ಕಾಮಗಾರಿಗಳ ಗುತ್ತಿಗೆ ನಗರಾಭಿವೃದ್ಧಿ ಸಚಿವರ ಸಂಬಂಧಿಕರ ಪಾಲಿಗೆ

0
47

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆದ ವಿವಿಧ ಕಾಮಗಾರಿಗಳ ಗುತ್ತಿಗೆಯನ್ನ ನಗರಾಭಿವೃದ್ಧಿ ಸಚಿವರ ಸಂಬಂಧಿಕರಿಗೆ ನೀಡಲಾಗಿದೆ. ಇದರ ಪರಿಣಾಮ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು MLC C.N.ಮಂಜೇಗೌಡ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತ್ನಾಡಿದ MLC C.N.ಮಂಜೇಗೌಡ, ಸಚಿವರು, ಅಧಿಕಾರಿಗಳ ಆಪ್ತರು-ಸಂಬಂಧಿಕರಿಗೆ ಕಾಮಗಾರಿ ನೀಡಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ನಡೆದು 5 ತಿಂಗಳಾಗಿದೆ. ಮೂಲೆ ‌‌ನಿವೇಶನಗಳನ್ನು ನಿರಂತರವಾಗಿ ಹರಾಜು ಹಾಕುವ ಮೂಲಕ, ಅಧಿಕಾರಿಗಳು ಮುಡಾವನ್ನು ದಿವಾಳಿ ಮಾಡಲು ಹೊರಟಿದ್ದಾರೆ. ನಿವೇಶನಗಳ ಹರಾಜಿನಿಂದ ಬರುವ ಕೋಟ್ಯಾಂತರ ಹಣವನ್ನು ಪಾಲಿಕೆಗೆ ಹಸ್ತಾಂತರಿಸಿರುವ ಬಡಾವಣೆಗಳ ಅಭಿವೃದ್ಧಿಗೆ ನೀಡಲಾಗ್ತಿದೆ. ಇದೆಲ್ಲದರ ಪರಿಣಾಮವಾಗಿ ಮುಡಾ ಆಸ್ತಿ ಕರಗುತ್ತಿದೆ. ಜೊತೆಗೆ ಮುಡಾ ಆರ್ಥಿಕವಾಗಿಯೂ ದಿವಾಳಿಯತ್ತ ಸಾಗಿದೆ ಎಂದು ಕಿಡಿಕಾರಿದ್ರು.

LEAVE A REPLY

Please enter your comment!
Please enter your name here