ಬೆಂಗಳೂರಿನಲ್ಲಿ ರಣಭೀಕರ ಮಳೆಯಿಂದ ಕ್ರೈಂ ಪ್ರಕರಣಗಳು ಕಮ್ಮಿ

0
66

ಕಳೆದೊಂದು ವಾರದಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಣಭೀಕರ ಮಳೆಯಿಂದ ಕ್ರೈಂ ಪ್ರಕರಣಗಳು ಕಡಿಮೆಯಾಗಿವೆ. ಕಳೆದ ಒಂದು ವಾರದಲ್ಲಿ ನಗರದಲ್ಲಿ ರಾಬರಿ ಕೇಸ್​ಗಳೇ ರಿಪೋರ್ಟ್ ಆಗಿಲ್ಲ. ಪ್ರತಿನಿತ್ಯ ಡಿವಿಷನ್​ಗೆ ಎರಡು ಮೂರು ರಾಬರಿ ಕೇಸ್​ಗಳು ದಾಖಲಾಗುತ್ತಿತ್ತು. ಆದರೆ ವಾರದಿಂದ ಕಂಟ್ರೋಲ್ ರೂಂಗೂ ಕಳ್ಳತನ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ನಗರದ 8 ಡಿವಿಷನ್​ಗಳಲ್ಲಿ ಪ್ರತಿನಿತ್ಯ 15-20 ರಾಬರಿ ಕೇಸ್ ವರದಿ ಆಗುತ್ತಿದ್ದವು. ರಾತ್ರಿ ಒಂಟಿಯಾಗಿ ಬರೋರನ್ನು ಗುರಿಯಾಗಿಸಿ ಮಾಡುತ್ತಿದ್ದ ಕಳ್ಳತನ ಮತ್ತು ಐಟಿ ಬಿಟಿ ಕಂಪನಿ ಹೆಚ್ಚಾಗಿರೋ ಏರಿಯಾದ ಕಳ್ಳತನ ಕೇಸ್ ದಾಖಲಾಗಿಲ್ಲ. ಮಹದೇವಪುರ, ವೈಟ್ ಫೀಲ್ಡ್, ಮಾರತ್ ಹಳ್ಳಿ, ಬೆಳ್ಳಂದೂರು ವರ್ತೂರು ಸೇರಿದಂತೆ ಹಲವು ಕಡೆಗಳಲ್ಲಿ ರಾಬರಿ ಕೇಸ್ ಹೆಚ್ಚಾಗಿದ್ದವು. ಇತ್ತೀಚೆಗೆ ಈ ಬಗ್ಗೆ ಪೊಲೀಸರಿಗೆ ಸಾಕಷ್ಟು ದೂರುಗಳು ಕೂಡ ಬರುತ್ತಿದ್ದವು. ಇದರಿಂದ ರಾತ್ರಿ ವೇಳೆ ಪೊಲೀಸ್ ಹೊಯ್ಸಳ ಗಸ್ತನ್ನು ಹೆಚ್ಚಳ ಮಾಡಲಾಗಿತ್ತು. ಮಳೆ ಹಿನ್ನೆಲೆ ಬಹುತೇಕ ಪ್ರದೇಶಗಳಲ್ಲಿ ರಾತ್ರಿವೇಳೆಯೂ ಪೊಲೀಸರು ಬೀಡು ಬಿಟ್ಟಿದ್ದು, ಪೊಲೀಸರ ಜೊತೆಗೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಬಿಬಿಎಂಪಿ ಸಿಬ್ಬಂದಿ ಸಹ ರಸ್ತೆಯಲ್ಲೇ ಇದ್ದರು. ಮಳೆ ಹಿನ್ನೆಲೆ ಹೊರಗಡೆ ಓಡಾಡುವ ಸಾರ್ವಜನಿಕರ ಸಂಖ್ಯೆಯೂ ಕಡಿಮೆಯಾಗಿದೆ. ಒಟ್ಟಿನಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿಯಾದರೂ ಈ ಕಳ್ಳಕಾಕರ ಕಾಟ ತಪ್ಪಿರುವುದು ಒಂದೆಡೆ ಖುಷಿಯ ವಿಚಾರವಾಗಿದೆ.

LEAVE A REPLY

Please enter your comment!
Please enter your name here