ಕಾಲಕ್ಕೆ ತಕ್ಕಂತೆ ಬದಲಾಗದೇ ಹೋದ್ರೆ ಕಲೆ ಸತ್ತು ಹೋಗುತ್ತದೆ

0
36

ಪವನ್ ಒಡೆಯರ್ ನಿರ್ಮಾಣದ ಡೊಳ್ಳು ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಇದೇ 26ರಿಂದ ಮಯಾನಗರಿಯಲ್ಲಿ ಡೊಳ್ಳಿನ ನಾದ ಶುರುವಾಗಲಿದೆ. ಅದರ ಮೊದಲ ಭಾಗವಾಗಿ ಇತ್ತೀಚೆಗಷ್ಟೇ ಮಯಾನಗರಿ ಎಂಬ ಹಾಡು ಬಿಡುಗಡೆ ಮಾಡಿ ಗಮನಸೆಳೆದಿದ್ದ ಚಿತ್ರತಂಡ ಈಗ ಡೊಳ್ಳು ಸಿನಿಮಾದ ಟ್ರೇಲರ್ ನ್ನು ಪ್ರೇಕ್ಷಕರಿಗೆ ಉಣಬಡಿಸಿದೆ.


ಡೊಳ್ಳು ಕಲೆಯನ್ನು ಯಾರು ಬೇಕಾದರೂ ಕಲಿಯಬಹುದು. ಆದರೆ ಮನಸ್ಸಿನಲ್ಲಿ ಇಳಿಸಿಕೊಳ್ಳಲು ಆಗುವುದಿಲ್ಲ ಎಂಬ ಅರ್ಥಪೂರ್ಣವಾದ ಮಾತಿನಿಂದ ಶುರುವಾಗುವ ಟ್ರೇಲರ್ ನಲ್ಲಿ ಜನಪದ ಕಲೆ ಡೊಳ್ಳು ಪ್ರಾಮುಖ್ಯತೆ ಜೊತೆಗೆ ಪ್ರೀತಿ, ಕಣ್ಣೀರು, ಕೋಪ ಎಲ್ಲವನ್ನೂ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. ನೋಡುಗರ ಹೃದಯಕ್ಕೆ ಹಾಗೇ ಇಳಿದು ಬಿಡುವ ಈ ಟ್ರೇಲರ್ ಬಿಡುಗಡೆ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್ ಭಾರೀ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ನಮ್ ಸಿನಿಮಾ. ತಮ್ಮ ತನದ ಸಿನಿಮಾ..ನಮ್ಮ ಮಣ್ಣಿನ ಸೊಗಡಿನ ಸಿನಿಮಾ. ಕಲೆ ಮತ್ತು ಕಮರ್ಷಿಯಲ್ ನಡುವಿನ ಮಧ್ಯೆ ತೆಗೆದಿರುವ ಸಿನಿಮಾ. ಟ್ರೇಲರ್ ಬಹಳ ಚೆನ್ನಾಗಿದೆ. ಇದೇ 26ರಂದು ಚಿತ್ರ ಬಿಡುಗಡೆಯಾಗ್ತಿದೆ ಪ್ರತಿಯೊಂದು ನೋಡಿ ಎಂದರು.

ರಾಷ್ಟ್ರಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾದಲ್ಲಿ ಜನಪದ ಕಲೆ ಡೊಳ್ಳಿನ ಮಹತ್ವವನ್ನು ಕಟ್ಟಿಕೊಡಲಾಗಿದ್ದು, ಕಾರ್ತಿಕ್ ಮಹೇಶ್ ನಾಯಕನಾಗಿ ಅಮೋಘವಾಗಿ ನಟಿಸಿದ್ದು. ಇವರಿಗೆ ಜೋಡಿಯಾಗಿ ನಿಧಿ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಬಾಬು ಹಿರಣಯ್ಯ, ಚಂದ್ರ ಮಯೂರ್, ಶರತ್ ಮುಂತಾದ ಕಲಾ ಬಳಗ ಚಿತ್ರದಲ್ಲಿದ್ದು, ಶ್ರೀನಿಧಿ ಸಂಭಾಷಣೆ-ಚಿತ್ರಕಥೆ, ಅನಂತ್ ಸಂಗೀತ, ಅಭಿಲಾಸ್ ಕಲಾಥಿ ಕ್ಯಾಮೆರಾ ಕೈಚಳಕ ಸಿನಿಮಾದಲ್ಲಿದೆ. ಹಲವು ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಡೊಳ್ಳು ಸಿನಿಮಾ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೂ ಭಜನವಾಗಿದೆ. ಪವನ್ ಒಡೆಯರ್ ಮೂವೀವ್ ಬ್ಯಾನರ್ ನಡಿ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡಿದ್ದು, ಇದೇ 26ಕ್ಕೆ ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ.

LEAVE A REPLY

Please enter your comment!
Please enter your name here