ಸರಕಾರ ಬೊಕ್ಕುತಲೆ ಕಸಿ,ವಿಗ್ ಜೋಡಣೆ ಚಟುವಟಿಕೆಗಳನ್ನು ನಿರ್ಬಂಧಿಸಿದೆ..! ಅಯ್ಯೋ, ಸರಕಾರ ಏಕೆ ಹೀಗೆ ಮಾಡ್ತು? ನಾವೇನ್ ಮಾಡೋದು ಈಗ? ಕಸಿ ಮಾಡಿಸಿಕೊಂಡಾದರೂ ಬೊಕ್ಕುತಲೆಯಿಂದ ಮುಕ್ತಿ ಹೊಂದುವ ಪ್ರಯತ್ನದಲ್ಲಿದ್ದೆವು ಎಂದು ಬೊಕ್ಕುತಲೆಯಿಂದ ಬೇಜಾರಲ್ಲಿರುವವರು ಯೋಚಿಸ್ತಾ ಇರಬಹದು, ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿರಬಹುದು..!
ಇಲ್ಲ, ಸರಕಾರ ಈ ಚಟುವಟಿಕೆಗಳಿಗೆ ನಿರ್ಬಂಧ ಹೇರಿರುವುದು ನಿಜ, ಆದರೆ, ಎಲ್ಲಾ ಕ್ಲಿನಿಕ್‍ಗಳಿಗೆ ಅಲ್ಲ..! ಕೆಪಿಎಂಎ ಕಾಯಿದೆಯಡಿ ನೋಂದಣಿಯಾಗದ ಬ್ಯೂಟಿ ಕ್ಲಿನಿಕ್‍ಗಳಲ್ಲಿ ಕಸಿ, ವಿಗ್ ಜೋಡಣೆ ಮಾಡದಂತೆ ಕರ್ನಾಟಕ ರಾಜ್ಯ ಸರಕಾರ ಅವಶ್ಯವಾಗಿ ಅಡ್ಡಗಾಲು ಹಾಕಿದೆ.
ಎಲ್ಲಿ ನೋಡಿದರಲ್ಲಿ ತಲೆ ಎತ್ತಿರುವ ಬ್ಯೂಟಿ ಕ್ಲಿನಿಕ್‍ಗಳಲ್ಲಿ ಬೊಕ್ಕತಲೆ ಕಸಿ, ವಿಗ್ ಜೋಡಣೆಯಿಂದ ಅಪಾಯ ಸಂಭವಿಸುತ್ತಿದೆ. ಈ ಕಾರಣಕ್ಕಾಗಿ ನೋದಣಿಯಾಗದ ಕ್ಲಿನಿಕ್‍ಗಳಲ್ಲಿ ಇದನ್ನು ನಿರ್ಬಂಧಿಸಿರುವುದಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಕೂದಲು ಸಸಿಯಿಂದ ಆರೋಗ್ಯದ ಸಮಸ್ಯೆ ಎದುರಾಗುವುದರಿಂದ ಇಂತಹ ಚಟುವಟಿಕೆಗಳಲ್ಲಿ ತೊಡಗಿರುವ ಬ್ಯೂಟಿ ಕ್ಲಿನಿಕ್‍ಗಳನ್ನು ಕೆಪಿಎಂಎ ಕಾಯಿದೆಯಡಿ ನೋಂದಣಿ ಮಾಡಿಸುವುದನ್ನು ಕಡ್ಡಾಯ ಮಾಡಲಾಗುತ್ತೆ. ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಸಿದ್ದಪಡಿಸಲಾಗುತ್ತಿದ್ದು, ಅಲ್ಲಿತನಕ ಇವುಗಳ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎಂದಿದ್ದಾರೆ ಆರೋಗ್ಯ ಸಚಿವರು..!
POPULAR STORIES :
ಮೂವರು ಪ್ರಮುಖ ಕ್ರಿಕೆಟ್ ಅಧಿಕಾರಿಗಳ ಬಂಧನ..!
ಅಯ್ಯಯ್ಯೋ…ಚೂಯಿಂಗ್ ಗಮ್ ನುಂಗ್ ಬಿಟ್ರೇ..!
ಈತ 14 ವರ್ಷದ ಪೋರ ನಿತ್ಯ 3 ಕಿ.ಮೀ ಈಜಿ ಕೊಂಡು ಸ್ಕೂಲ್ ಗೆ ಹೋಗ್ತಾನೆ.!
`ನಿಧಿ’ಯನ್ನ ಹುಡುಕಿ ತಂದ ಪ್ರೇಮಕಥೆ ಇದು…!
ಮತ್ತೊಮ್ಮೆ ಮತ್ತೊಂದು ಜೋಗಿಯಂತಹ ಸಿನಿಮಾ..!!!
ಸೈನಾ ಸಾಧನೆಗೆ ಕಾರಣ ಕೊಹ್ಲಿಯಂತೆ.. ಅದ್ಹೇಗೆ…?
ಮಗು ಕಳೆದುಕೊಂಡರೂ ಅವರು ಅಪ್ಪ ಅಮ್ಮ ಆದ್ರು..!
ಬಡವರಿಗೆ ಉಚಿತ ಚಿಕಿತ್ಸೆ ನೀಡದ 5 ಖಾಸಗಿ ಆಸ್ಪತ್ರೆಗಳಿಗೆ 700 ಕೋಟಿ ದಂಡ!