ಡಿಜಿಟಲ್ ಲೋಕದಲ್ಲಿ ಭಾರತ ಮುಂಚೂಣಿಯಲ್ಲಿ ಹೆಜ್ಜೆ ಇಡ್ತಾಇದೆ! ಡಿಜಿಟಲ್ ಸೇವೆ ಸುಲಭದಲ್ಲಿ ಕೈಗೆಟಕುವಂತಾಗುತ್ತಿದೆ..! ಸಾರ್ವಜನಿಕ ಸ್ಥಳದಲ್ಲಿ ಉಚಿತ ವೈಫೈ ಸೇವೆ ಲಭ್ಯವಾಗಿದ್ದು, ಆ ಮೂಲಕ ಡಿಜಿಟಲ್ ಜಗತ್ತಲ್ಲಿ ದೊಡ್ಡ ಯಶಸ್ಸನ್ನು ಸಾಧಿಸುತ್ತ ಭಾರತ ಮುನ್ನುಗ್ಗುತ್ತಿದೆ..ಭಾರತ ಪ್ರಕಾಶಿಸುತ್ತಿದೆ, ಪ್ರಜ್ವಲಿಸುತ್ತಿದೆ! ಆದರೆ, ಇಂತಹ ಉಚಿತ ವೈ-ಫೈ ಸೇವೆಯನ್ನು ಭಾರತೀಯರು ಯಾವುದಕ್ಕೆಲ್ಲಾ ಬಳಸಿಕೊಳ್ತಾ ಇದ್ದಾರೆ ಗೊತ್ತಾ? ಸದ್ಯ ರೈಲು ನಿಲ್ದಾಣಗಳಲ್ಲಿ ಒದಗಿಸಲಾಗಿರುವ ವೈ-ಫೈ ಸೇವೆಯನ್ನು ಜಾಣ ಭಾರತೀಯರು ಏನ್ ಏನಕ್ಕೆಲ್ಲಾ ಬಳಕೆ ಮಾಡ್ತಾ ಇದ್ದಾರೆ..? ಈ ಉಚಿತ ಸೇವೆ ಯಾವುದಕ್ಕೆ ತುಂಬಾ ಸಹಾಯ ಆಗ್ತಿದೆ ಎನ್ನುವುದನ್ನು ಇಂಟರ್‍ನೆಟ್ ಲೋಕದ ದಿಗ್ಗಜ ಸರ್ಚ್ ಇಂಜಿನ್ ಸಂಸ್ಥೆ ಗೂಗಲ್ ಬಯಲು ಮಾಡಿದೆ..!
ಗೂಗಲ್ ಬಯಲು ಮಾಡಿದ ಆ ಸಂಗತಿಗಳೇನು? ಭಾರತೀಯರು ಪುಕ್ಕಟೆ ವೈ-ಫೈನಲ್ಲಿ ಏನ್ ಹುಡುಕಾಟ ಮಾಡ್ತಾರೆ ಎನ್ನುವ ಕಂಪ್ಲೀಟ್ ಡೀಟೈಲ್ಸ್ ಇಲ್ಲದೆ.
ಗೂಗಲ್ ಗುರುತಿಸಿರುವ ಈ ಕೆಳಗಿನ ಅಂಶಗಳು ಇಂಟರ್ನೆಟ್‍ನ ಮುಖವನ್ನೇ ಬದಲಾಯಿಸಿದೆ..!
ನಿಮಗೆ ಆಶ್ಚರ್ಯ ಆಗಬಹುದು ಒಟ್ಟು 19 ರೈಲು ನಿಲ್ದಾಣದಿಂದ ಒಟ್ಟಾರೆಯಾಗಿ 1.5 ಮಿಲಿಯನ್ ಭಾರತೀಯರು ಹೈ ಸ್ಪೀಡ್ ಬ್ರಾಂಡ್‍ಬ್ಯಾಂಡ್ ಸೇವೆಯ ಅನುಭವ ಪಡೆಯುತ್ತಿದ್ದು, ಬಳಕೆ ಮಾಡ್ತಾ ಇದ್ದಾರೆ.
ಮುಂಬೈ ಕೇಂದ್ರದಲ್ಲಿ ವೈ-ಫೈ ಸೇವೆ ಆರಂಭವಾದ ಒಂದೇ ವಾರದಲ್ಲಿ ಒಂದು ಲಕ್ಷ ಜನ ಅದರ ಸದುಪಯೋಗ ಪಡೆದುಕೊಂಡಿದ್ದಾರೆ. ರಂಭವಾದ ಒಂದೇ ದಿವಸದಲ್ಲಿ ಭುವನೇಶ್ವರದಲ್ಲಿ ಮುಂಬೈಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ವೈ-ಫೈ ಸೇವೆ ಬಳಕೆಯಾಗಿದೆ. ಅದೇ ರೀತಿ ಪಾಟ್ನ, ಜೈಪುರ್, ವಿಶಾಖಪಟ್ಟದಲ್ಲೂ ಆರಂಭದ ದಿವವೇ ಲಕ್ಷಗಟ್ಟಲೆ ಜನರು ವೈ-ಫೈ ಸೇವೆ ಬಳಕೆ ಮಾಡಿದ್ರು.
ಇದರಿಂದ ದಿನಕ್ಕೆ 3ಜಿ ಡೇಟಾ ಬಳಕೆಯ 15ಪಟ್ಟು ಹೆಚ್ಚು ಅನುಭೋಗಿಸ್ತಾ ಇದ್ದಾರೆ. ಅಂದg ಬಳಸುವ 3ಜಿ ಡೇಟಾಕ್ಕಿಂತ 15 ಪಟ್ಟು ಹೆಚ್ಚಿಗೆ ಉಪಯೋಗಿಸ್ತಿದ್ದಾರೆ ನಮ್ ಜನ. ಅಷ್ಟಕ್ಕೂ ಈ ಉಚಿತ ವೈ-ಫೈ ಸೇವೆಯನ್ನು ಭಾರತೀಯರು ಹೆಚ್ಚಾಗಿ ಬಳಕೆ ಮಾಡ್ತಾ ಇರೋದು ಆನ್‍ಲೈನ್ ಜಾಬ್ ಅಪ್ಲೀಕೇಶನ್‍ಗಾಗಿ ಎಂದು ಗೂಗಲ್ ಹೇಳಿದೆ..! ನೀವೇನ್ ಅಂದು ಕೊಂಡಿದ್ರಿ..? ಹಹಹಹಹ
POPULAR STORIES :
ಕಾರ್ಮಿಕ ನಿದ್ರೆ ಮಾಡಿದ್ದಕ್ಕೆ ಬಟ್ಟೆ ಬಿಚ್ಚಿ ಹೊಡೆದ ಅವಿವೇಕಿ ಅಧಿಕಾರಿ..!
ಅಡುಗೆ ಮನೆಯಲ್ಲಿ ಅಡಗಿಸಿಟ್ಟ ಔಷಧಿಗಳು..!!
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಎನ್ನುವ ವಿವರ ಇಲ್ಲಿದೆ
ನಿಮಗೂ ಸೆಲ್ಫೀ ಕ್ರೇಝ್ ಇದ್ಯಾ…? ಹಾಗಿದ್ರೆ ಎಚ್ಚರ
ಮಾತಿಲ್ಲದೆ ಮಾತನಾಡೋ ಪುಷ್ಪಕ ವಿಮಾನ..!
ಶಾಸಕ ಸ್ಥಾನಕ್ಕೆ ಅಂಬರೀಷ್ ರಾಜೀನಾಮೆ..!!
68 ನೇ ವಯಸ್ಸಿನ ತಾತ 10ನೇ ತರಗತಿಯ ವಿದ್ಯಾರ್ಥಿ..!!
ಮಹಿಳೆ ಮೇಲೆ ಅತ್ಯಾಚಾರ..! ಭಾರತೀಯ ಆಟಗಾರ ಅರೆಸ್ಟ್ ಯಾರು ಆ ರೇಪಿಸ್ಟ್ ಕ್ರಿಕೆಟರ್…?
ಅಷ್ಟಕ್ಕೂ ರಜನಿ ಹೀಗೇಕೆ ಮಾಡಿದ್ಲು? ಪ್ರೀತಿಸಿದ ಹುಡುಗ ಮತ್ತು ಅಪ್ಪ, ಅಮ್ಮ, ಅಣ್ಣ.!