ಈಗ್ಗೆ ಒಂಬತ್ತು ತಿಂಗಳ ಹಿಂದೆ ದಾದ್ರಿಯಲ್ಲಿ ದನದ ಮಾಂಸವಿಟ್ಟುಕೊಂಡಿದ್ದಾನೆ ಅಂತ ಮೊಹಮ್ಮದ್ ಅಕ್ಲಾಕ್ ಎಂಬಾತನನ್ನು ಉತ್ತರಪ್ರದೇಶದ ದಾದ್ರಿಯಲ್ಲಿ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಆದರೆ ನೋಯ್ಡಾದ ಸರ್ಕಾರಿ ವಿಧಿವಿಜ್ಞಾನ ಪ್ರಯೋಗಾಲಯ ಅಕ್ಲಾಕ್ ಮನೆಯಲ್ಲಿದ್ದದ್ದು ದನದ ಮಾಂಸವಲ್ಲ, ಕುರಿ ಮಾಂಸ ಎಂದು ರಿಪೋರ್ಟ್ ಕೊಟ್ಟಿತ್ತು. ಆದರೆ ಮೊನ್ನೆ ಮಥುರಾ ವಿಧಿ ವಿಜ್ಞಾನ ಪ್ರಯೋಗಾಲಯ ಅಕ್ಲಾಕ್ ಮನೆಯಲ್ಲಿ ಸಿಕ್ಕಿದ್ದು ದನದ ಮಾಂಸವೆಂದು ರಿಪೋರ್ಟ್ ಕೊಟ್ಟಿತ್ತು. ಈ ಮತಿಗೇಡಿಗಳು ಒಬ್ಬೊಬ್ಬರು ಒಂದೊಂದು ರಿಪೋರ್ಟ್ ಕೊಟ್ಟರೇ ಸಾರ್ವಜನಿಕ ವಲಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗುವುದಿಲ್ಲವೇ..!?. ಈಗ ಶಿವಸೇನೆ ನೇತೃತ್ವದಲ್ಲಿ ಕೆಲ ಕಿಡಗೇಡಿಗಳು ಅಕ್ಲಾಕ್ ಕುಟುಂಬದ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಸರ್ಕಾರಕ್ಕೆ ಇಪ್ಪತ್ತು ದಿನಗಳ ಗಡುವು ನೀಡಿದ್ದು, ಆ ಕುಟುಂಬದ ವಿರುದ್ಧ ಎಫ್‍ಐಆರ್ ದಾಖಲಿಸದಿದ್ದರೇ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಸತ್ತವರ ಸಮಾಧಿ ಮೇಲೆ ಸಮಾರಾಧನೆ ನಡೆಸುವ ಉತ್ತರಪ್ರದೇಶದಲ್ಲಿ ನಿಜಕ್ಕೂ ಸಮಾಜವಾದ ಪಕ್ಷ ಆಡಳಿತದಲ್ಲಿದೆಯೇ..!? ರಾಮರಾಜ್ಯದಲ್ಲಿ ರಾವಣರದ್ದೇ ದರ್ಬಾರು ಜೋರಾಗಿದೆ. ಇದು ದೇಶದ ದೊಡ್ಡ ದುರಂತ..!
- ರಾ ಚಿಂತನ್
POPULAR STORIES :
ಇಪ್ಪತ್ತೊಂಬತ್ತು ಹೆಣದ ರಾಶಿ ಮೇಲೆ ಯುಪಿ ಸರ್ಕಾರ..! ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್..!!
ಮಿಸ್ಟರ್ ಪರಮೇಶ್ವರ್ ನಾಯಕ್..! ಯಾವಾಗ ರಾಜೀನಾಮೆ ಕೊಡ್ತೀರಾ..!?
ಆಂಧ್ರದಲ್ಲಿ ಮೀನಿನ ಮಳೆ..! ಈ ಮಳೆ ಸುರಿಯುವ ವಿಡಿಯೋ ನೋಡಿ..!
`ಅರೆಸ್ಟ್ ಕರೋ ಇಸ್ ಸಾಲಿಕೋ..!’ ವಾಂತಿ ಮಾಡಿಕೊಂಡ ಖೇಣಿ ನೀರಿಳಿಸಿದ ಅರ್ನಾಬ್..!
ಬಾಕ್ಸರ್ ಮಹಮ್ಮದ್ ಅಲಿ ಡೆತ್ ಸೀಕ್ರೆಟ್..! ಸತ್ತಮೇಲೂ ಅವರು ಬದುಕಿದ್ದರು..!
ಕೇಳ್ರಪ್ಪೊ ಕೇಳ್ರಿ ಫೇಸ್ ಬುಕ್ ಸಂಸ್ಥಾಪಕನ ಅಕೌಂಟ್ ಹ್ಯಾಕ್ ಆಯ್ತು…!! ಪಾಸ್‍ವರ್ಡ್ ಏನಿತ್ತು ಗೊತ್ತಾ..?
ದೇವೇಗೌಡರಿಗೆ ಮುಸ್ಲೀಮರನ್ನು ಕಂಡರಾಗಲ್ಲ..!! ಜೂನ್ ಹನ್ನೆರಡರಂದು ಜೆಡಿಎಸ್‍ನಿಂದ ಜಮೀರ್ ಔಟ್..!?