು..! ಆ ವಿಶ್ವಕಪ್ ನಲ್ಲಿ ಭಾರತ ವಿಶ್ವವಿಜೇತ ತಂಡವಾಗಿ ಹೊರಹೊಮ್ಮಿತ್ತು..! ಆ ವಿಶ್ವವಿಜೇತ ತಂಡದ ಎಲ್ಲಾ ಸದಸ್ಯರೂ ಒಂದಲ್ಲಾ ಒಂದು ರೀತಿಯಲ್ಲಿ ಆರಂಭದ ಪಂದ್ಯಗಳಿಂದ ಕೊನೆಯ ಪಂದ್ಯದವರೆಗೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ..! ಅದೇ ರೀತಿ ಆ ಒಬ್ಬ ವೇಗದ ಬೌಲರ್ ಕೂಡ ಸಿಂಹಸ್ವಪ್ನವಾಗಿ ಎದುರಾಳಿಗಳನ್ನು ಕಾಡಿದ್ದಾರೆ…! ಆ ವಿಶ್ವಕಪ್ ಬಳಿಕ ಮತ್ತೊಂದು ವಿಶ್ವಕಪ್ ಮುಗಿದರೂ ಆ 2011ರ ವಿಶ್ವಕಪ್ ಫೈನಲ್ ಪಂದ್ಯವನ್ನು ಯಾವತ್ತೂ ಭಾರತೀಯ ಕ್ರಿಕೇಟ್ ಆಟಗಾರರು ಮರೆಯಲು ಚಾನ್ಸೇ ಇಲ್ಲ..! ಆ ಪಂದ್ಯದಲ್ಲಿ ಗೌತಮ್ ಗಂಭೀರ್, ಮತ್ತು ನಾಯಕ ಧೋನಿ ಅಬ್ಬರಿಸಿ ತಂಡವನ್ನು ಗೆಲ್ಲಿಸಿದ್ದು ಎಲ್ಲರ ಕಣ್ಣಲ್ಲೂ ಇನ್ನೂ ಹಾಗೇ ಇದೆ..! ಆದ್ರೆ ಇಂಡಿಯಾ ಬ್ಯಾಟಿಂಗ್ ಗೆ ಬರುವ ಮೊದಲು ಶ್ರೀಲಂಕನ್ನರನ್ನು ಕಾಡಿದ ಆ ವೇಗಿಯನ್ನು ನೆನಪು ಮಾಡಿಕೊಳ್ಳಿ..! ಆ ವೇಗದ ಬೌಲರ್ ಮತ್ಯಾರೂ ಅಲ್ಲ.. ಒನ್ ಅಂಡ್ ಓನ್ಲೀ ಜಹೀರ್ ಖಾನ್…!
ಯಸ್, 2011ರ ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದವರಲ್ಲಿ ಜಹೀರ್ ಖಾನ್ ಕೂಡ ಒಬ್ಬರು..! ಅಂತಿಮ ಪಂದ್ಯದಲ್ಲಂತೂ ಇವರು ಪ್ರದರ್ಶಿಸಿದ ಬೌಲಿಂಗ್ ಅಸಾಧಾರಣ.., ಅಮೇಜಿಂಗ್..! ಸತತ ಮೂರು ಮೇಡಿನ್ ಓವರ್ಗಳನ್ನೆಸೆದು ಪಂದ್ಯದ ಮೇಲೆ ಭಾರತ ಹಿಡಿತ ಸಾಧಿಸಲು ನೆರವಾಗಿದ್ರು..! ಆರಂಭದಲ್ಲೇ ಉಪುಲ್ ತರಂಗರ ವಿಕೆಟ್ ಪಡೆದು ಭಾರತ ಗೆಲ್ಲುವ ಭರವಸೆಯನ್ನು ಶುರುವಾತಿನಲ್ಲೇ ಮೂಡಿಸಿದ್ದರು..! ಅಷ್ಟೇ ಅಲ್ಲದೇ ದಿಲ್ಷಾನ್ ಗೂ ತಲೆನೋವಾಗಿ ಪರಿಣಮಿಸಿದ್ರು..! ಶ್ರೀಲಂಕಾದ ರನ್ ಓಟಕ್ಕೆ ಕಡಿವಾಣವನ್ನಾಕಿದ್ರು..! ಒಂದುವೇಳೆ ಇವರು ಕಡಿವಾಣ ಹಾಕದೇ ಇದ್ದಿದ್ರೆ ಶ್ರೀಲಂಕಾ 300ರ ಗಡಿ ದಾಟಿಯೇ ದಾಟ್ತಾ ಇತ್ತು..! ಆಗ ಭಾರತ ಗೆಲ್ಲಲು..ಹರಸಾಹಸ ಪಡಬೇಕಾಗ್ತಾ ಇತ್ತು..! ಅಂತಿಮ ಹಂತದಲ್ಲಿ ಬ್ಯಾಟ್ಸ್ ಮ್ಯಾನ್ ಗಳು ಒತ್ತಡಕ್ಕೆ ಸಿಲುಕ ಬೇಕಾಗ್ತಾ ಇತ್ತು..! ಆದ್ರೆ ಅವರೆಲ್ಲಾ ಆರಾಮಾಗಿ ಲೀಲಾಜಾಲವಾಗಿ ಬ್ಯಾಟ್ ಬೀಸಲು..ನೆರವಾಗುವಂತೆ ಶ್ರೀಲಂಕನ್ನರನ್ನು ನಿಯಂತ್ರಿಸಿಸದ್ದೇ ಇದೇ ಜಹೀರ್ ಖಾನ್..!
ಇದು ಈ ವೇಗದ ಬೌಲರ್ ಭಾರತ ಕ್ರಿಕೇಟ್ ಗೆ ಅದೆಂಥಾ ಕೊಡುಗೆಯನ್ನು ನೀಡಿದ್ದರು ಅನ್ನೋದಕ್ಕೆ ಸಣ್ಣ ಉದಾಹರಣೆ ಮಾತ್ರ..! ಆದ್ರೆ ಜಹೀರ್ ಖಾನ್ರ ಕೊಡುಗೆ ಇಷ್ಟು ಮಾತ್ರವಲ್ಲಾ.. 2000ದ ದಶಕದಲ್ಲಿ ಭಾರತದ ವೇಗದ ಬೌಲಿಂಗ್ ನೇತೃತ್ವವನ್ನುವಹಿಸಿದ್ದವರೂ ಇವರೇ..! ಅಷ್ಟೇ ಅಲ್ಲ.. ಅಗತ್ಯವಿದ್ದಾಗ ಬ್ಯಾಟಿಂಗ್ನಲ್ಲೂ ಮಿಂಚಿದ್ರು..! ಅದೆಷ್ಟೋ ಪಂದ್ಯಗಳಲ್ಲಿ ಕೊನೆಯ ಟೈಮ್ನಲ್ಲಿ ಬ್ಯಾಟ್ ಬೀಸಿ ಭಾರತಕ್ಕೆ ಗೆಲುವು ತಂದು ಕೊಟ್ಟಿದ್ದೂ ಇದೆ..! ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಭಾರತದ ವೇಗದ ಬೌಲಿಂಗ್ನ ಜೀವ ಆಗಿದ್ದ ಈ ಜಹೀರ್ ಖಾನ್.. 92 ಟೆಸ್ಟ್, 200 ಏಕದಿನ 17 ಟಿ20 ಪಂದ್ಯಗಳನ್ನು ಭಾರತದ ಪರ ಆಡಿದ್ದಾರೆ..! ಅತೀ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ಗಳ ಪೈಕಿ ಜಹೀರ್ ನಾಲ್ಕನೇ ಸ್ಥಾನದಲ್ಲಿದ್ದಾರೆ..! ವೃತ್ತಿ ಬದುಕಿನ ಬಹಳಷ್ಟೂ ದಿನ ಗಾಯದ ಸಮಸ್ಯೆಯಿಂದಲೇ ಕಾಲಕಳೆದ ಈ ಪ್ರತಿಭಾವಂತ ಬೌಲರ್ ಅವಕಾಶ ಸಿಕ್ಕಾಗೆಲ್ಲಾ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು..! ಆದರೆ ಇವರಿಗೆ ಕಾಡ್ತಾ ಇದ್ದ ಗಾಯದ ಸಮಸ್ಯೆಯೇ ಇವರ ಇನ್ನಷ್ಟೂ ಸಾಧನೆಗೆ ತಡೆಯಾಯಿತು..! ಈಗ ಭಾರತದಲ್ಲಿ ಯುವ ವೇಗಿಗಳು ಉದಯಿಸ್ತಾ ಇದ್ದಾರೆ..! ಹಿಂಗಿರುವಾಗ ಅವರು ಭಾರತ ತಂಡಕ್ಕೆ ಕಮ್ ಬ್ಯಾಕ್ ಆಗೋದು ತುಂಬಾ ಕಷ್ಟವಿದೆ..! ಕಮ್ ಬ್ಯಾಕ್ ಆದ್ರೂ.. ಗಾಯದ ಸಮಸ್ಯೆ ಕಾಡುತ್ತಲ್ಲಾ..?! ಅದಕ್ಕಾಗಿಯೇ ಜಹೀರ್ ಒಂದು ನಿರ್ಧಾರಕ್ಕೆ ಬಂದುಬಿಟ್ಟಿದ್ದಾರೆ..! ಇವತ್ತು 16 ವರ್ಷಗಳ ತಮ್ಮ ಕ್ರಿಕೇಟ್ ವೃತ್ತಿ ಬದುಕಿಗೆ ನಿವೃತ್ತಿಘೋಷಿಸಿದ್ದಾರೆ..! ಈ ಕುರಿತು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ…ಟ್ವೀಟರ್ನಲ್ಲಿ ಬರೆದುಕೊಂಡು ನಮ್ಮ ಜಹೀರ್ ಗೆ ಶುಭಕೋರಿದ್ದಾರೆ..! ಅಂತರಾಷ್ಟ್ರೀಯ ಕ್ರಿಕೇಟ್ ಗೆ ವಿದಾಯ ಹೇಳಿದ ಜಹೀರ್ ಉದ್ಯಮಿಯಾಗ ಹೊರಟಿದ್ದಾರೆ..! ಅವರ ಕ್ರಿಕೇಟ್ ನಿವೃತ್ತ ಜೀವನ ಚೆನ್ನಾಗಿರಲಿ ಅಂತ ಹರಸೋಣ..! ಜಹೀರ್ ನೀವೆಂದೂ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸಿರ್ತೀರ್ರೀ..!

ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಸ್ವರ್ಗದಲ್ಲಿರೋ ಅಬ್ದುಲ್ ಕಲಾಂರಿಗೆ ಹುಟ್ಟುಹಬ್ಬದ ಶುಭಾಷಯಗಳು…

ಕರ್ನಾಟಕದ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ “ಪ್ರೇಮ”…! ಅಷ್ಟಕ್ಕೂ ಇವರು ಬಸ್ ಡ್ರೈವರ್ ಆಗಿದ್ದು ಯಾಕೆ ಗೊತ್ತಾ..?

ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!

ನೀವು ವಾಟ್ಸಾಪ್ ಗ್ರೂಪ್ ಅಡ್ಮಿನ್ನಾ..? ನೀವು ಜೈಲಿಗೆ ಹೋದ್ರೂ ಹೋಗ್ಬೋದು..!

ಇವರೆಂಥಾ ಸ್ವಾಭಿಮಾನಿ, ಸ್ವಾವಲಂಭಿ ಅಜ್ಜಿ..! ವಯಸ್ಸು 78, ಆದ್ರೂ…!

ತಿನ್ನುವ ಮುನ್ನ ಯೋಚಿಸು ಚಿನ್ನಾ..! ನಿಮ್ಮ ತಿಂಡಿ, ತಿನಿಸು ಎಷ್ಟು ಸುರಕ್ಷಿತ..?

ಹತ್ತು ವರ್ಷದ ಹುಡುಗನಿಗೆ ಅದೆಂಥಾ ಜವಬ್ದಾರಿ..! ಈತನ ಬುದ್ಧಿ ಎಲ್ಲರಿಗೂ ಬರಲ್ಲ ಕಣ್ರೀ..!

ಗಂಡ ಹೆಂಡತಿಗೆ ಹೊಡೆದ್ರೆ ಈ ನಾಯಿ ಏನು ಮಾಡುತ್ತೆ ಅಂತ ನೋಡಿ..! ಇದು ಶಾಂತಿಪ್ರಿಯ ನಾಯಿ – ಭೀಮ್..!

ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!

ಕ್ರೀಡಾ ಇತಿಹಾಸದಲ್ಲಿಯೇ ಅತೀ ದುಬಾರಿ ಟಿಕೇಟ್ ಯಾವುದು ಗೊತ್ತೇ..?

ರಿಯಲ್ ಲೈಫ್ ನ ರಿಯಲ್ ಹೀರೋಗಳು..! ಏನೂ ಇಲ್ಲದವರು ಏನೇನೋ ಆಗಿಬಿಟ್ಟರು..!

ಏನೇನೋ ಕಂಡುಹಿಡಿಯುವವರ ನಡುವೆ ಇನ್ನೇನೋ ಕಂಡುಹಿಡಿಯುವ ನಮ್ಮ ಹುಡುಗ..! ಇವನು ಪಕ್ಕಾ ಕನ್ನಡದ ಸೈಂಟಿಸ್ಟ್

ಬೆಂಗಳೂರಿಗೂ ಬಂತು ತ್ರಿಡಿ ಬಾಬಾ ಫೋಟೋ..! ಈ ಫೋಟೋದ ವಿಶೇಷತೆ ಏನು ಗೊತ್ತಾ..?

ಆ್ಯಪಲ್ ತಿನ್ನೋಕೆ ಮುಂಚೆ ಈ ವೀಡಿಯೋ ತಪ್ಪದೇ ನೋಡಿ..!

ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!

10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

 ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

LEAVE A REPLY

Please enter your comment!
Please enter your name here