ಕಣ್ಣಿನ ಒತ್ತಡ ನಿವಾರಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್.!

1
385

ಕಣ್ಣಿನ ಒತ್ತಡ ನಿವಾರಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್..!

ಪಂಚೇಂದ್ರಿಯಗಳಲ್ಲಿ ಅತೀ ಸೂಕ್ಷ್ಮವಾದ ಇಂದ್ರಿಯ ಕಣ್ಣು. ದೇಹಕ್ಕೆ ಆಯಾಸವಾಗಿರುವುದು ಬೇಗ ಗೊತ್ತಾಗುತ್ತೆ. ಆದರೆ ದಿನಂಪ್ರತಿ , ಪ್ರತಿಕ್ಷಣ ಕಣ್ಣು ಬಳಲುತ್ತಿರುವುದು ತಕ್ಕಮಟ್ಟಿಗೆ ಗೊತ್ತೇ ಆಗಲ್ಲ…ಕಣ್ಣಿನ ಒತ್ತಡ ನಿವಾರಣೆ ಅತ್ಯಂತ ಅಗತ್ಯ.
ಈಗಂತೂ ನಾವು – ನೀವು ದಿನದ ಬಹುತೇಕ ಸಮಯ ಮೊಬೈಲ್, ಲ್ಯಾಪ್ ಟಾಪ್ , ಟಿವಿ ಅಂತನೇ ಕಾಲ ಕಳೆಯುತ್ತೇವೆ. ಹೀಗಾಗಿ ಕಣ್ಣು ಬಹಳಷ್ಟು ದಣಿಯುತ್ತದೆ. ಹಾಗಾಗಿ ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು.
ಕಣ್ಣಿನ ಒತ್ತಡ ನಿವಾರಣೆಗೆ ಕಣ್ಣನ್ನು ದಿನದಲ್ಲಿ ಕನಿಷ್ಠ 7 – 10 ಬಾರಿಯಾದರೂ ಗಡಿಯಾರದಂತೆ ತಿರುಗಿಸುವುದು, ಐ ಡ್ರಾಪ್ ಬಳಕೆ ಸೇರಿದಂತೆ ಅನೇಕ ವಿಧಾನಗಳಿವೆ.
ಎಲ್ಲಕ್ಕಿಂತ ಮುಖ್ಯವಾಗಿ ನಾವು ಕಣ್ಣನ್ನು ತೊಳೆಯಬೇಕು. ಹೇಗೆ ಕಣ್ಣನ್ನು ತೊಳೆಯಬೇಕು? ಈ ವಿಡಿಯೋ ನೋಡಿ

 

Vanhi crezy world ಎಂಬ ಯೂಟ್ಯೂಬ್ ಚಾನಲ್ ನಲ್ಲಿ ಸಾತ್ವಿಕ್ ಎಂಬ ಹುಡುಗ ಬೇರೆ ಬೇರೆ ವಿಷಯಗಳ ಬಗ್ಗೆ ಇಂಥಾ ಸಿಂಪಲ್ ಟಿಪ್ಸ್ ಕೊಡುತ್ತಿರುತ್ತಾನೆ. ಚಾನಲ್ Subscribe ಮಾಡಿ. ಉತ್ಸಾಹಿ ಬಾಲಕನನ್ನು ಪ್ರೋತ್ಸಾಹಿಸಿ.

 

ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದೀರ..? ಮಲಗಿದ ಕೂಡಲೇ ಸರಿಯಾಗಿ ನಿದ್ರೆ ಬರುತ್ತಿಲ್ಲವೇ. ಇದನ್ನು ದಯವಿಟ್ಟು ನಿರ್ಲಕ್ಷಿಸಬೇಡಿ. ನಿದ್ರೆ ಸಮಸ್ಯೆಯು ಮಾನಸಿಕ‌ ಒತ್ತಡ, ಖಿನ್ನತೆಗೆ ಕಾರಣವಾಗುತ್ತಿದೆ. ನೆನಪಿನ‌ ಶಕ್ತಿ‌ ಕಡಿಮೆ ಮಾಡುತ್ತೆ.ಕನಿಷ್ಟ 6-7 ಗಂಟೆ ನಿದ್ರೆ ಬೇಕು. ನಿಮಗೆ ನಿದ್ರೆ ಬರುತ್ತಿಲ್ಲ‌ ಅಂತಾದ್ರೆ ಹೀಗೆ ಮಾಡಿ. ನಿದ್ರೆಯನ್ನು ಪ್ರೀತಿಸಿ…!

*ನಿದ್ರೆಯೂ ಸಹ ದಿನ ನಿತ್ಯದ ಚಟುವಟಿಕೆಯೇ.‌ ಹಾಗಾಗಿ ನಿದ್ರಾ ಮಾಡೋ‌ ವಿಷಯದಲ್ಲೂ ಶಿಸ್ತು ಮುಖ್ಯ. ಪ್ರತಿ‌ದಿನ ಒಂದೇ ಟೈಮ್ ಗೆ ಹಾಸಿಗೆ ಕಡೆಗೆ ಹೋಗಿ.

*ಕಾಫಿ, ಟೀ , ಲಘುಪಾನೀಯದಂತಹ‌ ಪಾನೀಯಗಳ ಸೇವೆಯನ್ನು ಆದಷ್ಟು ಕಡಿಮೆ ಮಾಡಿ. ಮಲಗುವ ವೇಳೆ ಲಘು‌ ಆಹಾರ, ಖಾರ ಪದಾರ್ಥ ಬೇಡ.

*ಕತ್ತಲೆ ಕೋಣೆಯಲ್ಲಿ ಮಲಗಿ ನಿದ್ರೆಗೆ ಜಾರಿ. ಸಣ್ಣ ಬೆಳಕು ನಿಮ್ಮನ್ನು ಪದೇ ಪದೇ ಎಚ್ಚರ ಮಾಡಬಹುದು.

*ಮಲಗುವ ಮುನ್ನ ಸಾಧ್ಯವಾದ್ರೆ ಬಿಸಿ ನೀರಿನ ಸ್ನಾನ ಮಾಡಿ.‌ ಅದು ದೇಹದ ಉಷ್ಣತೆ ಹೆಚ್ಚಿಸಿ, ಕೂಡಲೇ ತಂಪು ಮಾಡುತ್ತೆ. ಆಗ ನೀವು ನಿರಾಳರಾಗಬಹುದು.‌ ಆಗ ಒಳ್ಳೆಯ‌ ನಿದ್ರೆ ಬರುತ್ತೆ.

*ನಿದ್ರೆಯನ್ನು ಪ್ರೇರೇಪಿಸೋ‌ ಗುಣ ಹಾಲಿನಲ್ಲಿದ್ದು,‌ ಮಲಗುವ ಮುನ್ನ ಬಿಸಿ ಹಾಲು ಕುಡಿಯಿರಿ.

*ಸಾಕುಪ್ರಾಣಿಗಳನ್ನು ಹಾಸಿಗೆಯಿಂದ ದೂರವಿಡಿ.

*ಅಲರಾಂ ಅಭ್ಯಾಸಬೇಡ.


* ಮೊಬೈಲ್ ಸ್ವಿಚ್ ಆಫ್ ಮಾಡಿರಿ.

*ಧೂಮಪಾನ ಮಾಡ್ಬೇಡಿ.

 

1 COMMENT

LEAVE A REPLY

Please enter your comment!
Please enter your name here