ಬಿಗ್ ಬಾಸ್ ಸ್ಪರ್ಧಿ ಎನ್.ಸಿ ಅಯ್ಯಪ್ಪ ಹಾಗೂ ಸ್ಯಾಂಡಲ್‍ವುಡ್ ನಟಿ ಅನು ಪೂವಮ್ಮ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೊಡವ ಸಂಪ್ರದಾಯದಂತೆ ಎನ್.ಸಿ ಅಯ್ಯಪ್ಪ ಹಾಗೂ ನಟಿ ಅನು ಪೂವಮ್ಮ ಅವರ ಮದುವೆ ಇಂದು ಕೊಡಗಿನ ವೀರಾಜಪೇಟೆ ನಡೆದಿದೆ. ಶನಿವಾರ ರಾತ್ರಿ ಆರತಕ್ಷತೆ ನಡೆದಿದ್ದು, ನಟಿ ಪ್ರೇಮಾ ಅವರ ಸಹೋದರ ಅಯ್ಯಪ್ಪರ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಚಿತ್ರರಂಗದ ಗಣ್ಯರು ಈ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.