No menu items!
19.6 C
Munich
Friday, May 1, 2026

ಬರಲಿದೆ ವಾಟ್ಸ್ ಆ್ಯಪ್ ನಲ್ಲಿ ವೀಡಿಯೋ ಕಾಲಿಂಗ್..! ಅಚ್ಚರಿಗಳನ್ನು ಹೊತ್ತು ತರಲಿದೆ ಹೊಸ ಮಾದರಿ..!

Must read

ವಿಶ್ವದಾದ್ಯಂತ ಅಸಂಖ್ಯಾತ ಬಳಕೆದಾರರನ್ನು ಹೊಂದಿರುವ ವಾಟ್ಸ್ ಅಪ್ ಈಗ ಹೊಸ ರೂಪದಲ್ಲಿ ಹೊರಬರಲು ಸಿದ್ಧವಾಗಿದೆ. ಅದರಲ್ಲೂ ಈ ಬಾರಿ ವಾಟ್ಸ್ ಅಪ್ ಹಿಂದೆಂದಿಗಿಂತಲೂ ವಿಶೇಷವಾಗಿ ಹಾಗೂ ಹೊಸ ಸೌಲಭ್ಯಗಳನ್ನು ಹೊತ್ತು ತರಲಿದೆ. ಅದರ ಕೆಲವು ಡಿಸೈನ್ ಗಳು ಲೀಕ್ ಆಗಿದ್ದು ಅದರ ಕೆಲ ಮಾಹಿತಿ ಇಲ್ಲಿದೆ ನೋಡಿ.
ವಾಟ್ಸ್ ಅಪ್ ಈ ಬಾರಿ ವಿಡಿಯೋ ಕಾಲಿಂಗ್ ವ್ಯವಸ್ಥೆಯನ್ನು ಹೊಂದಿರಲಿದೆ ಎನ್ನಲಾಗಿದೆ. ಅದಕ್ಕೆ ಪುಷ್ಟಿ ನೀಡುವಂತೆ ಲೀಕ್ ಆಗಿರುವ ಫೋಟೋದಲ್ಲಿ ವಿಡಿಯೋ ಕಾಲಿಂಗ್ ವ್ಯವಸ್ಥೆಯೂ ಇದೆ. ಇದು ಐಫೋನ್ ಮತ್ತು ಬೆಟಾ ವರ್ಷನ್ ಗಳಲ್ಲಿದ್ದು, ಜರ್ಮನಿಯ ಒಂದು ಬ್ಲಾಗ್ ಈ ವಿಷಯವನ್ನು ಬಹಿರಂಗಪಡಿಸಿದೆ.
ವಿಡಿಯೋ ಕಾಲಿಂಗ್ ಮಾಡುವಾಗ ಎರಡು ವಿಂಡೋಗಳು ತೆರೆದುಕೊಳ್ಳಲಿದ್ದು, ಒಂದರಲ್ಲಿ ಕಾಲ್ ಮಾಡುವವರು ಮತ್ತು ಇನ್ನೊಂದರಲ್ಲಿ ಕರೆ ಸ್ವೀಕರಿಸುವವರ ಚಿತ್ರ ಕಾಣಿಸುತ್ತದೆ. ವಿಶೇಷವೆಂದರೆ ಟ್ಯಾಬ್ ಗಳ ಮೂಲಕ ಮಾತನಾಡಲಿಚ್ಚಿಸುವವರಿಗೆ ಇದು ಒಂದು ರೀತಿಯಲ್ಲಿ ವರದಾನವಾಗಲಿದೆ ಎಂದೇ ಹೇಳಲಾಗುತ್ತಿದೆ.
ವಾಟ್ಸ್ ಅಪ್ ಈಗಾಗಲೇ ಅಸಂಖ್ಯಾತ ಬಳಕೆದಾರರನ್ನು ಹೊಂದಿದ್ದು, ಮತ್ತಷ್ಟು ಗ್ರಾಹಕರನ್ನು ತನ್ನೆಡೆಗೆ ಸೆಳೆಯಲು ಅದು ಯತ್ನಿಸುತ್ತಿದೆ. ಈಗ ಮುಂಬರುವ ಹೊಸ ಆವೃತ್ತಿಯು ಹೊಸ ಗ್ರಾಹರನ್ನು ಸೆಳೆಯಲು ನೆರವಾಗಲಿದೆ ಎಂದೇ ಹೇಳಲಾಗುತ್ತಿದೆ.
ಏನೇ ಆಗಲಿ ವಾಟ್ಸ್ ಅಪ್ ನ ಹೊಸ ರೂಪ ನೋಡಲು ಅಸಂಖ್ಯಾತ ಮಂದಿ ಸಿದ್ಧವಾಗಿದ್ದಾರೆ. ಆದರೆ ಫೇಸ್ ಬುಕ್ ಮತ್ತು ವಾಟ್ಸ್ ಅಪ್ ಮಾಲೀಕ ಮಾರ್ಕ್ ಜುಕರ್ ಬರ್ಗ್ ಅದನ್ನು ಯಾವಾಗ ಬಿಡುಗಡೆ ಮಾಡುತ್ತಾರೋ ಗೊತ್ತಿಲ್ಲ.

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

ಈ ಗೋಡೆಗಳ ಮೇಲೆ ಬಟ್ಟೆ ಇಲ್ಲದವರಿಗೆ ಬಟ್ಟೆ ಸಿಗುತ್ತೆ..!

ಇವರು ವಿಶ್ವ ಸುತ್ತಿ ದುಡ್ಡು ಮಾಡಿದ್ರು..! ಕೆಲಸ ಬಿಟ್ಟು, ಜಗತ್ತನ್ನು ಸುತ್ತಿ ದುಡ್ಡು ಮಾಡಿದ್ದು ಹೇಗೆ..?

ಸಾಮಾಜಿಕ ಜಾಲತಾಣಗಳಲ್ಲಿ ಇವರ ಒಂದು ಪೋಸ್ಟ್ ಮೌಲ್ಯ 8289993.75 -19898985.00 ರೂಪಾಯಿಗಳು..!

78 ವರ್ಷದ ಅಜ್ಜಿಯನ್ನು ರಕ್ಷಿಸಿದ 8ರ ಹುಡುಗಿ..! ಕಾಡಿನ ಮಧ್ಯೆ 4.5 ಕಿಮೀ ನಡೆದಿದ್ದಳಂತೆ ಆ ಪುಟ್ಟ ಬಾಲೆ..!

ರಷ್ಯಾದಲ್ಲಿ ನಡೆಯಿತು ಕೂದಲಿಗಾಗಿ 8 ಕೊಲೆ..! ಕೂದಲಿನ ವಿಷಯಕ್ಕೆ ಪತ್ನಿ, ಮಕ್ಕಳು, ತಾಯಿಯನ್ನೇ ಕೊಂದ..!

ಒಂಟೆಗೆ ಮುತ್ತಿಕ್ಕಿದಳು ಆತ ಡೈವೋರ್ಸ್ ಕೊಟ್ಟ..! ಇದು ಒಂ(ಟೆ)ದು ಮುತ್ತಿನ ಕಥೆ..!

ಕೂಲಿಯ ಮಗ ಇವತ್ತು 100 ಕೋಟಿ ಒಡೆಯ..! ಆರನೇ ಕ್ಲಾಸ್ ಫೇಲ್ ಆಗಿದ್ದ ಹುಡುಗ ಇವತ್ತು ಕೋಟ್ಯಾಧಿಪತಿ..!

ಹುಚ್ಚು ಪರಪಂಚದಲ್ಲಿ ಹುಚ್ಚ ವೆಂಕಟ್ ಗಾನಸುಧೆ.. !

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article