ಗರ್ಭಪಾತಕ್ಕೆ ಅನುಮತಿ ಕೋರಿ ಕೋರ್ಟ್ ಮೆಟ್ಟಿಲೇರಿದ್ದ ದಂಪತಿಯ ಮನವಿಗೆ ಬಾಂಬೆ ಹೈಕೋರ್ಟ್ ಸ್ಪಂದಿಸಿದ್ದು, ಗರ್ಭಪಾತಕ್ಕೆ ಅಸ್ತು ಎಂದಿದೆ.
33ವರ್ಷದ ಗರ್ಭಿಣಿ ತನ್ನ 30ನೇ ವಾರದ ಗರ್ಭಾವಸ್ಥೆಯಲ್ಲಿ ಶಿಶುವಿನ ಬೆಳವಣಿಗೆಯಲ್ಲಿ ನ್ಯೂನ್ಯತೆ ಕಂಡು ಬಂದಿದ್ದರಿಂದ ಗರ್ಭಪಾತಕ್ಕೆ ಮನವಿ ಸಲ್ಲಿಸಿದ್ದರು.
ಜಸ್ಟೀಸ್ ಎ.ಎಸ್ ಓಕಾ ಹಾಗೂ ಎ.ಎಸ್ ಗಡ್ಕರಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಮಹಿಳೆ ಬೇಡಿಕೆ ಒಪ್ಪಿ, ಗರ್ಭಪಾತಕ್ಕೆ ಅನುಮತಿ ನೀಡಿದೆ. ದಂಪತಿಗೆ ಈಗಾಗಲೇ 5ವರ್ಷದ ಅಂಗವಿಕಲ ಮಗುವಿದೆ. ಈ ಗರ್ಭದಲ್ಲೂ ಕೂಡ ಮಗುವಿನ ಬೆಳವಣಿಗೆ ಕುಂಠಿತ ಇರೋದು ಚಿಕಿತ್ಸೆ ವೇಳೆ ವೈದ್ಯರಿಂದ ತಿಳಿದಿದೆ. ತಾಯಿಗೆ ತೊಂದರೆ ಆಗುವ ಸಾಧ್ಯತೆ ಇರುವುದರಿಂದ ಗರ್ಭಪಾತಕ್ಕೆ ಕೋರ್ಟ್ ಅಸ್ತು ಎಂದಿದೆ.