ನಟ ನೀನಾಸಂ ಸತೀಶ್ ಅಭಿನಯದ ಚಂಬಲ್ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಚಿತ್ರದ ಟ್ರೇಲರ್ ಹಾಗೂ ಹಾಡವೊಂದನ್ನು ರಿಲೀಸ್ ಮಾಡಿದ್ದಾರೆ. ರಿಲೀಸ್ ಆಗಿ ಕೆಲವೇ ಹೊತ್ತಿನಲ್ಲಿ ಟ್ರೈಲರ್ ಧೂಳೆಬ್ಬಿಸಿದೆ.
ಚಂಬಲ್ ಚಿತ್ರದ ಟ್ರೈಲರ್ ಕಂಡ ಕೂಡಲೇ ಕರ್ನಾಟಕದ ದಕ್ಷ ಅಧಿಕಾರಿಯೊಬ್ಬರನ್ನು ನೆನಪಿಸುತ್ತದೆ. ಅವರೇ ಐಎಎಸ್ ಅಧಿಕಾರಿ ಡಿ.ಕೆ.ರವಿ. ಹೌದು, ನಟ ನೀನಾಸಂ ಸತೀಸ್ ಗೆಟಪ್ ಡಿ.ಕೆ.ರವಿ ಅವರಂತೆ ಹೋಲುತ್ತದೆ. ಐಎಎಸ್ ಅಧಿಕಾರಿ ಹೋರಾಟ ಹೇಗಿತ್ತು ಎಂಬುದನ್ನು ತೋರಿಸುವ ಪ್ರಯತ್ನ ಹಾಗೂ ಅವರ ಜೀವನ ಆಧಾರಿತ ಸಿನಿಮಾ ಇರಬಹುದು ಎಂಬ ಮಾತುಗಳು ಕೇಳಿ ಬರ್ತಿದೆ.
ಆದರೆ ಈ ಬಗ್ಗೆ ಚಿತ್ರತಂಡ ಹೇಳೋದೆ ಬೇರೆ ಚಂಬಲ್ ಪ್ರಾಮಾಣಿಕ ಅಧಿಕಾರಿಗಳ ಸ್ಫೂರ್ತಿ ಪಡೆದು ಮಾಡಿರುವಂತಹ ಸಿನಿಮಾ ಇದು ಎಂದರು. ಇನ್ನು ಸೋನು ಗೌಡ, ಕಿಶೋರ್ ಮತ್ತು ಲೂಸಿಯಾ ನಿರ್ದೇಶಕ ಪವನ್ ಕುಮಾರ್ ಅಭಿನಯಿಸಿದ್ದಾರೆ. ಚಿತ್ರಕ್ಕೆ ಪೂರ್ಣ ಚಂದ್ರ ತೇಜಸ್ವಿ ಹಾಗೂ ಜೂಡಾ ಸ್ಯಾಂಡಿ ಸಂಗೀತವಿದೆ. ಒಟ್ಟಿನಲ್ಲಿ ಚೆಂಬಲ್ ಚಿತ್ರದ ಟ್ರೈಲರ್ ಜನರಲ್ಲಿ ಸಾಕಷ್ಟು ಕುತೂಹಲಗಳು ಮೂಡಿಸಿರುವುದಂತೂ ಸತ್ಯ.