No menu items!
12.4 C
Munich
Wednesday, April 29, 2026

ಸಂತಾ-ಬಂತಾ ಜೋಕ್ ಗಳಿಂದಲೇ ಕೋಟ್ಯಾಧಿಪತಿಯಾದ..!

Must read

ಸಂತಾ ಬಂತಾ ಜೋಕ್ ಗಳು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅಂತಹ ಸೂಪರ್ ಡೂಪರ್ ಸಂತಾ ಬಂತಾ ಜೋಕ್ ಗಳು ಕೋರ್ಟ್ ಮೆಟ್ಟಿಲೇರಿವೆ. ಏಕೆಂದರೆ ಸಂತಾ ಬಂತಾ ಜೋಕ್ ಗಳು ಸುಮಾರು 5000 ಕ್ಕೂ ಹೆಚ್ಚು ವೆಬ್ ಸೈಟ್ ಗಳಲ್ಲಿ ಬರುತ್ತಿವೆ. ಆದ್ದರಿಂದ ಅವುಗಳನ್ನು ನಿಷೇಧ ಹೇರಬೇಕು ಎಂದು ವಕೀಲರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ. ಆಗಲೇ ಒಂದು ಅಚ್ಚರಿಯ ವಿಷಯ ಬಹಿರಂಗಗೊಂಡಿದೆ. ಅದೇನೆಂದರೆ ಓರ್ವ ವ್ಯಕ್ತಿ ಸಂತಾ-ಬಂತಾ ಜೋಕ್ ಗಳಿಂದಲೇ ಕೋಟ್ಯಾಧಿಪತಿಯಾಗಿದ್ದಾನೆ ಎಂಬುದು..!
ಯೆಸ್.. ಜೆಡಿ ಘಾಯ್ ಎಂಬುವವರು ಸಂತಾ ಬಂತಾ.ಕಾಮ್ ಎಂಬ ವೆಬ್ ಸೈಟನ್ನು 1999ರಲ್ಲೇ ಆರಂಭಿಸಿದ್ದರು. ಅಲ್ಲದೇ ಕುಟುಂಬದ ಬ್ಯುಸಿನೆಸ್ ಬಿಟ್ಟು ಈ ವೆಬ್ ಸೈಟ್ ನತ್ತ ಗಮನ ಹರಿಸಿದ್ದರು. ಅದು ಈಗ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಸಂತಾ ಬಂತಾ ಕುರಿತಾದ ಪ್ರತಿಯೊಂದು ಜೋಕ್ ಗಳು ಅಲ್ಲಿ ಸಿಗುತ್ತವೆ.
ಅಚ್ಚರಿ ಎಂದರೆ ಸಂತಾಬಂತಾ.ಕಾಮ್ ವೆಬ್ ಸೈಟ್ ಯಶಸ್ಸಿಗೆ 8 ಜನರ ತಂಡವೇ ಪ್ರಮುಖ ಕಾರಣವಾಗಿತ್ತಂತೆ. ಜೆಡಿ ಅಜ್ಜಿ ಹೆಸರು ಬಂತೋ ಹಾಗೂ ಸಹೋದರಿ ಸಂತೋ ಎಂದಾಗಿತ್ತಂತೆ. ಇಬ್ಬರ ಹೆಸರನ್ನು ಬಳಸಿಕೊಂಡು ಕುಟುಂಬದವರು ತಮಾಷೆ ಮಾಡುತ್ತಿದ್ದರಂತೆ. ಇದನ್ನೇ ಬಂಡವಾಳ ಮಾಡಿಕೊಂಡ ಜೆಡಿ ಅವರ ಹೆಸರಿನಲ್ಲೇ ವೆಬ್ ಸೈಟ್ ಆರಂಭಿಸಿ ಭರ್ಜರಿ ಯಶಸ್ಸು ಕಂಡಿದ್ದಾರೆ.
ಜೆಡಿಯವರ ವೆಬ್ ಸೈಟನ್ನು ಪ್ರತಿದಿನ 6 ಲಕ್ಷಕ್ಕಿಂತಲೂ ಹೆಚ್ಚು ಮಂದಿ ನೋಡುತ್ತಾರೆ. ಸಂತಾ ಬಂತಾ ಜೋಕ್ ಗಳು ಜಾತ್ಯಾತೀತ, ಯಾವುದೇ ಧರ್ಮಕ್ಕೆ ಹಾಗೂ ಭಾವನೆಗಳಿಗೆ ಧಕ್ಕೆ ತರುವುದಿಲ್ಲ ಎಂದು ಅಲ್ಲಿ ಕೆಲಸ ಮಾಡುವವರು ಅಭಿಪ್ರಾಯಪಡುತ್ತಾರೆ. ಆದ್ದರಿಂದ ಈ ವೆಬ್ ಸೈಟ್ ಭರ್ಜರಿ ಯಶಸ್ಸು ಕಂಡಿದ್ದು, ಜೆಡಿಯವರು ಕೋಟ್ಯಾಂತರ ರೂಪಾಯಿ ಆದಾಯ ಗಳಿಸುವಂತಾಗಿದೆ. ವಿಶೇಷವೆಂದರೆ ಜೋಕ್ ಗಳನ್ನು ಹೇಳಿಕೊಂಡು ಕೋಟ್ಯಾಂತರ ರೂಪಾಯಿ ಕಮಾಯಿ ಮಾಡಿದ ಜಗತ್ತಿನ ಏಕೈಕ ವ್ಯಕ್ತಿ ಜೆಡಿಯವರೇ ಇರಬೇಕು ಅಲ್ಲವೇ..?

  • ರಾಜಶೇಖರ ಜೆ

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಇದು ನಮ್ಮ ಕನ್ನಡ…ಇವರು ನಮ್ಮ ಕನ್ನಡಿಗರು..! ಬೆಂಗಳೂರಿನ ಜನರಿಗೆ ಕಿರಿಕ್ ಕೀರ್ತಿ ಪ್ರಶ್ನೆಗಳು..!

ಅವಳು ಸುಶ್ರಾವ್ಯ, ಇವನು ಸುಶಾಂತ್..! ಅವರ ಪ್ರೀತಿ ಕುರುಡಲ್ಲ…! ಅವನು ನೂರು ಸಲ ಐ ಲವ್ ಯೂ ಅಂದ್ರೂ ಅವಳು ಏನೂ ಹೇಳಲಿಲ್ಲ..

ನಿಮಗೆ ಸ್ಟೇಜ್ ಫಿಯರ್ ಇದ್ಯಾ..? ಡೋಂಟ್ ವರಿ ಭಯದ ಮುಂದೆ ಜಯವಿದೆ..! ಈ ಸ್ಟೋರಿ ಓದಿ..!

ಬರಲಿದೆ `ಬಲೂನ್ ಇಂಟರ್ನೆಟ್..’! ಹೊಸ ಯೋಜನೆಯಲ್ಲಿ ಭಾರತ ಸರ್ಕಾರದ ಜೊತೆ ಕೈ ಜೋಡಿಸಿದ ಗೂಗಲ್..!

ದೇಶದ ಮೊದಲ `ಅಂಧರ ಸ್ನೇಹಿ’ ರೈಲ್ವೇ ನಿಲ್ದಾಣ..! ಮೈಸೂರು ರೈಲ್ವೇ ನಿಲ್ದಾಣದಲ್ಲೀಗ ಬ್ರೈಲ್ ಲಿಪಿಯಲ್ಲಿ ರೈಲ್ವೇ ವೇಳಾಪಟ್ಟಿ..!

ನಮ್ ಟೈಮು ಸರಿಇಲ್ಲ ಅಂತಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ…?! ಕನ್ನಡದ ಹುಡುಗರು ಮಾಡಿದ ಈ ಕಿರುಚಿತ್ರ ನೋಡಿ ಗೊತ್ತಾಗುತ್ತೆ..!

ಸ್ಮೋಕಿಂಗ್ ಈಸ್ ಇಂಜ್ಯೂರಿಯಸ್ ಟು ಹೆಲ್ತ್, ಹಾರ್ಟ್ ಅಂಡ್ ಫ್ಯಾಮಿಲಿ..! ಧೂಮಪಾನ ತ್ಯಜಿಸಿದ 20 ನಿಮಿಷದಿಂದಲೇ ಹಂತಹಂತವಾಗಿ ಮೊದಲಿನಂತೆಯೇ ಆಗ್ತೀರಿ..!

ಚೋಟಾ ಟೀಚರ್ ಬಂದ್ರು ದಾರಿ ಬಿಡಿ..! 11ರ ಪೋರ 125 ಗ್ರಾಮಕ್ಕೆ ಅಕ್ಷರದಾನ ಮಾಡುತ್ತಿದ್ದಾನೆ..!

`ವಾಸ್ತುಪ್ರಕಾರ’ ಮನೆಮುಂದೆ ಮರಗಳು ಇರಬಾರದಂತೆ..! ವಾಸ್ತುಪ್ರಕಾರ ಮರಗಳನ್ನು ಸಾಯಿಸುತ್ತಿರೊ ಇವರೆಂಥಾ ಅವಿವೇಕಿಗಳು..!

ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಕನ್ನಡ ಕಲರವ..! ರಾಜ್ಯೋತ್ಸವದ ದಿನ ಕನ್ನಡಿಗರಿಗೆ ಕನ್ನಡದಲ್ಲೇ ಸ್ವಾಗತ..!

ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು

17ರ ಪೋರ ಈಗ `ನಾಸ’ ಉದ್ಯೋಗಿ..! ಕ್ಯಾವೆಲಿನ್ ಗೆ ಇನ್ನೂ 17ವರ್ಷ ಈಗಲೇ ವಿಮಾನ ಹಾರಿಸಬಲ್ಲ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article