ಇಷ್ಟದ ಬೈಸಿಕಲ್ಲನ್ನು, ಬೈಕನ್ನೇರಿ ಜಾಲಿ ಟ್ರಿಪ್ ಹೋಗುವುದು ಕಾಮನ್ ಆಗಿದೆ..! ಫ್ರೆಂಡ್ಸ್ ಎಲ್ಲಾ ಸೇರಿ ಟೈಮ್ ಸಿಕ್ಕಾಗ ಬೈಕೇರಿ ದೂರ ದೂರ ಪ್ರವಾಸಿತಾಣಗಳಿಗೆ ಹೋಗಿದ್ದೇವೆ..! ಹೋಗುವವರನ್ನು ನೋಡಿಯೂ ಇದ್ದೇವೆ..! ಎಲಕ್ಷನ್ ಕಂಡ್ರಪ್ಪಾ ಓಟ್ ಹಾಕಿ ಅಂತ ಆಫೀಸ್ ಗೆ ರಜೆ ಕೊಟ್ರೆ ಜಾಲಿ ಟ್ರಿಪ್ ಹೋಗಿದ್ದೂ ಇದೆ..! ಆದ್ರೆ ಯಾವತ್ತಾದ್ರೂ ನಿಮ್ಮ ಇಷ್ಟದ ಬೈಕನ್ನೇರಿ ವಿಶ್ವವನ್ನು ಸುತ್ತುವ ಯೋಚನೆ ಮಾಡಿದ್ದೀರಾ..? ವಿಶ್ವದ ಕತೆ ಬೇಡ ಇಡೀ ಭಾರತ…? ಹೋಗ್ಲಿ, ನಮ್ಮ ಕರ್ನಾಟಕ ಸುತ್ತಿದ್ದೀರಾ..? ಅದೂ ಬಿಟ್ಟಾಕಿ ನಿಮ್ಮ ನಿಮ್ಮ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನಾದ್ರೂ ಸುತ್ತಿದ್ದೀರಾ..? ನಿಮ್ಮ ಕುರಿತು ನನಗೆ ಇದ್ಯಾವುದೂ ಗೊತ್ತಿಲ್ಲ.., ಬಟ್ ಇಲ್ಲೊಬ್ಬ ಬೈಕ್ ಪ್ರೇಮಿ ಅದರಲ್ಲೂ ಭಾರತೀಯ ಬೈಕ್ ನಲ್ಲಿ ವರ್ಲ್ಡ್ ಟ್ರಿಪ್ ಮುಗಿಸಿದ್ದಾರೆ..!
ಬೈಕ್ನಲ್ಲಿ ವಿಶ್ವಪರ್ಯಟನೆ ನಾ..?! ವಾವ್ಹ್..! ಹೀಗೆ ಬೈಕ್ನಲ್ಲಿಯೇ ವಿಶ್ವ ಸುತ್ತಿ ದಾಖಲೆ ಬರೆದ ಆ ವ್ಯಕ್ತಿ “ಭಾರದ್ವಜ್ ದಯಾಲ..”! ಆಂಧ್ರಪ್ರದೇಶದ ವಿಶಾಖಪಟ್ಟಣದವರಾದ ಇವರು ಭಾರತದಲ್ಲಿ ತಯಾರಾಗುವ “ಹೀರೋ ಕರಿಷ್ಮ” ಬೈಕಿನಲ್ಲಿ ಹದಿನೆಂಟು ತಿಂಗಳಲ್ಲಿ (ಒಂದುವರೆ ವರ್ಷ)ಇಡೀ ವಿಶ್ವವನ್ನೇ ಸುತ್ತಿ ಬಂದಿದ್ದಾರೆ..! ಹೀಗೆ ಬೈಕಿನಲ್ಲಿ ವಿಶ್ವಪರ್ಯಟನೆ ಮಾಡಿರೋ ಮೊಟ್ಟಮೊದಲ ಭಾರತೀಯ ವ್ಯಕ್ತಿ ಇವರಾಗಿದ್ದಾರೆ..! ಯಾವ ಪ್ರಾಯೋಜಕರೂ, ದಾನಿಗಳ ಸಹಾಯವಿಲ್ಲದೆ ಸೋಲೋ ಬೈಕ್ ಟೂರ್ ಮಾಡಿದ್ದಾರೆ..!
“ಭಾರದ್ವಜ್ ದಯಾಲ..” ತಮ್ಮ ಬೈಕನ್ನೇರಿ ಏಪ್ರೀಲ್ 02,2006ರಂದು ವಿಶಾಖಪಟ್ಟಣದಿಂದ ಹೊರಡುತ್ತಾರೆ..! ಮುಂಬೈನ್ನಿಂದ ಟೆಹ್ರಾನ್ ಗೆ ಅಲ್ಲಿಂದ ನಿರಂತರವಾಗಿ ಸತತ 18 ತಿಂಗಳುಗಳ ಕಾಲ ಅಂತರಾಷ್ಟ್ರೀಯ ಹೈವೆಯಲ್ಲಿ ಕ್ರಮವಾಗಿ ಇರಾನ್, ಟರ್ಕಿ, ಸಿರಿಯಾ, ಜೋರ್ಡಾನ್, ಈಜಿಫ್ಟ್, ಗ್ರೀಕ್, ಇಟಲಿ, ಫ್ರಾನ್ಸ್, ಯುಕೆ, ಕೆನಡಾ, ಯುಎಸ್, ಆಸ್ಟ್ರೇಲಿಯಾ, ಇಂಡೋನೇಷ್ಯಾ ಮತ್ತು ಬಾಂಗ್ಲದೇಶಗಳಿಗೆ ಹೋಗಿಬಂದಿದ್ದಾರೆ..!
ಇವರ ಪ್ರಯಾಣದಲ್ಲಿ 5 ಖಂಡಗಳು 14 ದೇಶಗಳಿದ್ದವು..! ಏಪ್ರೀಲ್ 02,2006ರಂದು ವರ್ಲ್ಡ್ ಟ್ರಿಪ್ ಹೊರಟ “ಭಾರದ್ವಜ್ ದಯಾಲ..” ತಮ್ಮ ಮನೆಗೆ ಹಿಂತಿರುಗಿದ್ದು ಅಕ್ಟೋಬರ್ 7, 2007..! ಹೆಚ್ಚು ಕಡಿಮೆ 47,000ಕಿ.ಮೀ ಪ್ರಯಾಣವನ್ನು 18 ತಿಂಗಳಲ್ಲಿ ಯಶಸ್ವಿಯಾಗಿ ಮುಗಿಸಿದ್ದಾರೆ..!
ಈಗ ಬೈಕ್ ಸವಾರರನ್ನು ಒಳಗೊಂಡ “ವಂದೇಮಾತರಂ” ಎಂಬ ತಂಡವನ್ನು ಕಟ್ಟಿಕೊಂಡಿದ್ದಾರೆ..! ಈ ತಂಡವು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಟ್ರಾವೆಲ್ ಮಾಡುವ ಮೂಲಕ “ರಸ್ತೆ ಸುರಕ್ಷತೆ” (ರೋಡ್ ಟ್ರಿಪ್) ಬಗ್ಗೆ ಜಾಗೃತಿ ಮೂಡಿಸ್ತಾ ಇದ್ದಾರೆ..!
ಶಶಿಧರ ಡಿ ಎಸ್ ದೋಣಿಹಕ್ಲು
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com