2002 ಫೆಬ್ರವರಿ 28ರಂದು ಗುಜರಾತ್‍ನ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಗಲಭೆಯಲ್ಲಿ ಕೋಮು ದಳ್ಳುರಿಗೆ ಸತ್ತವರ ಸಂಖ್ಯೆ 69. ಗಂಭೀರವಾಗಿ ಗಾಯಗೊಂಡವರು 85. ಉಳಿದಂತೆ ಕಾಣೆಯಾದ 35 ಮಂದಿ ಏನಾದರು ಎನ್ನುವುದು ಇನ್ನೂ ನಿಗೂಢ..!. ಇದೀಗ ಆ ಹತ್ಯಾಕಾಂಡಕ್ಕೆ ಸಂಬಂಧಪಟ್ಟಂತೆ ಕೆಲವರಿಗೆ ಶಿಕ್ಷೆಯಾಗಿದೆ. ಆದರೆ ಉತ್ತರ ಸಿಗದೇ ಬಾಕಿಯುಳಿದ ಪ್ರಶ್ನೆಗಳು ಹೀಗಿವೆ..!
* ಘಟನಾ ಪ್ರದೇಶದಿಂದ 1 ಕಿ ಮೀ ದೂರದಲ್ಲೇ ಪೊಲೀಸ್ ಠಾಣೆ ಇತ್ತು, ಕೇವಲ 2 ಕಿಮೀ ದೂರದಲ್ಲೇ ಪೊಲೀಸ್ ಆಯುಕ್ತರ ಕಛೇರಿ ಇತ್ತು. ಆದ್ರೆ ಅಂದಿನ ಪೊಲೀಸ್ ಕಮಿಷನರ್ ಪಿ.ಸಿ. ಪಾಂಡೆ 5 ಗಂಟೆಗಳ ಕಾಲಾವಧಿಯೊಳಗೆ ಭದ್ರತೆ ಒದಗಿಸುವ ಭರವಸೆ ನೀಡಿದ್ದರು. ಆ ಭರವಸೆ ನಿಜವಾಗಲಿಲ್ಲವೇಕೆ..?
* ಎಹ್ಸಾನ್ ಜಫ್ರಿ ರಕ್ಷಣೆಗಾಗಿ ಸತತವಾಗಿ ಕರೆ ಮಾಡಿದಾಗ ಸ್ವತಃ ಆಯುಕ್ತರೂ ಸೇರಿದಂತೆ ಇನ್ನಾವ ಮೇಲಾಧಿಕಾರಿಯಿಂದಲೂ ಪ್ರತಿಕ್ರೆಯೆ ದೊರೆಯಲಿಲ್ಲ ಏಕೆ ??
* ಪೊಲೀಸ್ ಠಾಣೆಯಲ್ಲಿದ್ದ 130 ಮಂದಿ ಶಸ್ತ್ರಾಸ್ತ್ರ ಸಜ್ಜಿತ ಪೇದೆಗಳನ್ನ ಭದ್ರತೆಗೆ ನಿಯೋಜಿಸಲು ಇಲಾಖೆ ನಿರಾಸಕ್ತಿ ತೋರಿದ್ದೇಕೆ? ಗುಜರಾತ್ ಪೊಲೀಸರು, ಅಲ್ಲಿನ ಹೈಕೋರ್ಟ್ ಜಕಿಯಾ ಜಫ್ರಿ ದೂರನ್ನು ಸ್ವೀಕರಿಸಲು ನಿರಾಕರಿಸಿದ್ದು ಎಷ್ಟು ಸರಿ ??
* ಪೊಲೀಸರು ಪ್ರತಿಕ್ರಿಯೆ ನೀಡದಿದ್ದಾಗ ಎಹ್ಸಾನ್ ಜಫ್ರಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಗೂ ಕರೆ ಮಾಡಿದರು. ಆದ್ರೆ ನಮೋ ಉತ್ತರಿಸಲಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ಭದ್ರತೆ ಒದಗಿಸುವಂತೆ ಆದೇಶಿಸೋದು ಅವರ ಆದ್ಯ ಕರ್ತವ್ಯ ಎನ್ನುವುದನ್ನು ಮೋದಿ ಮರೆತಿದ್ಯಾಕೆ..!?
* 2006ರಲ್ಲಿ ಮೋದಿ ವಿರುದ್ಧ ಘಟನಾ ಸಂಬಂಧ ಪಿತೂರಿ ನಡೆಸಿರುವ ಆರೋಪ ಮಾಡಲಾಯಿತು. ಅವರ ವಿರುದ್ಧ ದೂರು ಕೊಟ್ಟರೂ ಅಲ್ಲಿನ ಪೊಲೀಸ್, ಹೈಕೋರ್ಟ್ ಝಕ್ರಿಯಾ ಜಫ್ರಿ ನೀಡಿದ ದೂರು ಸ್ವೀಕರಿಸಲಿಲ್ಲ. ನ್ಯಾಯಾಂಗ ಹಾಗೂ ಪೊಲೀಸ್ ವ್ಯವಸ್ಥೆಯ ಈ ವ್ಯತಿರಿಕ್ತ ಪ್ರತಿಕ್ರಿಯೆಯ ಹಿಂದೆ ಶುದ್ಧಹಸ್ತ ಅಂತ ಬೊಬ್ಬಿರಿಯುವ ಮೋದಿ ಕೈವಾಡವಿತ್ತಾ..??
* ಒಂದೊಮ್ಮೆ ಆಗ ಮುಖ್ಯಮಂತ್ರಿ ಆಗಿದ್ದ ಮೋದಿ ವಿರುದ್ಧದ ಷಡ್ಯಂತ್ರ ಇರಬಹುದು ಎಂದು ನ್ಯಾಯಾಲಯ, ಪೊಲೀಸ್ ಇಲಾಖೆ ಭಾವಿಸಿದ್ದರೆ, 2010 ಮಾರ್ಚ್ 27 ರಂದು 9 ಗಂಟೆ ಮೋದಿಯನ್ನ ವಿಚಾರಣೆ ನಡೆಸಿದ ವಿಶೇಷ ತನಿಖಾ ದಳದ ನಡೆಯನ್ನು ಏನೆಂದು ಪರಿಗಣಿಸಬೇಕು..??
* ಕೋರ್ಟ್ ತೀರ್ಪಿನ ಕುರಿತು ಸಿ.ಬಿ.ಐ ಸಂಸ್ಥೆಯ ಮಾಜಿ ನಿರ್ದೇಶಕ ಆರ್.ಕೆ. ರಾಘವನ್ ಪ್ರತಿಕ್ರಿಯೆ ಬೇಸರದಿಂದ ಕೂಡಿತ್ತು. ಅವರ ಪ್ರಕಾರ ಪ್ರಕರಣದ ಕುರಿತು ನಿಸ್ಪಕ್ಷಪಾತವಾಗಿ ತನಿಖೆ ನಡೆಸಿ ವರದಿ ಸಲ್ಲಿಸಿದ್ರೂ ಆ ಪೈಕಿ 36 ಮಂದಿಯನ್ನು ಖುಲಾಸೆಗೊಳಿಸಿರುವುದು ಮನಸಿಗೆ ನೋವಿತ್ತಿದೆ ಎಂದಿದ್ದಾರೆ.
* ಆರೋಪಿ ಸ್ಥಾನದಲ್ಲಿದ್ದ 66 ಮಂದಿಯ ಪೈಕಿ 5 ಮಂದಿ ವಿಚಾರಣೆ ಜಾರಿಯಲ್ಲಿರುವಾಗಲೇ ಸಾವನ್ನಪ್ಪಿದ್ದಾರೆ. ಓರ್ವ ವ್ಯಕ್ತಿ ಇನ್ನೂ ಪೊಲೀಸರಿಗೆ ಸಿಕ್ಕೇ ಇಲ್ಲ. ಇನ್ನುಳಿದ 60 ಮಂದಿಯ ವಿರುದ್ಧ ಹೇರಲಾಗಿದ್ದ ಗಲಭೆಗಾಗಿ ಪಿತೂರಿ ಆರೋಪವನ್ನು ಕೋರ್ಟ್ ತಳ್ಳಿಹಾಕಿದೆ.
- ಅಭಿಷೇಕ್ ರಾಮಪ್ಪ
POPULAR STORIES :
ಇಪ್ಪತ್ತೊಂಬತ್ತು ಹೆಣದ ರಾಶಿ ಮೇಲೆ ಯುಪಿ ಸರ್ಕಾರ..! ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್..!!
ಮಿಸ್ಟರ್ ಪರಮೇಶ್ವರ್ ನಾಯಕ್..! ಯಾವಾಗ ರಾಜೀನಾಮೆ ಕೊಡ್ತೀರಾ..!?
ಆಂಧ್ರದಲ್ಲಿ ಮೀನಿನ ಮಳೆ..! ಈ ಮಳೆ ಸುರಿಯುವ ವಿಡಿಯೋ ನೋಡಿ..!
`ಅರೆಸ್ಟ್ ಕರೋ ಇಸ್ ಸಾಲಿಕೋ..!’ ವಾಂತಿ ಮಾಡಿಕೊಂಡ ಖೇಣಿ ನೀರಿಳಿಸಿದ ಅರ್ನಾಬ್..!
ಬಾಕ್ಸರ್ ಮಹಮ್ಮದ್ ಅಲಿ ಡೆತ್ ಸೀಕ್ರೆಟ್..! ಸತ್ತಮೇಲೂ ಅವರು ಬದುಕಿದ್ದರು..!
ಕೇಳ್ರಪ್ಪೊ ಕೇಳ್ರಿ ಫೇಸ್ ಬುಕ್ ಸಂಸ್ಥಾಪಕನ ಅಕೌಂಟ್ ಹ್ಯಾಕ್ ಆಯ್ತು…!! ಪಾಸ್‍ವರ್ಡ್ ಏನಿತ್ತು ಗೊತ್ತಾ..?
ದೇವೇಗೌಡರಿಗೆ ಮುಸ್ಲೀಮರನ್ನು ಕಂಡರಾಗಲ್ಲ..!! ಜೂನ್ ಹನ್ನೆರಡರಂದು ಜೆಡಿಎಸ್‍ನಿಂದ ಜಮೀರ್ ಔಟ್..!?
ಇವ್ನಿಗೆ 3 ಹೆಂಡ್ತಿ, 35 ಮಕ್ಕಳು..! ನೂರು ಮಕ್ಕಳ ತಂದೆ ಆಗೋದೇ ಅವ್ನ ಟಾರ್ಗೆಟ್..!