ಛೇ.. ತಮಿಳುನಾಡಿನಲ್ಲಿ ಹಿಂಗಾಗ ಬಾರದಿತ್ತು..! ಮಾನವೀಯತೆ ಮೆರೆದ ಭಾರತೀಯರು..! ನಾವೆಲ್ಲರೂ ಒಂದೇ..!

0
66

ಛೇ.. ತಮಿಳುನಾಡಿಲ್ಲಿ ಹಿಂಗಾಗ ಬಾರದಿತ್ತು..! ಚೆನ್ನೈ ನೀರಿನಲ್ಲಿ ಮುಳುಗಿದೆ..! ಅಲ್ಲಿಯವರು ಮನೆ-ಮಠವೆಲ್ಲಾ ಕಳೆದು ಕೊಂಡಿದ್ದಾರೆ.. ಅಲ್ಲಿರುವ ನಮ್ಮ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು, ಮಿತ್ರರು ಗೋಳನ್ನು ನೋಡಲಾಗ್ತಾ ಇಲ್ಲ..! ತಮಿಳುನಾಡಿನ ಸ್ಥಿತಿಯನ್ನು ನೋಡ್ತಾ ಇದ್ರೆ ತುಂಬಾ ಬೇಜಾರಾಗುತ್ತೆ..! ಎತ್ತರದ ಕಟ್ಟಡದ ತುದಿಯಲ್ಲಿ ನಿಂತು, ನೀರಿನಿಂದ ಜೀವ ಉಳಿಸಿಕೊಳ್ಳೋ ಸಾಹಸವನ್ನು ಮಾಡ್ತಾ ಇದ್ದಾರೆ..! ಹೆಲಿಕ್ಯಾಪ್ಟರ್ನಿಂದ ಕೆಳಕ್ಕೆ ಬೀಳೋ ಆಹಾರದ ಪ್ಯಾಕಿಗಾಗಿ ಕೈಚಾಚಿ ಕಾಯುತ್ತಿದ್ದಾರೆ..!
ಸಣ್ಣ-ಪುಟ್ಟ ವಿಚಾರಕ್ಕೂ ಜಗಳ ಮಾಡ್ತೀವಿ. ಎಲ್ಲಾ ಚೆನ್ನಾಗಿರುವಾಗ ಸುಮ್ಮನೇ ಕಿತ್ತಾಡುತ್ತೇವೆ..! ಇಂಥಾ ಸಂದರ್ಭದಲ್ಲಿ ಅವ್ಯಾವುದೂ ಮುಖ್ಯವಾಗಲ್ಲ…! ಇಂಥಾ ಕ್ಷಣಗಳನ್ನು ನೋಡಿದ್ರೆ ಯಾಕಪ್ಪಾ ಜಗಳ ಆಡ್ಬೇಕು..?! ಯಾವಾಗ ಎಂಥಾ ಪರಿಸ್ಥಿತಿ ಬರುತ್ತೋ ಗೊತ್ತಿಲ್ಲ..! ಇರೋ ಅಷ್ಟು ದಿನ ಎಲ್ಲರೂ ಒಟ್ಟಾಗಿ ಇರ್ಬೇಕು, ಒಬ್ಬರಿಗೊಬ್ಬರು ಸಹಾಯ ಮಾಡ್ಕೊಂಡು ಚೆನ್ನಾಗಿರ್ಬೇಕು ಅಂತ ಅನಿಸುತ್ತೆ..!
ಇವತ್ತು ಜಾತಿ-ಧರ್ಮ, ಭಾಷೆ, ರಾಜ್ಯ, ಗಡಿ ಎಲ್ಲವನ್ನೂ ಮರೆತು ತಮಿಳುನಾಡಿಗಾಗಿ ನಾವು-ನೀವೆಲ್ಲಾ ಪ್ರಾಥರ್ಿಸುತ್ತಿದ್ದೇವೆ..! ಆದಷ್ಟು ಬೇಗ ತಮಿಳುನಾಡು ಯಥಾಸ್ಥಿತಿಗೆ ಮರಳಲಿ ಅಂತ ಬೇಡಿಕೊಳ್ತಾ ಇದ್ದೀವಿ..! ತಮಿಳು ನಾಡಿಗೆ ಒಳ್ಳೆಯದಾಗಲೀ ಅಂತ ಎಲ್ಲಾ ಭಾರತೀಯರು ಬೇಡಿಕೊಳ್ತಾ ಇದ್ದೀವಿ..! ತಮಿಳುನಾಡಿನ ಸೇವೆಗಾಗಿ ರಾಜ್ಯ, ಭಾಷೆ, ಜಾತಿ-ಮತಗಳ ಎಲ್ಲೆಯನ್ನು ಮೀರಿ ಕನ್ನಡದವರೂ ಸೇರಿದಂತೆ ಎಲ್ಲಾ ಭಾಷಿಗಗರೂ ಮುಂದಾಗಿದ್ದಾರೆ..! ಈ ಒಂದೇ ಒಂದು ಸನ್ನಿವೇಶವನ್ನು ಕಣ್ಣು ಬಿಟ್ಟು ನೋಡಿದರೆ `ಅಸಹಿಷ್ಣುತೆ’ ಇದೆ ಅನ್ನೋ ಜನರಿಗೆ ಉತ್ತರ ಸಿಗಬಹುದು..!? ದೇಶದಲ್ಲಿ ಅಸಹಿಷ್ಣುತೆ ಇದ್ದಿದ್ದೇ ಆದರೆ `ತಮಿಳು ನಾಡಿಗಾಗಿ’ ದೇಶದ ಜನ ಮಿಡಿಯುತ್ತಿರಲಿಲ್ಲ..! ಅವರ ಸೇವೆಗಾಗಿ ಮಳೆಯಲ್ಲಿ ನೆನೆಯುತ್ತಿರಲಿಲ್ಲ..! ಅಲ್ಲಿಯವರೂ ಜಾತಿ ಮರೆತು ಒಬ್ಬರನ್ನೊಬ್ಬರು ಮನೆಯೊಳಗೆ ಸೇರಿಸಿಕೊಳ್ತಾ ಇರ್ಲಿಲ್ಲ..! ನಿಜಕ್ಕೂ ದೇಶದಲ್ಲಿ ಅಸಹಿಷ್ಣುತೆ ಇದ್ದಿದ್ದರೆ, “ಇವತ್ತು ನಮ್ಮ ಪಕ್ಕದ ಸೋದರ `ತಮಿಳುನಾಡು’ ಒಂದರ್ಥದಲ್ಲಿ ಅನಾಥವಾಗಿರುತ್ತಿತ್ತು..! ದೇಶದಲ್ಲಿ ಸಹಿಷ್ಣುತೆ ಇರುವುದರಿಂದಲೇ ಇವತ್ತು ತಮಿಳುನಾಡಿನ ಕಷ್ಟಕ್ಕೆ ಬೇರೆ ಬೇರೆ ರಾಜ್ಯದ ಜನರೆಲ್ಲಾ ಒಟ್ಟಾಗಿದ್ದೇವೆ..! ತಮಿಳುನಾಡಿಗಾಗಿ ಪ್ರಾರ್ಥಿಸುತ್ತಿದ್ದೇವೆ..!
ಅಸಹಿಷ್ಣುತಾ ಪ್ರತಿಪಾದಕರಿಗಳಿಗೆ ಆ ಬಗ್ಗೆ ಹೇಳಿದ್ರೆ ಏನ್ ಪ್ರಯೋಜನ..?! ನಾವು ತಮಿಳುನಾಡಿಗರ ಬಗ್ಗೆ ಗಮನಕೊಡೋಣ.

ತಮಿಳುನಾಡಿನ ಇಂದಿನ ಕಷ್ಟವನ್ನು ಇದೊಂದು ವೀಡಿಯೋ ವಿವರಿಸುತ್ತೆ..! ಜಲಾವೃತಗೊಂಡಿರುವ ಅಲ್ಲಿ, ಜನರು ಕಟ್ಟಡದ ಮೇಲೆ ನಿಂತು ಹೆಲಿಕ್ಯಾಪ್ಟರ್ನಿಂದ ಎಸೆಯುವ ಬ್ರೆಡ್ಗಾಗಿ ಕೈ ಚಾಚಿ ಕಾಯುತ್ತಿರೋದನ್ನು ನೋಡಿದ್ರೆ.. ಯಾರಿಗೂ.. ಯಾವ ರಾಜ್ಯಕ್ಕೂ.. ಯಾವ ದೇಶಕ್ಕೂ  ಈ ಸ್ಥಿತಿ ಬರಬಾರ್ದು ಅಂತ ಖಂಡಿತಾ ಅನಿಸುತ್ತೆ. ತಮಿಳುನಾಡಿನಲ್ಲಿ ಮಳೆ ಕಡಿಮೆ ಆಗಲಿ, ತಮಿಳುನಾಡು ಯಥಾಸ್ಥಿತಿಗೆ ಮರಳಲಿ ಅಂತ ಬೇಡಿಕೊಳ್ಳೋಣ..!

https://www.youtube.com/watch?v=Eg_nFJQd95o

ಇಲ್ಲಿ 1೨ ಫೋಟೋಗಳಿವೆ. ಇವು ಮಾನವೀಯತೆಯನ್ನು ಸಾರುತ್ತಿವೆ..! ಮಳೆಯಿಂದ ತಮಿಳುನಾಡು ತತ್ತರಿಸಿರೋ ಈ ಟೈಮಿನಲ್ಲಿ ಮಾನವೀಯತೆಯನ್ನು ಸಾರುವ ಈ ಕ್ಷಣಗಳು ದೇಶದಲ್ಲಿ ಸಹಿಷ್ಣುತೆ ಇದೆ ಎಂಬುದನ್ನು ಸಾರಿ ಸಾರಿ ಹೇಳುತ್ತವೆ..!

ಚೆನ್ನೈ ಈಸ್ ಬ್ಯೂಟಿಫುಲ್..! ಯಾಕಂದ್ರೆ..? In Pictures :

1.    `ನಿಸ್ವಾರ್ಥ’..! : ಮಳೆಯಿಂದ ತತ್ತರಿಸಿರೋ ಚೆನ್ನೈನಲ್ಲಿ ಒಬ್ಬರ ಜೀವಕ್ಕೆ ಇನ್ನೊಬ್ಬರು ಆಧಾರವಾಗುತ್ತಿದ್ದಾರೆ..!

11169200_1720686871487259_8190865066631581456_n

2. ಉದಾರ..! : ಅಲ್ಲಿನ ಜೈನದೇವಾಲಯದಲ್ಲಿ ಊಟ ತಯಾರಿಸಿ ನಿರಾಶ್ರಿತರಾಗಿರೋರಿಗೆ ತಲುಪುವ ವ್ಯವಸ್ಥೆಯನ್ನೂ ಮಾಡ್ತಾ ಇರೋದನ್ನೂ ಗಮನಿಸಬಹುದು..! ದೀಪಕ್ ಮೇಹ್ತಾ ಅನ್ನೋರ ಈ ಟ್ವೀಟ್ ನೋಡಿದ್ರೆ  `ಔದಾರ್ಯತೆ’ ಗೊತ್ತಾಗುತ್ತೆ..!

enhanced-11630-1449006102-9

3.ಕೊಡುವಿಕೆ..!
ಕರೆನ್ಸಿ ಇಲ್ದೇ ಇದ್ರೆ ನಿಮ್ಮ ನಂಬರ್ ಕೊಡಿ. ನಾನು ಕರೆನ್ಸಿ ಹಾಕಿಸುತ್ತೇನೆ..!

ಚೆನ್ನೈನಲ್ಲಿ ಯಾರಿಗಾದರೂ ಕರೆನ್ಸಿ ಬೇಕು ಅಂತಾದ್ರೆ ತಕ್ಷಣವೇ ಹೇಳಿ ನಾವು ಹಾಕಿಸುತ್ತೇವೆ ಅಂತ ಟ್ವೀಟ್ ಮಾಡೋ ಮೂಲಕ ಕೆಲವರು ತಮ್ಮ ಒಳ್ಳೆತನ, ಕಾಳಜಿಯನ್ನು ಮೆರೆದಿದ್ದಾರೆ.

enhanced-2457-1449006814-1

4.ಸಹಾಯ ಮಾಡುವ ಕೈಗಳು..!

enhanced-17536-1449006482-17

5.ಚೆನ್ನೈನವರ ರಕ್ಷಣೆಗಾಗಿ ಎಲ್ಲರೂ ಇದ್ದಾರೆ..! ಅವರದ್ದೇ ಕಾರು, ದುಡ್ಡಿನಲ್ಲಿ ಚೆನ್ನೈ  ಜನತೆಗಾಗಿ ತಯಾರಿದ್ದಾರೆ..!

enhanced-14815-1449008006-1

6. ಬಲಿಷ್ಟವಾಗಿದೆ..! ಇಂಥಾ ಸಮಯದಲ್ಲೂ ತಮಿಳುನಾಡು ಬಲಿಷ್ಟವಾಗಿಯೇ ಇದೆ..! ಕಾರಣ, ಅವರ ಕಷ್ಟಕ್ಕೆ ರಕ್ಷಕರು, ಸುತ್ತಮುತ್ತಲಿನ ರಾಜ್ಯದ ಜನರೂ ಇದ್ದೇವೆ..!

enhanced-13982-1449008213-1

7.ಈ ರೀತಿಯ ಪ್ರೀತಿಯೂ.. ಅಪ್ಪ ಅಂದ್ರೆ ಆಕಾಶ..!

enhanced-13288-1449010927-1

8.ಮಾನವೀಯತೆಯ ಪ್ರತಿರೂಪ.

enhanced-13266-1449010376-1

9.ಚೆನ್ನೈನಲ್ಲಿ ನಿಜಕ್ಕೂ ಇವತ್ತು ಕಷ್ಟವಿದೆ..! ಆ ಸ್ಥಿತಿ ನೋಡಿದ್ರೆ ಬೇಸರವಾಗುತ್ತೆ..!

enhanced-9040-1449009635-1

10.ಸಹಾಯ ಮಾಡುವ ಕೈಗಳು..!

enhanced-1831-1449007140-3

11.ತಮಿಳುನಾಡಿಗಾಗಿ  ಪ್ರಾರ್ಥಿಸಿ..!

12346436_472242006288629_7758945582629482530_n

12. ಎಲ್ಲಾ ಬಾಗಿಲುಗಳು ತೆರೆದಿವೆ..!
ಮಸೀದಿ-ಮಂದಿರಗಳ ಬಾಗಿಲು ತೆರೆದು ಜಾತಿ-ಧರ್ಮವನ್ನೇ ಪ್ರಶ್ನಿಸದೇ ಎಲ್ಲರಿಗೂ ಆಹಾರ ಮತ್ತು ಆಶ್ರಯ ನೀಡಲಾಗುತ್ತಿದೆ..! ಆ ಸಂಬಂಧ ಇಲ್ಲೊಂದು ಟ್ವೀಟ್ ಇದೆ ನೀವೇ ನೋಡಿ.

chennaibb

ಎಲ್ಲರನ್ನೂ ಒಂದುಮಾಡಿ ನಗುತಂದಿದೆ..! ಚೆನೈನಲ್ಲಿ ನಿಜಕ್ಕೂ ಇವತ್ತು ಕಷ್ಟವಿದೆ..! ಆ ಸ್ಥಿತಿ ನೋಡಿದ್ರೆ ಬೇಸರವಾಗುತ್ತೆ..! ಆದ್ರೆ ಅಲ್ಲಿಯವರಿಗೆ ಅನ್ನ ಸಿಕ್ಕರೆ ಸಾಕು ಮುಖದಲ್ಲಿ  ನಗು ಅರಳಿದೆ..! ಎಲ್ಲರೂ ಒಟ್ಟಿಗೇ ಊಟ ಮಾಡ್ತಾ ಇದ್ದಾರೆ..!

11216707_1698641467034241_7784456889833766188_n

 

 

  • ಶಶಿಧರ ಡಿ ಎಸ್ ದೋಣಿಹಕ್ಲು

LEAVE A REPLY

Please enter your comment!
Please enter your name here