ಉದ್ಯೋಗಿಗೆ ಕಾರು ಉಡುಗೊರೆ ನೀಡಿದ ಸಿಇಓ..! ಕಾರಣ ಏನ್ ಗೊತ್ತಾ?

Date:

32 ಕಿಮೀ‌ ನಡೆದುಕೊಂಡು‌ ಬಂದ ಉದ್ಯೋಗಿಗೆ ಸಿಇಓ ಕಾರು ಉಡುಗೊರೆ‌ ನೀಡಿದ್ದಾರೆ‌.

ಅಮೆರಿಕಾದ ಕಂಪನಿಯೊಂದರಲ್ಲಿ ಈ ಘಟನೆ ನಡೆದಿದೆ.
,ವೋಲ್ಟರ್ ಎಂಬುವವರು ಆಗಷ್ಟೇ ಹೊಸ ಕಂಪನಿಗೆ ಕೆಲಸಕ್ಕೆ ಸೇರಿದ್ದರು. ಮರುದಿನ ಹೊಸದಾಗಿ ಕೆಲಸ ಆರಂಭಿಸಬೇಕಿತ್ತು. ಬೆಳಗ್ಗೆ ಎದ್ದು ಬೇಗನೇ ಆಫೀಸ್ ಗೆ ಹೋಗಬೇಕು. ತಡಮಾಡಬಾರದು ಎಂದು ವೋಲ್ಟರ್ ಅಂದುಕೊಂಡಿದ್ದರು.
ಆದರೆ, ಗ್ರಹಚಾರಕ್ಕೆ ಅದೇ ದಿನ ಕಾರು ಕೆಟ್ಟು ನಿಂತಿತು. ವೋಲ್ಟರ್ ಕ್ಯಾಬ್ ಗಳಿಗೆ ಹುಡುಕಾಟಿದರೂ ಅವು ಸಹ ಸಿಗಲಿಲ್ಲ.‌
ಬೇರೆಯಾರದರೂ ಆಗಿದ್ದರೆ ಇದೇ ಕಾರಣ ಹೇಳಿಕೊಂಡು ಕೆಲಸಕ್ಕೆ ಹೋಗದೇ ಇರುವುದನ್ನೋ ಅಥವಾ ತಡವಾಗಿ ಹೋಗುವುದನ್ನೋ ಮಾಡ್ತಿದ್ರು. ಆದರೆ ವೋಲ್ಟರ್ 32 ಕಿಮೀ ನಡೆದುಕೊಂಡೇ ಆಫೀಸಿಗೆ ಹೋಗಿದ್ದಾರೆ.
ಸರಿಯಾದ ಟೈಮ್ ಗೆ ಆಫೀಸ್ ತಲುಪಿದ್ದಾರೆ. ಬಳಲಿದ್ದ ಇವರನ್ನು ಕಂಡ ಸಿಇಒ ವಿಚಾರಿಸಿದ್ದಾರೆ. ಇವರು ನಡೆದ ಕಥೆಯನ್ನು ಹೇಳಿದಾಗ ಕುಡಿಯಲು ನೀರು, ತಂಪುಪಾನೀಯ, ತಿಂಡಿ ನೀಡಿ ಉಪಚರಿಸಿದ್ದಾರೆ.‌ಜೊತೆಗೆ ಕಾರೊಂದನ್ನು ಉಡುಗೊರೆ ಆಗಿ ನೀಡಿದ್ದಾರೆ.

Share post:

Subscribe

spot_imgspot_img

Popular

More like this
Related

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ಬೆಂಗಳೂರು: ಪರಪ್ಪನ...

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ ಬೆಂಗಳೂರು: ಪರಪ್ಪನ...

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ!

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ! ರೇಣುಕಾಸ್ವಾಮಿ...

ಡಿ ಗ್ಯಾಂಗ್​ ದೋಷಾರೋಪ ನಿರಾಕರಣೆ: ಇಂದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ ಸಾಧ್ಯತೆ!

ಡಿ ಗ್ಯಾಂಗ್​ ದೋಷಾರೋಪ ನಿರಾಕರಣೆ: ಇಂದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ...