ಏನೇನೋ ಕಂಡುಹಿಡಿಯುವವರ ನಡುವೆ ಇನ್ನೇನೋ ಕಂಡುಹಿಡಿಯುವ ನಮ್ಮ ಹುಡುಗ..! ಇವನು ಪಕ್ಕಾ ಕನ್ನಡದ ಸೈಂಟಿಸ್ಟ್

1
72

ಅವಶ್ಯಕತೆ ಇದ್ದರೂ ಅವಕಾಶಗಳನ್ನು ಬಳಸಿಕೊಳ್ಳುವಾಗ ಅಡೆತಡೆಗಳು ಬರುತ್ತವೆ ಅನ್ನೋ ಕಾರಣದಿಂದಲೇ ಕೆಲವೊಂದು ಅವಕಾಶಗಳನ್ನು ಗಾಳಿಗೆ ತೂರುವವರಿದ್ದಾರೆ..! ಆದರೆ ಅವಕಾಶ ಸಿಗದೇ ಇದ್ದರೂ ಅವಶ್ಯಕತೆಗಾಗಿ ಅವಕಾಶವನ್ನು ತಾನೇ ಸೃಷ್ಠಿಸಿಕೊಂಡು ಮುನ್ನುಗ್ಗುವ ಜನ ನಮ್ಮ ನಡುವೆ ವಿಶೇಷವೆನಿಸುತ್ತಾರೆ..! ಇಂತವರು ಸಾಧಕರಾಗಿ.. ಹೊಸ ಆವಿಷ್ಕಾರಗಳ ಹರಿಕಾರರಾಗಿ ಹೊರ ಹೊಮ್ಮುತ್ತಾರೆ..! ಹೊಸತನವನ್ನು ಬಯಸುವ ಪ್ರತಿಯೊಬ್ಬರೂ ತಮ್ಮದಾರಿಯಲ್ಲಿ ಬರುವ ಅಡೆತಡೆಗಳನ್ನು ದಾಟಿಯೇ ಮುನ್ನುಗ್ಗಿರ್ತಾರೆ..! ಅವರು ನಡೆಯುವ ಹಾದಿ ಯಾರಿಗೂ.., ಯಾರೆಂದರೆ ಯಾರಿಗೂ ಗೊತ್ತೇ ಇರುವುದಿಲ್ಲ..! ಅವರನ್ನು ನೋಡಿ ಏನಪ್ಪಾ, ಎಂಥಾ ಹುಚ್ಚ ಇವನೆಂದು ಗೇಲಿ ಮಾಡುವವರೂ ಇರ್ತಾರೆ..! ನಗುವವರು ಇದ್ದಾರೆ..! ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಹೊಸತನದೊಂದಿಗೆ ಅಂದುಕೊಂಡಿದ್ದನ್ನು ಸಾಧಿಸಿದಾತ ಎಲ್ಲರೂ ಅವನನ್ನು ನಿಬ್ಬೆರಗಾಗಿ ನೋಡುವಂತೆ ಮಾಡ್ತಾನೆ..! ಅವಕಾಶಗಳು ಇಲ್ಲದೇ ಇದ್ದರೂ ತನ್ನ ಕ್ರಿಯೇಟಿವ್ ಐಡಿಯಾವನ್ನೇ ಬಂಡವಾಳವನ್ನಾಗಿಸಿಕೊಂಡು ಹೊಸ ತಂತ್ರಜ್ಞಾನವನ್ನು ಪರಿಚಯಿಸಿ ಉದ್ಯಮಲೋಕಕ್ಕೆ ಎಂಟ್ರಿಕೊಟ್ಟ ಹಲವಾರು ಜನರ ಸಾಲಿಗೆ ಇನ್ನೊಬ್ಬ ಯುವಕ ಸೇರಿದ್ದಾನೆ..! ಈತ ಕನ್ನಡಿಗನೆಂಬುದೇ ನಮಗೆ ಹೆಮ್ಮೆ..! ಆತ ಯಾರು..? ಅವನು ಕಂಡುಹಿಡಿದಿದ್ದೇನು…? ಈ ಕನ್ನಡದ ಯುವಕನ ಯಶೋಗಾಥೆಯನ್ನು ಕೇಳೋಣವೇ..!? ಸರಿ, ಆ ಯುವಕನ ಬಗ್ಗೆ, ಆತನ ಸಾಧನೆಯ ಬಗ್ಗೆ ನೋಡ್ಕೊಂಡು ಬರೋಣ ಬನ್ನಿ..!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಆ ಯುವ ಸೈಂಟಿಸ್ಟ್ ಉದ್ಯಮಿಯ ಹೆಸರು “ಸಂತೋಷ್ ಕಾವೇರಿ”..! ನಮ್ಮ ಕರ್ನಾಟಕದ ಬೆಳಗಾಂನ ಪುಟ್ಟ ಹಳ್ಳಿಯವರು..! ಇದು ಅಂತಿಂತ ಹಳ್ಳಿಯಲ್ಲ ಕೊಂಪೆ..! ಇಂಥಹಾ ರಿಮೋಟ್ ಏರಿಯಾದಲ್ಲಿ ಹುಟ್ಟಿದ್ದ ಸಂತೋಷ್ ಗೆ ಶಾಲೆಗೆ ಹೋಗುವುದೇ ಒಂದು ಅಗ್ನಿಪರಿಕ್ಷೆ ಆಗಿತ್ತು..! ನಿತ್ಯವೂ 10ಕಿ.ಮೀ ನೆಡೆದುಕೊಂಡೇ ಶಾಲೆಗೆ ಹೊಗ್ತಾ ಇದ್ರು..! ಹಂಗೋ ಹಿಂಗೋ ಹೈಸ್ಕೂಲ್ ಮೆಟ್ಟಿಲನ್ನೂ ಏರಿದ್ರು..! ಆ ಟೈಮಲ್ಲಿ ಬಡತನದ ಕಾವು ಮತ್ತಷ್ಟು ಸುಡುತ್ತೆ..! ಅವರ ಕುಟುಂಬದ ಸದಸ್ಯರು ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತೆ..! ಇದರ ಜೊತೆಜೊತೆಗೇನೇ ಆರ್ಥಿಕ ಸಮಸ್ಯೆ ಮತ್ತಷ್ಟು ಬಿಗುಡಾಯಿಸುತ್ತೆ..! ಮನೆಯ ಕೆಲಸ, ಹೊಲದ ಕೆಲಸವನ್ನೂ ಮಾಡಿ ಶಾಲೆಗೆ ಹೋಗುವುದು ತುಂಬಾ ಕಷ್ಟವಾಗುತ್ತೆ..! ಆದರೂ ಶಾಲೆ ಬಿಡುವ ಮನಸ್ಸನ್ನು ಸಂತೋಷ್ ಮಾಡ್ಲಿಲ್ಲ..! ಸಮಸ್ಯೆಗಳನ್ನೂ ಸಂತೋಷದಿಂದಲೇ ಸ್ವೀಕರಿಸಿದ ಸಂತೋಷ್ ಪ್ರತಿದಿನ ಬೆಳಿಗ್ಗೆ 5ಗಂಟೆಯಿಂದಲೇ ಹೊಲದಲ್ಲಿ ಕೆಲಸ ಮಾಡಿ ಶಾಲೆಗೆ ಸಮಯಕ್ಕೆ ಸರಿಯಾಗಿ ಹೋಗಲಾರಂಭಿಸಿದ್ರು..! ಅಷ್ಟೇ ಅಲ್ಲ, ಶಾಲೆಯಿಂದ ಸಂಜೆ ಬಂದೊಡನೆ ಮತ್ತೆ ಹೊಲದ ಕೆಲಸಕ್ಕೆ ಹೋಗ್ತಾ ಇದ್ರು..! ಹೀಗೆ ಹೊಲದ ಕೆಲಸ + ಓದು ಎರಡನ್ನೂ ನಿಭಾಯಿಸಿಕೊಂಡು ಕಷ್ಟಪಡುತ್ತಲೇ ಬೆಳೆದರು..!
ಹೈಸ್ಕೂಲ್ ಮುಗಿದೊಡನೆ ಬೆಳಗಾಂನ ಕಾಲೇಜುವೊಂದರಲ್ಲಿ ಪಿಯುಸಿಗೆ ಸೇರ್ತಾರೆ..! ಅಲ್ಲಿ “ಬ್ಯುಸ್ನೆಸ್ ಅಡ್ಮಿನಿಸ್ಟ್ರೇಷನ್ (ವ್ಯವಹಾರ ಆಡಳಿತ)” ವಿಷಯವನ್ನು ಆಯ್ಕೆ ಮಾಡಿಕೊಳ್ತಾರೆ..! ಪ್ರಥಮ ಪಿಯುಸಿ ಓದುವಾಗಲೇ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್ ನ ಲೀಡ್ ( ಲೀಡರ್ಸ್ ಆ್ಯಕ್ಸಲೇಟರಿಂಗ್ ಡೆವೆಲಪ್ ಮೆಂಟ್) ಗೆ ಸೇರ್ತಾರೆ..! ಅಲ್ಲಿನ ಕ್ರೀಯಾಶೀಲ ಸದಸ್ಯರಾದ ಸಂತೋಷ್, ಟೆಕ್ನಾಲಜಿ (ತಂತ್ರಜ್ಞಾನ)ದ ಬಗ್ಗೆ ತಿಳಿಯುತ್ತಾರೆ..! ಹೊಸ ತಂತ್ರಜ್ಞಾನದ ಆವಿಷ್ಕಾರ ತುಂಬಾ ಜನರಿಗೆ ಉಪಯೋಗಕ್ಕೆ ಬರುತ್ತೆ ಅನ್ನೋದನ್ನು ಮನಗಾಣ್ತಾರೆ..! ಲೀಡ್ ಗೆ ಸೇರಿದಲಿಂದ ಉದ್ಯಮಿ ಆಗಬೇಕೆಂಬ ನಿರ್ಧಾರಕ್ಕೆ ಬರ್ತಾರೆ..! ಲೀಡ್ ನ ವೇಧಿಕೆಯನ್ನು ಆ ನಿಟ್ಟಿನಲ್ಲಿ ಸಮರ್ಪಕವಾಗಿ ಬಳಸಿಕೊಳ್ತಾರೆ..! ರೈತರ ಜೀವನವನ್ನು ಸುಧಾರಿಸುವ ಐಡಿಯಾಗಳನ್ನು ಆ ವೇಧಿಕೆಯ ಮೂಲಕ ಕಾರ್ಯಗತಗೊಳಿಸ್ತಾ ಸಾಗ್ತಾರೆ..! ಯುವ ಉದ್ಯಮಿಯಾಗಿ ಬೆಳೆಯುತ್ತಿದ್ದಾರೆ..!

* ಕ್ಯಾರೆಟ್ ಕ್ಲೀನಿಂಗ್ ಯಂತ್ರ :
ಇದು ಸಂತೋಷರ ಮೊಟ್ಟಮೊದಲನೆಯ ಆವಿಷ್ಕಾರ..! ರೈತರು ತಾವುಬೆಳೆದ ಕ್ಯಾರೆಟ್ ಅನ್ನು ಮಾರುಕಟ್ಟೆಗೆ ಕೊಂಡೊಯ್ಯುವ ಮೊದಲು ಆ ಕ್ಯಾರೆಟ್ ಗಳನ್ನು ಸ್ವಚ್ಚಗೊಳಿಸಬೇಕಾಗುತ್ತೆ..! ಒಂದು ಕ್ವಿಂಟಾಲ್ ಕ್ಯಾರೆಟ್ ಅನ್ನು ಸ್ವಚ್ಛಗೊಳಿಸಲು ಕನಿಷ್ಟ 12 ಜನರಾದರೂ ಬೇಕಾಗುತ್ತೆ..! ಇದು ತುಂಬಾ ಸಮಯವನ್ನೂ ತಗೋಳುತ್ತೆ ಕೂಲಿನೂ ಕೊಡಬೇಕಾಗುತ್ತೆ..! ತಮ್ಮ ಫ್ಯಾಮಿಲಿಯೇ ಈ ಸ್ಥಿತಿಯನ್ನು ಎದರಿಸ್ತಾ ಇದ್ದಿದ್ದನ್ನು ಸ್ವತಃ ಕಣ್ಣಾರೆ ಕಂಡಿದ್ದ ಸಂತೋಷ್ ಸಮಯ ಮತ್ತು ಕೂಲಿ ಹಣ ರೈತರಲ್ಲೇ ಉಳಿಯಬೇಕೆಂಬ ಉದ್ದೇಶದಿಂದ ಈ ಯಂತ್ರವನ್ನು ಕಂಡು ಹಿಡಿದರು..!
ಈ ಕ್ಯಾರೆಟ್ ಕ್ಲೀನ್ ಮಾಡುವ ಯಂತ್ರ ಬಟ್ಟೆಯನ್ನು ಬಳಸಿ ಕ್ಯಾರೆಟ್ ಅನ್ನು ಶುಚಿ ಮಾಡುತ್ತೆ..! ಇವರು ಈ ಯಂತ್ರವನ್ನು ಆವಿಷ್ಕರಸಲು ಆರಂಭಿಸಿದಾಗ 11 ಬಾರಿ ವಿಫಲರಾಗಿದ್ರು..! ಆದ್ರೂ ಸೋತೆನೆಂದು ಛಲಬಿಡದೆ ಮತ್ತೆ ಮತ್ತೆ ಪ್ರಯೋಗಳನ್ನು ಮಾಡಿ ಕೊನೆಗೂ ಕ್ಯಾರೆಟ್ ಕ್ಲೀನಿಂಗ್ ಯಂತ್ರವನ್ನು ಪರಿಚಯಿಸಿಯೇ ಬಿಟ್ಟಿದ್ದಾರೆ..! ಕೇವಲ ಇಬ್ಬರೇ ಈ ಯಂತ್ರದ ಸಹಾಯದಿಂದ ಕೇವಲ 15ನಿಮಿಷದಲ್ಲಿ ಒಂದು ಕ್ವಿಂಟಾಲ್ ಕ್ಯಾರೆಟ್ ಸ್ವಚ್ಛ ಮಾಡಬಹುದು..!

* ಇಕೋ ಫ್ರೆಂಡ್ಲಿ ವಾಟರ್ ಕಾಯಿಲ್ (ಪರಿಸರಸ್ನೇಹಿ ನೀರನ್ನು ಕುದಿಸುವ ಕಾಯಿಲ್)..!

ಮೊದಲ ಆವಿಷ್ಕಾರದ ಯಶಸ್ಸು ಸಂತೋಷರನ್ನು ಇನ್ನೂ ಹೊಸ ಆವಿಷ್ಕಾರದೆಡೆಗೆ ಸೆಳೆಯುತ್ತೆ..! ಅದರಿಂದ ಉದ್ಯಮಶೀಲತೆಗೆ ಪ್ರೋತ್ಸಾಹ ಸಿಗುತ್ತೆ..! ಆಗ ಅವರು ಕಂಡುಹಿಡಿದಿದ್ದೇ ಈ “ಇಕೋ ಫ್ರೆಂಡ್ಲಿ ವಾಟರ್ ಕಾಯಿಲ್”..! ಸ್ಟವ್ ಸ್ಟಾಪ್ ಡಿವೈಸ್ ಹೊಂದಿರುವ ಈ ಕಾಯಿಲ್ ಮೂಲಕ ಒಂದೇ ಸಮಯದಲ್ಲಿ ಅಂದ್ರೆ ಏಕಕಾಲ ಅಥವಾ ಅಟ್ ಎ ಟೈಮ್ನಲ್ಲಿ ಆಹಾರ ಬೇಯಿಸಲು ನೀರನ್ನು ಕುದಿಸಬಹುದು +ಸ್ನಾನಕ್ಕೂ ಬಿಸಿ ನೀರನ್ನು ಸಂಗ್ರಹಿಸಬಹದು…!
ಗ್ಯಾಸ್ ಇವತ್ತು ದುಬಾರಿ ಆಗಿದ್ದು, ರೈತರು ಅನುಭವಿಸ್ತಾ ಇರೋ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವಲ್ಲಿಯೂ ಈ ತಂತ್ರಜ್ಞಾನ ಸಹಕರಿಸುತ್ತೆ ಎನ್ನುವ ಸಂತೋಷರ ಮಾತಿನಲ್ಲಿ ನಿಜಕ್ಕೂ ಅರ್ಥವಿದೆ..!

* ಎತ್ತಿನಗಾಡಿಗೆ ಬ್ರೇಕ್ ಸಿಸ್ಟಮ್ :
ಎತ್ತಿನಗಾಡಿಗೆ ಬ್ರೇಕ್ ಇದ್ಯಾ..?! ಇರ್ಲಿಲ್ಲ. ಬಟ್ ಈಗ ಸಂತೋಷ್ ಎತ್ತಿನಗಾಡಿಗೂ ಬ್ರೇಕ್ ಸಿಸ್ಟಮ್ ಪರಿಚಯಿಸಿದ್ದಾರೆ..! ಎತ್ತಿನಗಾಡಿಯಲ್ಲಿ ಎತ್ತನಿನ ಮೂಗಿಗೆ ಹಾಕಿದ ದಾರವನ್ನು ಎಳೆಯುತ್ತಾ ಗಾಡಿಯನ್ನು ನಿಲ್ಲಿಸುವುದು ಮತ್ತು ಚಲಿಸುವಂತೆ ಮಾಡುವುದನ್ನು ಎತ್ತಿನಗಾಡಿ ಹೊಡೆಯವಾಗ ಮಾಡ್ಬೇಕಾಗುತ್ತೆ..! ಆದ್ರೆ ಅದರಿಂದ ಎತ್ತನ್ನು ಹಿಂಸಿಸಿದಂತೆ ಅಲ್ಲವೇ..?! ಮತ್ತು ಇಳಿಜಾರಿನಲ್ಲಿ ಈ ಗಾಡಿಯನ್ನು ನಿಯಂತ್ರಿಸುವುದು ಕಷ್ಟ..! ಇದಕ್ಕಾಗಿಯೇ ಸಂತೋಷ್ ಬ್ರೇಕ್ ಸಿಸ್ಟಮ್ ಪರಿಚಯಿಸಿದ್ದಾರೆ..! ಚಾಲಕ 5 ಅಡಿ ಎತ್ರದಲ್ಲಿ ಕುಳಿತೂ ಕೂಡ ಎತ್ತಿನಗಾಡಿಯನ್ನು ನಿಯಂತ್ರಸ ಬಹುದು..!

ಬೆಳಿಗ್ಗೆ ಐದುಗಂಟೆಗೆ ಎದ್ದು ಹೊಲದ ಕೆಲಸವನ್ನು ಮಾಡಿ 10ಕಿ.ಮೀ ದೂರದ ಶಾಲೆಗೆ ನಡೆದುಕೊಂಡೇ ಹೋಗಿ ಬರ್ತಾ ಇದ್ದ ಸಂತೋಷ್, ರೈತರಿಗೆ ಅನುಕೂಲವಾಗುವ ಮೂರು ಪರಿಸರ ಸ್ನೇಹಿ ಯಂತ್ರಗಳನ್ನು ಆವಿಷ್ಕರಿಸುವ ಮೂಲಕ ಚಿಕ್ಕ ವಯಸ್ಸಲ್ಲಿಯೇ ಕ್ರೀಯಾಶೀಲ ಉದ್ಯಮಿಯಾಗಿ ಬೆಳೆಯುತ್ತಿದ್ದಾರೆ..! ನಾವು ಇವರಿಂದ ಇನ್ನೂ ಅನೇಕ ರೈತಪರ ತಂತ್ರಜ್ಞಾನವನ್ನು ನಿರೀಕ್ಷಿಸಬಹುದು..! ಇಷ್ಟೊಂದು ಭರವಸೆ ಮೂಡಿಸಿರೋ ಕನ್ನಡಿಗ ಸಂತೋಷ್ ಕಾವೇರಿ “ಅವಶ್ಯಕತೆಯೇ ಆವಿಷ್ಕಾರದ ತಾಯಿ” ಅನ್ನೋದನ್ನು ಸಾರಿದ್ದಾರೆ..! ಇವರು ಯುವಕರಿಗೆ ಸ್ಫೂರ್ತಿಯ ಚಿಲುಮೆ..! “ಸಂತೋಷ್ ಕಾವೇರಿ.. ನಿಮಗೊಂದು ಸಲಾಂ..!

  • ಶಶಿಧರ ಡಿ ಎಸ್ ದೋಣಿಹಕ್ಲು
Source: allaboutbelgaum

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಬೆಂಗಳೂರಿಗೂ ಬಂತು ತ್ರಿಡಿ ಬಾಬಾ ಫೋಟೋ..! ಈ ಫೋಟೋದ ವಿಶೇಷತೆ ಏನು ಗೊತ್ತಾ..?

ಆ್ಯಪಲ್ ತಿನ್ನೋಕೆ ಮುಂಚೆ ಈ ವೀಡಿಯೋ ತಪ್ಪದೇ ನೋಡಿ..!

ಡಿ.ವಿ.ಜಿ ನಮ್ಮನ್ನಗಲಿ 40ವರ್ಷ..! ಡಿ.ವಿ.ಜಿ ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ಬರುವ ಮೊದಲು ಎಷ್ಟೆಲ್ಲಾ ಕಷ್ಟಪಟ್ಟಿದ್ರು ಗೊತ್ತಾ..?

ಮೈಸೂರಿನ ದಿ ಗ್ರೇಟ್ ಸಮೋಸ ಮ್ಯಾನ್..! ಇವನ ಲೈಫಿನ ಸ್ಟೋರಿ ಅದೆಂಥಾ ಅದ್ಭುತ..!

ಭಾರತದ ಬಗ್ಗೆ ನಿಮಗೆ ತಿಳಿದಿರದ 10 ಸಂಗತಿಗಳು

ವಿಚಿತ್ರ, ವಿಭಿನ್ನ, ವಿಲಕ್ಷಣ ಮೂಢನಂಬಿಕೆಗಳು..!

ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!

ಶಿವಣ್ಣ ಆರಾಮಾಗಿದ್ದಾರೆ…ಡೋಂಟ್ ವರಿ..!

ಬಿಯರ್ ಬಾಟಲ್ ಗಳ ಮುಚ್ಚಳ ತೆಗೆದ ಹೆಲಿಕಾಪ್ಟರ್..!

ವಿಷ ಕುಡಿದು ಪ್ರೀತಿ ಉಳಿಸಿಕೊಂಡವರ ಕಥೆ..! ಅಷ್ಟಕ್ಕೂ ಅವರು ವಿಷ ಕುಡಿದಿದ್ದು ಯಾಕೆ ಗೊತ್ತಾ..?

ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!

ಈ ಗೂಗಲ್ ಟ್ರಿಕ್ಸ್ ಗಳು ನಿಮಗೆ ಗೊತ್ತಾ..!

10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

ಭಾರತದ ಇತಿಹಾಸ ಹಾಗೂ ಅಪೂರ್ವ ಸಾಧನೆಯನ್ನು ತೋರಿಸೋ ಅದ್ಭುತ ಸ್ಯಾಂಡ್ ಆರ್ಟ್.!

ಪಳಪಳನೆ ಹೊಳೆಯುವ ಕೂದಲಿಗಾಗಿ ಕೋಕ ಕೋಲಾ ಬಳಸಿ..!

“ಜುಕರ್ ಬರ್ಗ್”, “ಸ್ಟೀವ್ ಜಾಬ್ಸ್” ರಂತಹ ಉದ್ಯಮಿಗಳ ಯಶಸ್ಸಿಗೆ ಭಾರತದ ದೇವರೇ ಕಾರಣ..!

ಭಾರತೀಯರು ನೋಡಬೇಕಾದ ಭಾರತೀಯರ ವೀಡಿಯೋ..!

ಸಲ್ಮಾನ್ ಖಾನ್ ಹಾಗೂ ಪ್ರೇಮ್ ಗೂ ಎನ್ ಸಂಬಂಧ ಗೊತ್ತಾ…? ಇಲ್ಲಿದೆ ಸಲ್ಮಾನ್ ಪ್ರೇಮ್ ಕಹಾನಿ..

ನೀವು ತಿಳಿದುಕೊಳ್ಳಲೇಬೇಕಾದ ಕಂಪ್ಯೂಟರ್ ಟ್ರಿಕ್ಸ್..!

ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

ಭಾರತದಲ್ಲಿ ಭಾರತೀಯರಿಗೆ “ನೋ ಎಂಟ್ರಿ” ಭಾರತೀಯರಿಗೇ ಪ್ರವೇಶ ನೀಡದ ಭಾರತದ ಸ್ಥಳಗಳು..!

ಅಬ್ಬಾ…! ಈ ಪುಟ್ಟಬಾಲಕಿ ಅದೆಂಥಾ `ಹುಲಿಡ್ಯಾನ್ಸ್’ ಮಾಡ್ತಾಳೆ..!

ಇಂಡೋ-ಪಾಕ್ ವಾರ್ ಮತ್ತೇ ನಡೆಯಿತು..! ಯುದ್ದ ನಡೆದಿದ್ದು ಎಲ್ಲಿ ಗೊತ್ತಾ..?

ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ

ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!

ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!

ಹೋಗ್ತಾ ಸಿಂಗಲ್ ಬರ್ತಾ ಡಬಲ್..!

1 COMMENT

LEAVE A REPLY

Please enter your comment!
Please enter your name here