ಇದು ವೀರಯೋಧನ ವೀರಮರಣದ ಕಥೆ..! ಈ ವೀಡಿಯೋ ನೋಡಿದ ಮೇಲೆ ನೀವು ಶೇರ್ ಮಾಡದೇ ಇದ್ರೆ..!?

0
71

ಅಸಹಿಷ್ಣುತೆಯನ್ನು ವಿರೋಧಿಸಿ ಪ್ರಶಸ್ತಿ ವಾಪಸ್ಸು ಮಾಡೋ ಮಹಾನ್ ಸಾಹಿತಿಗಳನ್ನು, ಓಟ್ ಬ್ಯಾಂಕಿಗಾಗಿ ಕಣ್ಣೀರು ಒರೆಸುವ ನಾಟಕ ಮಾಡೋ ರಾಜಕಾರಣಿಗಳನ್ನು, ಟಿ.ಆರ್.ಪಿ, ಟಿ.ಆರ್.ಪಿ ಅಂತ ಸಣ್ಣ ವಿಷಯವನ್ನೇ ದೊಡ್ಡದು ಮಾಡೋ ಮಾಧ್ಯಮಗಳನ್ನು `ಕಿರಿಕ್ ಕೀರ್ತಿ’ ಪ್ರಶ್ನೆ ಮಾಡಿದ್ದಾರೆ..!
ನಿಮಗೆ ಕರ್ನಲ್ ಸಂತೋಷ್ ಮೆಹದಿಕ್ ಗೊತ್ತಿರಬಹುದು. ಮೊನ್ನೆ ಮೊನ್ನೆ ಉಗ್ರರ ಗುಂಡಿಗೆ ಎದೆಯೊಡ್ಡಿ ವೀರಮರಣವನ್ನಪ್ಪಿದ ವೀರಯೋಧರಿವರು. ಇವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಕುಟುಂಬಸ್ಥರಿಗೆ ಸಾಂತ್ವಾನ ಹೇಳೋಕೆ ರಕ್ಷಣಾ ಸಚಿವರಾದ ಮನೋಹರ್ ಪಾರಿಕ್ಕರ್ ಬಿಟ್ಟರೆ ಬೇರೆ ಯಾರೂ ಹೋಗಲಿಲ್ಲ. ಅಪ್ಪನ ಅಂತ್ಯಸಂಸ್ಕಾರ ಮಾಡಿದ್ದು ಐದು ವರ್ಷದ ಮಗ..! ದೃಶ್ಯ ನೋಡಿದ್ರೆ ಕರುಳು ಚುರುಕ್ ಅನ್ನುತ್ತೆ..ಕಣ್ಣಲ್ಲಿ ನೀರು ತುಂಬುತ್ತೆ..!
ದಾದ್ರಿ ಅಂತ ಘಟನೆಗಳಿಗೇ ಹೆಚ್ಚು ಪ್ರಾಶಸ್ತ್ಯ ಕೊಡೋ ಮಾಧ್ಯಮಗಳಿಗೆ ದೇಶಕ್ಕಾಗಿ ಪ್ರಾಣವನ್ನೇ ಒತ್ತೆಯಾಗಿಟ್ಟ ಸೈನಿಕರ ಬಗ್ಗೆ ಹೇಳೋಕೆ ಆಗಲ್ಲ..! ರಾಜಕಾರಣಿಗಳಿಗೂ ಸೈನಿಕರ ಬಗ್ಗೆ ನಿರ್ಲಕ್ಷ..! ದೇಶದಲ್ಲಿ ಅಸಹಿಷ್ಣುತೆ ಇದೆ ಅಂತ ಬಾಯಿ ಬಾಯಿ ಬಡ್ಕೊಂಡು ಪ್ರಶಸ್ತಿ ಹಿಂತಿರುಗಿಸೋ ಸಾಹಿತಿಗಳು, ಸಂತೋಷ್ ಮೆಹದಿಕ್ರಂತಹ ಸೈನಿಕರು ಸಾಯ್ತಾ ಇದ್ದಾಗ ಕೇಂದ್ರ ಸರ್ಕಾರಕ್ಕೆ ಏಕೆ ಒತ್ತಡ ಹೇರಲ್ಲ..? ದೇಶ ಕಾಯೋ ಸೈನಿಕರ ಪರವಾಗಿ ನಿಂತು ಪ್ರಶಸ್ತಿಯನ್ನು ವಾಪಸ್ಸು ಕೊಡುವುದಿಲ್ಲವೇಕೆ..?! ಇಂಥಹದ್ದನ್ನೆಲ್ಲಾ ಕಿರಿಕ್ ಕೀರ್ತಿ ಪ್ರಶ್ನೆ ಮಾಡಿದ್ದಾರೆ..!
ಇದು ವೀರಯೋಧನ ವೀರಮರಣದ ಕಥೆ..! ಕಿರಿಕ್ ಕೀರ್ತಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ತಪ್ಪದೇ ನೋಡಿ..

LEAVE A REPLY

Please enter your comment!
Please enter your name here