Drinking Milk: ರಾತ್ರಿ ಮಲಗುವ ಮೊದಲು ಹಾಲು ಕುಡಿಯುವುದೇಕೆ ಗೊತ್ತಾ..?

Date:

Drinking Milk: ರಾತ್ರಿ ಮಲಗುವ ಮೊದಲು ಹಾಲು ಕುಡಿಯುವುದೇಕೆ ಗೊತ್ತಾ..?

ಹಾಲು ಕುಡಿಯುವುದು ಒಳ್ಳೆಯದು ಎಂಬುದು ನಮ್ಮ ತಾತ- ಮುತ್ತಜ್ಜಿ ಕಾಲದಿಂದಲೂ ಹೇಳಿಕೊಂಡು ಬಂದಿರುವ ವಿಚಾರ. ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಹಾಲು ಮಕ್ಕಳಿಗಷ್ಟೇ ಅಲ್ಲ ವಯಸ್ಕರಿಗೂ ಕೂಡ ತುಂಬಾ ಪ್ರಯೋಜನಕಾರಿ ಆಗಿದೆ. ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆ ಉಂಟಾಗುವುದಿಲ್ಲ. ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲವಾಗಿ ಇಡುತ್ತದೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅಷ್ಟೇ ಅಲ್ಲ ಹಾಲಿನಲ್ಲಿ ಅನೇಕ ಪೋಷಕಾಂಶಗಳಿವೆ.
ಇನ್ನೂ ಮಾತ್ರವಲ್ಲದೆ ಪ್ರತಿ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲನ್ನು ಸೇವಿಸಿದರೆ ಉತ್ತಮ ಎಂದು ಅನೇಕ ತಜ್ಞರು ಸಲಹೆ ನೀಡುತ್ತಾರೆ. ಹಾಗಿದ್ದರೆ ರಾತ್ರಿ ಹಾಲು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ.
ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುವುದರಿಂದ ದೊರೆಯುವ ಪ್ರಯೋಜನಗಳು:
• ನಿದ್ರಾಹೀನತೆಯ ಸಮಸ್ಯೆ ಇರುವವರು ಅಥವಾ ಪೂರ್ಣ ನಿದ್ರೆಯನ್ನು ಪಡೆಯಲು ಸಾಧ್ಯವಾಗದವರು ರಾತ್ರಿ ಮಲಗುವ ಮೊದಲು ಒಂದು ಲೋಟ ಹಾಲು ಸೇವಿಸಿದರೆ, ಇದರಿಂದ ಪೂರ್ಣಪ್ರಮಾಣದ ನಿದ್ರೆಯನ್ನು ಪಡೆಯಬಹುದು.
• ಹಾಲು ಪೌಷ್ಟಿಕವಾದ ಆಹಾರವಾಗಿದೆ. ಖನಿಜಗಳು, ಜೀವಸತ್ವಗಳು ಮತ್ತು ಇದರ ಆರ್ಧ್ರಕ ಗುಣಲಕ್ಷಣಗಳ ಹೊರತಾಗಿ ಹಾಲು ಶಾಂತತೆ ಮತ್ತು ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳುವ ಗುಣಲಕ್ಷಣಗಳನ್ನು ಹೊಂದಿದೆ. ಆದ್ದರಿಂದ ಹಾಲು ಕುಡಿದು ಮಲಗುವುದರಿಂದ ಮನಸ್ಸು ಮತ್ತು ದೇಹ ಶಾಂತವಾಗಿರುತ್ತದೆ.
• ಹಾಲು ಕುಡಿಯುವುದರಿಂದ ದೇಹದಲ್ಲಿ ಡೋಪಮೈನ್ ಹಾರ್ಮೋನು ಸ್ರವಿಸುವಿಕೆಯು ಹೆಚ್ಚಾಗುತ್ತದೆ. ಡೊಪಮೈನ್ ಸಂತೋಷದ ಹಾರ್ಮೋನು ಆಗಿದ್ದು, ಅದು ಸಂತೋಷದ ಭಾವನೆಯನ್ನು ನೀಡುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ.
• ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಹೀಗಿರುವಾಗ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಜನರು ತಮ್ಮ ಆಹಾರಕ್ರಮದಲ್ಲಿ ಒಂದು ಲೋಟ ಹಾಲನ್ನು ಸೇರಿಸಬಹುದು.
• ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುವುದರಿಂದ ಬೆಳಗ್ಗೆ ಮಲವಿಸರ್ಜನೆ ಸುಲಭವಾಗುತ್ತದೆ. ಇದು ನಿಮ್ಮ ಜೀರ್ಣಶಕ್ತಿಯನ್ನು ಬಲಪಡಿಸುತ್ತದೆ ಅಲ್ಲದೆ ಇದು ಮಲಬದ್ಧತೆಯನ್ನು ಹೋಗಲಾಡಿಸುವಲ್ಲಿ ಪರಿಣಾಮಕಾರಿಯಾಗಿದೆ.
• ಕೀಲುನೋವು ಇರುವವರು ಅಥವಾ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿರುವವರು ಪ್ರತಿ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯಬೇಕು. ಒಂದು ಲೋಟ ಹಾಲು ಕ್ಯಾಲ್ಸಿಯಂ ಜೊತೆಗೆ ಫಾಸ್ಫರಸ್, ವಿಟಮಿನ್ ಡಿ ಮತ್ತು ಪ್ರೋಟೀನ್ ನ್ನು ಒದಗಿಸುತ್ತದೆ. ಅಲ್ಲದೆ ಇದು ಮೂಳೆಯನ್ನು ಬಲಪಡಿಸಲು ಸಹಕಾರಿ.
• ಒತ್ತಡದಿಂದ ಬಳಲುತ್ತಿರುವವರು ಹಾಲು ಸೇವಿಸಬೇಕು. ಒತ್ತಡವನ್ನು ಉಂಟುಮಾಡುವ ಕಾರ್ಟಿಸೋಲ್ ಹಾರ್ಮೋನು ಮಟ್ಟವನ್ನು ಕಡಿಮೆ ಮಾಡಲು ಉಪಯುಕ್ತವಾದ ಅಮೈನೋ ಆಮ್ಲವು ಹಾನಿನಲ್ಲಿ ಕಂಡಬರುತ್ತದೆ. ಆದ್ದರಿಂದ ಹಾಲನ್ನು ಸೇವಿಸುವ ಮೂಲಕ ಒತ್ತಡವನ್ನು ನಿವಾರಿಸಬಹುದು.

Share post:

Subscribe

spot_imgspot_img

Popular

More like this
Related

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರು: ರೌಡಿಗಳನ್ನು,...

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ! ಎಲ್ಲಿ ನಡೆಯಲಿದೆ?

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್...

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ ಎಚ್ಚರ!

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ!

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ! ನವದೆಹಲಿ:- ದೇಶದಲ್ಲಿ ಪ್ರತಿ...