ಕರುನಾಡಿನಲ್ಲೂ ಇದೆ ಅನಂತನ ಸಂಪತ್ತು…!

0
60

ಕರುನಾಡಿನಲ್ಲಿದೆ ನಿಗೂಢ ಅನಂತ ಸಂಪತ್ತು. ನಂಬಲಸಾಧ್ಯ ಅನ್ನಿಸಿದ್ರೂ ನಂಬಲೇಬೇಕಾದ ಸತ್ಯ ಸಂಗತಿ ಇದು. ಕೇರಳ ರಾಜ್ಯದಲ್ಲಿರುವ ಅನಂತಪದ್ಮನಾಭ ದೇವಸ್ಥಾನದಂತೆ ಗಡಿನಾಡಲ್ಲೂ ಅನಂತನ ವಾಸವಿದೆ. ಗಣಿನಾಡು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪುಟ್ಟದೊಂದು ಗ್ರಾಮದಲ್ಲೇ ಈ ಅನಂತ ಪದ್ಮನಾಭನ ವಾಸ್ತವ್ಯ. ಹಲವು ವಿಚಿತ್ರ, ಅಚ್ಚರಿಗಳನ್ನೊಳಗೊಂಡ ಈ ದೇವಸ್ಥಾನ ಇರೋದು ಕೈವಾಲ್ಯಪುರ ಎಂಬ ಪುಟ್ಟ ಗ್ರಾಮದಲ್ಲಿ.

ಇನ್ನು ಈ ದೇವಸ್ಥಾನ ಅತ್ಯಂತ ಪುರಾತನವಾದದ್ದು. ವಿಜಯನಗರ ಅರಸರ ಕಾಲದಲ್ಲಿ ಈ ದೇವಾಲಯ ನಿರ್ಮಾಣ ಮಾಡಲಾಗಿದೆ ಅನ್ನೋ ಮಾಹಿತಿಯಿದೆ. ಶ್ರೀಕೃಷ್ಣದೇವರಾಯ ವೈಷ್ಣವನಾಗಿದ್ದು, ಆಗ ವಿಜಯನಗರ ಕಾಲದ ರಾಜಧಾನಿ ಹಂಪಿಯ ಬಳಿಯಿರುವ ಈಗಿನ ಕೂಡ್ಲಿಗಿ ತಾಲೂಕಿನ ತಿಮ್ಮಲಾಪುರ, ಗುಣಸಾಗರ ಗ್ರಾಮದಲ್ಲಿ ವಿಷ್ಣುವಿನ ದೇವಸ್ಥಾನ ನಿರ್ಮಿಸಿದ್ದಾನೆ ಎಂಬ ಪ್ರತೀತಿಯಿದೆ. ಸದ್ಯ ಕೈವಲ್ಯಾಪುರ ಗ್ರಾಮದ ಲಕ್ಷ್ಮಿ ಅನಂತಪದ್ಮನಾಭ ದೇವಸ್ಥಾನವನ್ನು ಪೂಜೆ ಮಾಡಿಕೊಂಡು ಬರುತ್ತಿರುವ ಅರ್ಚಕ ವಂಶದ ಅನಂತಶಾಸ್ತ್ರಿಗಳು ತಮ್ಮ ಪೂರ್ವಿಕರು ಈ ದೇವಸ್ಥಾನವನ್ನು ನಿಷ್ಠೆ, ನೇಮದಿಂದ ಪೂಜೆ ಸಲ್ಲಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಪುರಾತನ ಕಾಲದ ಈ ದೇಗುಲದಲ್ಲಿ ವರುಷಕ್ಕೊಮ್ಮೆ ಜಾತ್ರೆಯ ರೀತಿ ವಿಶೇಷವಾಗಿ ಲಕ್ಷ್ಮಿ ಅನಂತಪದ್ಮನಾಭ ಪೂಜೆ ನಡೆಯುತ್ತೆ. ಭಕ್ತರ ದಂಡೇ ದೇವಾಲಯದತ್ತ ಹರಿದುಬರುತ್ತೆ. ಇತ್ತೀಚಿನ ದಿನಗಳಲ್ಲಿ ಈ ದೇವಸ್ಥಾನ ಹೆಚ್ಚು ಪ್ರಚಾರ ಪಡೆದುಕೊಳ್ಳಲಾರಂಭಿಸಿದೆ. ಅದಕ್ಕೆ ಕಾರಣವಾಗಿರೋದು ಈ ದೇವಸ್ಥಾನದ ಹತ್ತಿರವಿರುವ ಬೆಟ್ಟದ ಗುಹೆ. ಈ ಗುಹೆಯಲ್ಲಿ ಅನಂತನ ಸಂಪತ್ತಿದೆ ಅನ್ನೋದು ಇಲ್ಲಿನವರ ನಂಬಿಕೆ. ಹಾಗಾಗಿ ದಿನೇ ದಿನೇ ಇಲ್ಲಿಗೆ ಬಂದು ಹೋಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.  ಒ0ಟ್ಟಾರೆ ಹಲವು ಕೌತುಕ, ಕುತೂಹಲಗಳಕ್ಕೆ ಕಾರಣವಾಗಿರೋ ಈ ಅನಂತನ ಸನ್ನಿಧಿಯ ಪವಾಡ ಭಕ್ತರ ಮನದಲ್ಲಿ ನೆಲೆಯೂರಿರುವುದು ಸುಳ್ಳಲ್ಲ.

  • ಶ್ರೀ

POPULAR  STORIES :

ಬೀದಿಗೆ ಬಂದ ಸೋನುನಿಗಂ..!! ಮುಂಬೈನ ರಸ್ತೆಗಳಲ್ಲಿ ಸೋನು ನಿಗಮ್ ಹೀಗ್ಯಾಕೆ ಬಂದ್ರು ಗೊತ್ತಾ..?

ಚುಟುಕು ಕ್ರಿಕೆಟ್ ಎಂಬ ವಿವಾದಗಳ ಆಟ..! ಐಪಿಎಲ್ ನಲ್ಲಿ `ಮ್ಯಾಚ್ ಫಿಕ್ಸಿಂಗ್’ ಹೊಸತಲ್ಲ..!

ಆರ್.ಸಿ.ಬಿ ಗೆದ್ದೇ ಗೆಲ್ಲುತ್ತೆ..!? ಐಪಿಎಲ್ ಮ್ಯಾಚ್ `ಫಿಕ್ಸ್ ಆಗಿದೆಯಾ..!?

ಎಬಿಡಿ ರಿಯಲ್ ಸ್ಟಾರ್ ಉಪೇಂದ್ರ ಚಿತ್ರದ ಹಾಡನ್ನ ಹಾಡಿದ್ಧಾರೆ..!! ಅನುಮಾನವಿದ್ರೆ ನೀವೂ ನೋಡಿ..

ಪತ್ನಿಯ ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ..! ಓದಿಕೊಂಡ ಹೆಂಡ್ತೀನಾ ಪ್ರಶ್ನಿಸಬಾರದಾ..!?

ಬಹುನಿರೀಕ್ಷಿತ 3 ಪೆಗ್ ಕನ್ನಡ ರ್ಯಾಪ್ ಸಾಂಗ್ ..!

ಅಸಲಿಗೆ ನಿನ್ನ ಹೆಸರೇ ತಿಳಿದಿಲ್ಲ! ಒಲವಿನ ವಿಳಾಸದಿ, ಸಹನಾ ಎಂಬ ಹೆಸರಿಗೆ ಪತ್ರ ತಲುಪಲಿದೆ!

ನಮ್ಮ ಬೆಂಗಳೂರಿನ ಬಗ್ಗೆ ಒಂದು ಕಿರಿಕ್ ವೀಡಿಯೋ ಸಾಂಗ್…

25000 ಜನರು ಎದೆ ಹಿಡಿದುಕೊಂಡು ಉಸಿರು ಕಟ್ಟಿ ಸತ್ತರು..! ಆದರೆ ಕೊಲೆಗಡುಕ ವಾರೆನ್ ಆಯುಷ್ಯ ಮುಗಿದೇ ಸತ್ತ..!?

LEAVE A REPLY

Please enter your comment!
Please enter your name here