ಬೆಂಗಳೂರು : ಡಿ.ಕೆ.ಶಿವಕುಮಾರೋತ್ಸವ ಪತ್ರ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಕಾರ್ಯಕರ್ತ ಜಿ.ಸಿ.ರಾಜು ಶಿವಕುಮಾರೋತ್ಸವ-23ಕ್ಕೆ ಪತ್ರ ಬರೆದಿದ್ದರು.
ನನ್ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಜಾಹೀರಾತು ಕೊಡ್ತೇವೆ ಅಂದ್ರು, ಬೇರೆಯವ್ರಿಗೆ ತೊಂದರೆ ಆಗಬಾರದು, ಅಂತಾ ಕೇದಾರನಾಥಕ್ಕೆ ಹೋಗಿದ್ದೆ. ರಾಜು ಬರೆದ ಪತ್ರ ಅವರ ವೈಯಕ್ತಿಕ ವಿಚಾರವಾಗಿದೆ. ವ್ಯಕ್ತಿ ಪೂಜೆ ಬೇಡ, ಪಕ್ಷಪೂಜೆ ಮಾಡಿ ಅಂತಾ ಮೊದಲೇ ಹೇಳಿದ್ದೇನೆ. ಇವತ್ತೂ ಅದನ್ನೇ ಹೇಳ್ತೇನೆ.. ನನಗೆ ಪಾರ್ಟಿ ಉತ್ಸವ ಬೇಕು. ವಿಧಾನಸೌಧದಲ್ಲಿ ಕಾಂಗ್ರೆಸ್ ಪಾರ್ಟಿಯನ್ನ ಕೂರಿಸಬೇಕು ಎಂದು ಹೇಳಿದ್ಧಾರೆ.