ಕಳೆದ ವರ್ಷ ಸುರಿದ ಕುಂಭದ್ರೋಣ ಮಳೆಯಿಂದಾಗಿ ಚೆನ್ನೈ ಅಕ್ಷರಶಃ ನಲುಗಿ ಹೋಗಿತ್ತು. ಜನಜೀವನ ಸಹಜ ಸ್ಥಿತಿಗೆ ಹಿಂತಿರುಗಲು ತಿಂಗಳುಗಳೇ ಬೇಕಾಯ್ತು. ಎಲ್ಲೆಡೆಯಿಂದ ನೆರವಿನ ಮಹಾಪೂರವೇ ಹರಿದು ಬಂದಿತ್ತು. ಹೇಗೋ ಸುಧಾರಿಸಿಕೊಂಡು ಚೆನ್ನೈ ಚೇತರಿಸಿಕೊಳ್ಳುತ್ತಿರುವಾಗಲೇ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಕಳೆದ ಎರಡು ದಿನಗಳಿಂದ ಚೆನ್ನೈ ಸೇರಿದಂತೆ ತಮಿಳುನಾಡಿನ ಕರಾವಳಿ ಪ್ರದೇಶದಲ್ಲಿ ವರುಣ ಆರ್ಭಟಿಸುತ್ತಿದ್ದಾನೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಚಂಡ ಮಾರುತ ಸಹಿತ ಭಾರೀ ಮಳೆ ಸುರಿಯುತ್ತಿದೆ. ಪರಿಣಾಮ ಚೈನ್ನೈ ಸೇರಿದಂತೆ ಕರಾವಳಿ ತೀರದಲ್ಲಿ ಕುಂಭದ್ರೋಣ ಮಳೆಯಾಗುತ್ತಿದ್ದು, ಇದೀಗ ಚಂಡಮಾರುತ ಭೀತಿ ಶುರುವಾಗಿದೆ. ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮುನ್ನೆಚ್ಚರಿಕೆಯಾಗಿ ಎನ್‌ಡಿಆರ್‌ಎಫ್ ಪಡೆಗಳನ್ನು ನಗರಕ್ಕೆ ಕರೆಸಿಕೊಳ್ಳಲಾಗಿದೆ. ಚೆನ್ನೈನಲ್ಲಿ ಗಂಟೆಗೆ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಚಂಡಮಾರುತ ಭೀತಿ ಶುರುವಾಗಿದೆ.
ಚೆನ್ನೈನಲ್ಲಿ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದೆ ಇದರಿಂದಾಗಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 56 ವಿಮಾನಗಳ ಹಾರಾಟದಲ್ಲಿ ಬದಲಾವಣೆಯಾಗಿದೆ. ಮೀನುಗಾರರು ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಚೆನ್ನೈನಿಂದ ಆಂಧ್ರ ಕರಾವಳಿ ತೀರದೆಡೆಗೆ ಚಂಡಮಾರುತ ಸಾಗುತ್ತಿದ್ದು ಆಂಧ್ರದ ಕರಾವಳಿ ತೀರಗಳಲ್ಲಿಯೂ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲೂ ತುಂತುರು ಮಳೆಯಾಗುವ ಸಂಭವವಿದೆ… ಎರಡು ಮೂರು ದಿನ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಭಾರೀ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಎಚ್ಚರಿಸಿದೆ.
- ಶ್ರೀ
POPULAR STORIES :
ಬೀದಿಗೆ ಬಂದ ಸೋನುನಿಗಂ..!! ಮುಂಬೈನ ರಸ್ತೆಗಳಲ್ಲಿ ಸೋನು ನಿಗಮ್ ಹೀಗ್ಯಾಕೆ ಬಂದ್ರು ಗೊತ್ತಾ..?
ಚುಟುಕು ಕ್ರಿಕೆಟ್ ಎಂಬ ವಿವಾದಗಳ ಆಟ..! ಐಪಿಎಲ್ ನಲ್ಲಿ `ಮ್ಯಾಚ್ ಫಿಕ್ಸಿಂಗ್’ ಹೊಸತಲ್ಲ..!
ಆರ್.ಸಿ.ಬಿ ಗೆದ್ದೇ ಗೆಲ್ಲುತ್ತೆ..!? ಐಪಿಎಲ್ ಮ್ಯಾಚ್ `ಫಿಕ್ಸ್ ಆಗಿದೆಯಾ..!?
ಎಬಿಡಿ ರಿಯಲ್ ಸ್ಟಾರ್ ಉಪೇಂದ್ರ ಚಿತ್ರದ ಹಾಡನ್ನ ಹಾಡಿದ್ಧಾರೆ..!! ಅನುಮಾನವಿದ್ರೆ ನೀವೂ ನೋಡಿ..
ಪತ್ನಿಯ ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ..! ಓದಿಕೊಂಡ ಹೆಂಡ್ತೀನಾ ಪ್ರಶ್ನಿಸಬಾರದಾ..!?
ಬಹುನಿರೀಕ್ಷಿತ 3 ಪೆಗ್ ಕನ್ನಡ ರ್ಯಾಪ್ ಸಾಂಗ್ ..!
ಅಸಲಿಗೆ ನಿನ್ನ ಹೆಸರೇ ತಿಳಿದಿಲ್ಲ! ಒಲವಿನ ವಿಳಾಸದಿ, ಸಹನಾ ಎಂಬ ಹೆಸರಿಗೆ ಪತ್ರ ತಲುಪಲಿದೆ!
ನಮ್ಮ ಬೆಂಗಳೂರಿನ ಬಗ್ಗೆ ಒಂದು ಕಿರಿಕ್ ವೀಡಿಯೋ ಸಾಂಗ್…
25000 ಜನರು ಎದೆ ಹಿಡಿದುಕೊಂಡು ಉಸಿರು ಕಟ್ಟಿ ಸತ್ತರು..! ಆದರೆ ಕೊಲೆಗಡುಕ ವಾರೆನ್ ಆಯುಷ್ಯ ಮುಗಿದೇ ಸತ್ತ..!?