No menu items!
8.7 C
Munich
Wednesday, April 15, 2026

ಬಿಜೆಪಿಯವರು ಏನು ಬೇಕಾದರೂ ಮಾತನಾಡಲಿ….!

Must read

ಬಿಜೆಪಿಯವರು ಏನು ಬೇಕಾದರೂ ಮಾತನಾಡಲಿ, ನಾವು ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ 46 ಸಾವಿರ ರೂ. ಟೀ ಶರ್ಟ್ ಹಾಕಿದ್ದ ಬಗ್ಗೆ ಮಾತನಾಡುವವರಿಗೆ ಹತ್ತು ಲಕ್ಷ ರೂ. ಕೋಟ್ ಹಾಕಿದ್ದು ಕಾಣುವುದಿಲ್ಲವೇ? ರಾಹುಲ್ ಗಾಂಧಿಯವರಿಗೆ ಅಷ್ಟು‌ ಮೊತ್ತದ ಟೀ ಶರ್ಟ್ ಧರಿಸುವ ಅರ್ಹತೆ ಇಲ್ಲವೇ? ಎಂದು ಪ್ರಶ್ನಿಸಿದರು. ಒಟ್ಟಿನಲ್ಲಿ ಬಿಜೆಪಿಯವರು ರಾಹುಲ್ ಗಾಂಧಿಯವರ ಪಾದಯಾತ್ರೆಯನ್ನು ಗಮನಿಸುತ್ತಿದ್ದಾರೆ ಎಂಬುದು ಇದರಿಂದ ಸಾಬೀತಾಗಿದೆ. ಬಿಜೆಪಿಯವರು ಕತ್ತರಿ ಇದ್ದಂತೆ. ಅವರು ದೇಶವನ್ನು ವಿಭಜಿಸುತ್ತಾರೆ. ರಾಹುಲ್ ಗಾಂಧಿ ಸೂಜಿ ಇದ್ದಂತೆ. ಅವರು ದೇಶವನ್ನು ಜೋಡಿಸುತ್ತಾರೆ ಎಂದು ಅಭಿಪ್ರಾಯಪಟ್ಟರು. ಇನ್ನೂ ಬೆಂಗಳೂರು ನಗರದ 28 ಶಾಸಕರ ಪೈಕಿ 26 ಶಾಸಕರು ರಿಯಲ್ ಎಸ್ಟೇಟ್ ನಲ್ಲಿ ಇದ್ದಾರೆ ಎಂಬ ಮಾಜಿ ಸಂಸದೆ ರಮ್ಯಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರು ನಮ್ಮ ಮನೆ ಹೆಣ್ಣು ಮಗಳು, ಪಕ್ಷದ ಮುಖಂಡರು, ಮಾಜಿ ಸಂಸದೆ. ಅವರು ಏನು ಹೇಳಿದ್ದಾರೋ ಗೊತ್ತಿಲ್ಲ. ಅವರ ಟ್ವೀಟ್ ಬಗ್ಗೆ ಅವರನ್ನೇ ಕೇಳಿ. ಬೇಕಿದ್ದರೆ ಅವರು ನನ್ನನ್ನು ಕೇಳಲಿ ಎಂದು ಡಿಕೆಶಿ ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article