ತಮ್ಮ ಮಕ್ಕಳ ಸಾಮರ್ಥ್ಯದ ಬಗ್ಗೆ ಪ್ರತೀಯೊಬ್ಬ ತಂದೆ ತಾಯಿಗೂ ಗೊತ್ತು ಆದ್ರೆ ವಿಪರ್ಯಾಸ ಅಂದ್ರೆ ಅವ್ರು ಅದ್ನ ಒಪ್ಕೊಳ್ಳೊಕೇನೆ ತಯಾರಿಲ್ಲ, ಮಕ್ಕಳ ಸಾಮರ್ಥ್ಯಕ್ಕೂ ಮೀರಿ ಅವ್ರನ್ನು ಹಲವು ವಿಷಯಗಳಿಗೆ ದಬ್ಬಲಾಗುತ್ತದೆ.
ನಮ್ಮ ಭಾರತದಲ್ಲಿ,ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಲ್ಲಿ ಅನೇಕರು ಈ ರೀತಿಯಾದ ಒತ್ತಡದಿಂದಲೇ ಸಾವನ್ನಪ್ಪಿರುತ್ತಾರೆ.ಇದೊಂದು ತೀರಾ ಆತಂಕದ ವಿಷಯವಾಗಿದೆ.
ಸಂಜಯ ಸಿನ್ಹಾ,ಪಾಟ್ನಾ ಪತ್ರಕರ್ತ ಹೇಳೋ ಪ್ರಕಾರ ತಪ್ಪಿತಸ್ಥರ ಸ್ಥಾನದಲ್ಲಿ ನಿಂತಿರೋ ಶಿಕ್ಷಕರು ಹಾಗೂ ಹೆತ್ತವರು ಹಾಗೂ ಸಮಾಜ ತಮ್ಮ ಮಕ್ಕಳಿಂದ ಏನನ್ನು ಬಯಸುತ್ತಿದೆ ಎಂಬುದನ್ನು ಮತ್ತೊಮ್ಮೆ ಯೋಚಿಸಬೇಕಾಗುತ್ತದೆ ಎನ್ನುತ್ತಾರೆ.
“Sucide?there is always a tomorrow “ ಇದರ ಕುರಿತಾಗಿ ಇವರು ಬರೆದ ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಇವರು ನೀಡಿದ ಅದ್ಭುತ ಸಂದರ್ಶನ..ನೀವೇ ಓದಿ.
ವಿದ್ಯಾರ್ಥಿಗಳು ಎದುರಿಸುತ್ತಿರುವ ಒತ್ತಡದ ಮುಖ್ಯ ಕಾರಣಗಳೇನು?
ಮುಖ್ಯ ಕಾರಣ ಸಮಾಜ ಹಾಗೂ ಕುಟುಂಬ.
ಹೆತ್ತವರು ತಮ್ಮ ಮಕ್ಕಳನ್ನು ಇತರರಿಗೆ ಹೋಲಿಸುವುದರಿಂದ ಹೆತ್ತವರೇ ಈ ಒತ್ತಡಕ್ಕೆ ಮುಖ್ಯ ಕಾರಣವಾಗುತ್ತಾರೆ.
ಶಿಕ್ಷಕರ ಹೊರತಾಗಿ ಶಾಲೆಯಲ್ಲಿ ಮಾನಸಿಕ ತಜ್ನರಿರುತ್ತಾರೆಯೆ?
ಹೌದು,ಅದು ನಿಜಕ್ಕೂ ಅಗತ್ಯ.ಆದ್ರೆ ಅದು ಸಣ್ಣ ಮಕ್ಕಳಿಗೆ ಅಗತ್ಯವಿಲ್ಲ ಆದ್ರೆ 11 ಮತ್ತು 12ನೇ ತರಗತಿಯ ಮಕ್ಕಳಿಗೆ ಅಗತ್ಯವಿದೆ.ಆ ಕ್ಲಾಸ್ ನ ಮಕ್ಕಳಿಗೆ ಕೌನ್ಸೆಲ್ಲಿಂಗ್ ತೀರ ಅಗತ್ಯ,ಇದು ಒತ್ತಡಕ್ಕೊಳಗಾದ ಮಕ್ಕಳನ್ನು ಗುರುತಿಸಿ,ಅವರ ಮನಸ್ಸಿನಲ್ಲಿರುವ ತಪ್ಪು ಅಭಿಪ್ರಾಯಗಳನ್ನು ಕಿತ್ತೆಸೆದು ಅವರು ತಪ್ಪು ಹೆಜ್ಜೆ ಇಡುವುದನ್ನು ತಪ್ಪಿಸುತ್ತದೆ.
ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಒತ್ತಡದಿಂದ ಪಾರು ಮಾಡಲು ಏನು ಕ್ರಮ ಕೈಗೊಳ್ಳಬೇಕು?
ಕೇವಲ ಶಾಲೆಗಳಿಂದ ಮಾತ್ರ ಇದು ಸಾಧ್ಯವಿಲ್ಲ,ಬದಲಾಗಿ ಇದು ಸಮಾಜ,ಹೆತ್ತವರು,ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಒಮ್ಮತವಾಗಿ ಇದನ್ನು ಬದಲಾಯಿಸಬೇಕು.ಪ್ರತಿಯೊಬ್ಬ ಮೊದಲಿಗನಾಗಬೇಕು,ಪ್ರತೀಯೊಬ್ಬ ಟಾಪರ್ ಆಗಬೇಕು,ಇಂತಹ ಮನೋಭಾವನೆಯನ್ನು ಬದಲಾಯಿಸಬೇಕು.ಜನ ಕಲೀಬೇಕು ಮತ್ತು ಪ್ರತೀಯೊಬ್ಬ ಟಾಪರ್ ಆಗಲು ಸಾಧ್ಯವಿಲ್ಲ ಎಂಬ ಸತ್ಯನ ಒಪ್ಪ್ಕೊಳ್ಲೇಬೇಕು.
ಹೆತ್ತವರು ತಮ್ಮ ಮಕ್ಕಳಿಗೆ ಯಾವ ರೀತಿಯಲ್ಲಿ ಸಹಕರಿಸಲು ಸಾಧ್ಯ?
ಹೆತ್ತವರು ತಮ್ಮ ಮಕ್ಕಳಿಗೆ ಸಮಯೋಚಿತ ಸಲಹೆ ನೀಡಬೇಕು.ತಮ್ಮ ತಮ್ಮ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿಯಿದೆಯೋ ಅದನ್ನು ಕಲಿಯಲು ಬಿಡಬೇಕು.ತಮ್ಮ ವಿಚಾರ ಧಾರೆಗಳಿಂದ ಡಾಕ್ಟರ್,ಇಂಜಿನೀಯರ್ ಹಾಗೂ ಐ.ಏ.ಎಸ್ ನ್ನು ದೂರವಿಟ್ಟಷ್ಟು ಉತ್ತಮ.
ಅನೇಕ ವರುಷಗಳಿಂದಲೂ ಹಿಂದೆ ಇದ್ದ ವಿದ್ಯಾರ್ಹತೆಯ ಪ್ರಕಾರ ಟಾಪರ್ ಆಗಲು ಕೇವಲ 70% ಅಂಕ ಸಾಕಿತ್ತು,ಆದ್ರೆ ಈಗ 99% ಬೇಕಾಗಿದೆ.ಮಕ್ಕಳ ಮಾನಸಿಕ ಒತ್ತಡಕ್ಕೆ ಇದೇ ಕಾರಣವೆ?
ನಿಜ!ಅಧಿಕ ಅಂಕಗಳಿಂದ ಸ್ಪರ್ಧಾತ್ಮಕ ವಾತಾವರಣಕ್ಕೆ ತೀವ್ರವಾಗಿ ಆಸ್ಪದ ಕೊಟ್ಟಂತೆ.ಇದು ಒತ್ತಡಕ್ಕೆ ಮೂಲ ಕಾರಣ.ಮೌಲ್ಯ ಮಾಪನ ತೀರಾ ಸ್ಟ್ರಿಕ್ಟ್ ಆಗಿದ್ದಲ್ಲಿ ಸಿಗುವ ಅಂಕಗಳು ಕಡಿಮೆಯಾಗುತ್ತವೆ.
ಆರ್ಥಿಕವಾಗಿ ಸಮರ್ಥರಲ್ಲದ ಹೆತ್ತವರು,ಪ್ರತಿಷ್ಟಿತ ಶಾಲಾ ಕಾಲೇಜುಗಳ ವೆಚ್ಚವನ್ನು ಭರಿಸಲು ಅಸಾಧ್ಯವಾದ್ದರಿಂದ,ಅಧಿಕ ಅಂಕ ತೆಗೆಯುವಂತೆ ಒತ್ತಡವನ್ನು ಮಕ್ಕಳ ಮೇಲೆ ಹೇರುತ್ತಾರೆ,ಇದಕ್ಕಿರೋ ಪರಿಹಾರವೇನು??
ಅರ್ಹತೆಯ ಮೇಲೆ ಕಾಲೇಜಲ್ಲಿ ಸೀಟು ಸಿಗದಿದ್ದಲ್ಲಿ ನೀವು ಹೆಚ್ಚಿನ ದುಡ್ಡು ಕೊಟ್ಟು ಸೀಟು ಪಡೆಯಬೇಕು,ಇದು ಮಾನಸಿಕ ಒತ್ತಡಕ್ಕೆ ಹಾಗೂ ಆತ್ಮಹತ್ಯೆಗೆ ತುಂಬಾ ದೊಡ್ದ ಕಾರಣವಾಗಿದೆ.ಇದಕ್ಕೆ ಪರಿಹಾರವೇನೆಂದರೆ ಮ್ಯಾನೇಜ್ ಮೆಂಟ್ ಕೋಟಾವನ್ನು ಕಿತ್ತೊಗೆಯಬೇಕು.ವಿದ್ಯಾಭ್ಯಾಸ ಮಾರುಕಟ್ಟೆಯಲ್ಲಿ ಖರೀದಿಸುವ ವಸ್ತುವಾಗುತ್ತಿದೆ.ಇದು ತೀರಾ ಅಪಾಯ ಹಾಗೂ ತೀವ್ರ ಹಾನಿಯುಂಟು ಮಾಡುವುದರಲ್ಲಿ ಸಂದೇಹವಿಲ್ಲ.
ಹೆತ್ತವರು ತಮ್ಮ ಮಕ್ಕಳ ಅರ್ಹತೆಯನ್ನು ಸಮರ್ಪಕವಾಗಿ ನಿರ್ಧರಿಸಲು ವಿಫಲರೆ?
ಪ್ರತೀಯೊಬ್ಬ ತಂದೆ ತಾಯಿಗೂ ಇದು ತಿಳಿದ ವಿಷಯ.ಆದ್ರೆ ಅವ್ರು ಅದನ್ನ ಒಪ್ಪಿಕೊಳ್ಳಲು ತಯಾರಿಲ್ಲ.ಅನೇಕ ಸ್ಪೆಷಲ್ ಹಾಗೂ ಕೋಚಿಂಗ್ ಕ್ಲಾಸ್ ಗಳಿಗೆ ಮಕ್ಕಳನ್ನು ಅವರಿಚ್ಚೆಗೆ ವಿರುದ್ದವಾಗಿ ದಬ್ಬುವುದರಿಂದ ಅವರ ಸಾಮರ್ಥ್ಯಕ್ಕೂ ಮಿಗಿಲಾದ ಒತ್ತಡ ಅವರಿಗಾಗುತ್ತದೆ.
ಹೆತ್ತವರು,ಶಿಕ್ಷಕರು ಹಾಗೂ ಸಹಪಾಠಿಗಳು ನೀಡುವ ಒತ್ತಡಗಳಲ್ಲಿ ಯಾವುದು ತೀವ್ರವಾಗಿ ಹಾನಿ ತರುವಂಥದ್ದು?
ಹೆತ್ತವರ ಒತ್ತಡವೆ ತೀವ್ರ ಅಪಾಯಕಾರಿಯಾಗಿದೆ.ಯಾವಾಗ ತನ್ನ ಮಗುವಿಗೆ ತನ್ನ ಹೆತ್ತವರ ಆಕಾಂಕ್ಷೆಯಂತೆ ಬೆಳೆಯಲು ತೀರಾ ಕಷ್ಟವೆನಿಸುತ್ತದೋ ಆವಾಗ ಆ ಮಗು ಮಾನಸಿಕ ಆಘಾತಕ್ಕೊಳಗಾಗುತ್ತದೆ.ಇದರಿಂದ ಆತ್ಮಹತ್ಯೆಯತ್ತ ಮಗು ತನ್ನ ಹೆಜ್ಜೆಯಿಡುವ ಸಾಧ್ಯತೆಗಳನೇಕ.
ಹೆತ್ತವರ ಅಧಿಕ ಆಕಾಂಕ್ಷೆಯ್ಯೇ ಮಗುವನ್ನು ಕೊಲ್ಲುತ್ತದೆ
ಬಿಹಾರ್ ನಲ್ಲೇ ಯಾಕೆ ಪದೇ ಪದೇ ಈ ತರನಾದ ಆತ್ಮಹತ್ಯೆಗಳು ಸಂಭವಿಸುತ್ತದೆ?
ಬಿಹಾರ್ ನಲ್ಲಿ ಹೆಚ್ಛಿನ ಉದ್ಯಮಕ್ಕೆ ಅವಕಾಶಗಳಿಲ್ಲ.ಪ್ರೈವೇಟ್ ಕಂಪನಿಗಳಲ್ಲಿ ಉದೋಗಗಳಿಲ್ಲ.ಅಲ್ಲಿನ ಅನೇಕ ಅನಾಗರಿಕ ಜನರು ಐ.ಏ.ಎಸ್ ನವರ ಗೌರವ ಗಳನ್ನೆಲ್ಲಾ ನೋಡಿ ಕೊಂಡು ತಮ್ಮ ಮಕ್ಕಳಿಗೆ ಅದೇ ತರನಾದ ಕೆಲಸಕ್ಕಾಗಿ ಪರಿಶ್ರಮಿಸುವಂತೆ ಹೇಳುತ್ತಾರೆ.ತಮ್ಮ ಮಕ್ಕಳಿಗೆ UPSC ಪರೀಕ್ಷೆಗಳನ್ನು ಪಾಸು ಮಾಡುವ ಸಾಮರ್ಥವಿದೆಯೋ ಇಲ್ಲವೋ ಎಂಬುದರ ಗೊಡವೆ ಇಲ್ಲದ ಅವರು ಮಕ್ಕಳ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತಾರೆ.ಇದರಿಂದ ಆತ್ಮಹತ್ಯೆಗೆ ಕಾರಣ ವಾಗುತ್ತದೆ.
ನಿಮ್ಮ ಈ ಪುಸ್ತಕ ಬರೆಯಲು ನೀವು ಪಟ್ಟ ಶ್ರಮ
ಈ ವಿಷಯಕ್ಕೆ ಸಂಬಂಧಿಸಿ ನಾನು ಅನೇಕ ವರದಿಗಳನ್ನು,ಪುಸ್ತಕಗಳನ್ನು ಓದಿದ್ದೇನೆ.ಅನೇಕ ಡಿ-ಅಡಿಕ್ಷನ್ ಕೇಂದ್ರಗಳಿಗೆ ಭೇಟಿ ನೀಡಿದ್ದಲ್ಲದೆ,ತಮ್ಮ ಜೀವನದ ಒತ್ತಡವನ್ನು ಅನುಭವಿಸಲು ಅಸಮರ್ಪಕವಾಗಿ ಮಾದಕ ದ್ರವ್ಯಗಳ ಮೊರೆಹೋದ ವಿದ್ಯಾರ್ಥಿಗಳನ್ನೂ ಭೇಟಿಯಾಗಿದ್ದೇನೆ.
ನಿಮ್ಮ ಈ ಪುಸ್ತಕ ಹೆತ್ತವರಿಗೋ,ಮಕ್ಕಳಿಗೋ ಅಥವಾ ಶಿಕ್ಷಕರಿಗೋ??
ಇದು ಸಮಾಜಕ್ಕಾಗಿ.
ಇದರಲ್ಲಿ ಮಕ್ಕಳಿಗೆ ತಾವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಫಲರಾದಾಗ, ಜೀವನದಲ್ಲಿ ಜಯಶಾಲಿಯಾಗಲು ಇರುವ ನಾಲ್ಕು ದಾರಿಗಳ ಬಗ್ಗೆ ಅವರಿಗೆ ಹೇಳಲಾಗಿದೆ.ಜೀವನದಲ್ಲಿ ಕೇವಲ ಡಾಕ್ಟರ್ ಆಗುವುದೇ ಆರಂಭವೂ ಅಲ್ಲ,ಅಂತ್ಯವೂ ಅಲ್ಲ,ಅದಕ್ಕೂ ಮಿಗಿಲಾಗಿ ಇನ್ನೂ ಇದೆ.
ಶಿಕ್ಷಕರಿಗಾಗಿ, ಇದು ವಿದ್ಯಾರ್ಥಿಯನ್ನು ಹೇಗೆ ಒತ್ತಡ ರಹಿತರನ್ನಾಗಿಸಬಹುದು ಎಂಬ ಸಲಹೆಯನ್ನು ನೀಡುತ್ತದೆ.
ಇನ್ನು ಹೆತ್ತವರಿಗಾಗಿ ಇಲ್ಲಿ ಒಂದು ಸೈಂಟಿಫಿಕ್ ಪೇರೆಂಟಿಂಗ್ ಎಂಬ ಪ್ರತ್ಯೇಕ ಅಧ್ಯಾಯವಿದೆ.ಇದನ್ನು ಅವರು ಓದಲೇ ಬೇಕು.
ನಿಮ್ಮ ಪುಸ್ತಕಕ್ಕಾಗಿ ಈ ವಿಷಯವನ್ನೇ ಯಾಕೆ ಆಯ್ಕೆ ಮಾಡಿದ್ದೀರಿ?
ನಾನೂ ವಿದ್ಯಾರ್ಥಿಯಾಗಿ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಒತ್ತಡವನ್ನು ಅನುಭವಿಸಿದ್ದೇನೆ.ಆ ವಯಸ್ಸಿನಲ್ಲಿ ಇದು ಹೇಗೆ ನಮ್ಮನ್ನು ಕೊಲ್ಲುತ್ತದೆ ಹಾಗೂ ಇದು ಹೇಗೆ ವರ್ಷದಿಂದ ವರ್ಷಕ್ಕೆ ತೀವ್ರ ಸ್ವರೂಪವನ್ನು ತಾಳುತ್ತಿದೆ ಎಂಬ ಅರಿವು ನನಗಿದೆ.
ನಿಮ್ಮ ಈ ಪುಸ್ತಕದಿಂದ ಓದುವವರಲ್ಲಿ ಇದು ಬದಲಾವಣೆ ತರಲು ಸಾಧ್ಯ ಎಂದು ಭಾವಿಸಿದ್ದೀರಾ??
ನಾನು ಇದ್ರ ಬಗ್ಗೆ ಚರ್ಚೆಯನ್ನು ಆರಂಭಿಸುವೆನು ಮತ್ತು ಅದೇ ನನ್ನ ಗುರಿ.ಜನರು ಆತ್ಮಹತ್ಯೆಯ ಬಗ್ಗೆ ಹಾಗೂ ವಿದ್ಯಾರ್ಥಿಗಳ ಒತ್ತಡದ ಬಗ್ಗೆ ಮಾತಾಡಬೇಕು,ಯಾರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವತ್ತ ಕಾಣುತ್ತಿಲ್ಲ.
ನಾನು ಈ ವಿಷಯವಾಗಿ ಚರ್ಚೆ ಖಂಡಿತಾ ಮಾಡುತ್ತೇನೆ ,ಕೇವಲ ಮಾತುಕತೆಗಳಿಂದಲೇ ಸಮಸ್ಯೆಯನ್ನು ಬಗೆಹರಿಸುವುದು ಸಾಧ್ಯ.
ಸ್ನೇಹಿತರೇ ! ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ಯಾಕೆ ಚಿವುಟುತ್ತೀರಿ? ಜನರ ಮಾಹಿತಿಗನುಗುಣವಾಗಿ ಈ ಸಂದರ್ಶನವನ್ನು ಅನುವಾದಿಸಿದ್ದೇವೆ.ದಯವಿಟ್ಟು ಈ ಪುಸ್ತಕವನ್ನು ಓದಿ ನಮ್ಮ-ನಿಮ್ಮ ಸಮಸ್ಯೆಗಳನ್ನು ತಕ್ಕ ಮಟಿಗಾದ್ರೂ ಪರಿಹರಿಸಲು ಪ್ರಯತ್ನಿಸೋಣ,ಮಕ್ಕಳ ಸುಂದರ ಬದುಕಿನ ಕನಸಿನ ಗೋಪುರವನ್ನು ಕಟ್ಟಿ ಬೆಳೆಸೋಣ.ಇಂದಿನ ಮಕ್ಕಳೇ ಮುಂದಿನ ಜನಾಂಗ!
- ಸ್ವರ್ಣಲತ ಭಟ್
POPULAR STORIES :
ನೋಡ್ರಿ ಇಲ್ಲಿದೆ ಕೋಟಿಗೊಬ್ಬ2 ಟ್ರೇಲರ್..! ಒಂದಲ್ಲ ಎರಡೆರಡು ಟ್ರೇಲರ್ ಒಂದು ಕನ್ನಡ ಇನ್ನೊಂದು?
ದಿ ನ್ಯೂ ಇಂಡಿಯನ್ ಟೈಮ್ಸ್ ಮೊದಲ ವಾರ್ಷಿಕೋತ್ಸವ
ನೀವೂ ಯೂಟ್ಯೂಬ್‍ನಲ್ಲಿ ವಿಡಿಯೋ ನೋಡ್ತೀರಾ..? ಇಲ್ಲಿವೆ 15 ಯೂಟ್ಯೂಬ್ ಟ್ರಿಕ್ಸ್..!
ಮುಂಬೈನ ಮರೀನ್ ಡ್ರೈವ್‍ನಲ್ಲಿರೋ ಕಲ್ಲುಗಳೇಕೆ ಹೀಗಿವೆ ಗೊತ್ತಾ.?