ಜ್ಯೇಷ್ಟಮಧುವೆಂಬ ಶ್ರೇಷ್ಟ ಔಷಧಿ

1
72

ಗ್ಲೈಸಿರೈಸಾ ಗ್ಲಾಬ್ರಾ ಎಂಬ ಸಸ್ಯಶಾಸ್ತ್ರೀಯ ಹೆಸರುಳ್ಳ ಯಷ್ಟಿಮಧು (ಜ್ಯೇಷ್ಟಮಧು/ ಅತಿಮಧುರ)ವಿನ ಕಾಂಡ ಹಾಗೂ ಬೇರು. ಔಷಧೀಯ ಗುಣಗಳನ್ನು ಹೊಂದಿದ್ದು ಬಹುಪಯೋಗಿಯಾಗಿದೆ.
• ಸ್ನಿಗ್ದ ಹಾಗೂ ಮಧುರ ಗುಣಗಳಿಂದ ಇದು ವಾತ ಹಾಗೂ ಪಿತ್ತ ವಿಕಾರಗಳಲ್ಲಿ ಉಪಯುಕ್ತ ಔಷಧಿ
• ಯಷ್ಟಿ ಮಧು ಗಂಟಲು ನೋವು, ಕೆಮ್ಮು, ಧ್ವನಿಯ ತೊಡಕುಗಳನ್ನು ನಿವಾರಿಸುತ್ತದಲ್ಲದೆ ಕಫವನ್ನು ಕಡಿಮೆಮಾಡುತ್ತದೆ.
• ವಾತದಿಂದ ಉಂಟಾಗುವ ಕೆಮ್ಮು, ದಮ್ಮುಗಳಲ್ಲಿ ಅಂದರೆ ಒಣಕೆಮ್ಮು ಹಾಗೂ ಉಬ್ಬಸದಲ್ಲಿ ಅಧಿಕ ಪರಿಣಾಮಕಾರಿ
• 1 ಕಪ್ ಹಾಲಿನಲ್ಲಿ ¼ ಚಮಚ ಜ್ಯೇಷ್ಟಮಧು ಪುಡಿ, ಸ್ವಲ್ಪ ಅರಿಶಿಣಪುಡಿ ಹಾಗೂ ಕಾಳುಮೆಣಸಿನ ಪುಡಿ ಬೆರೆಸಿ ನಿತ್ಯ ಸೇವಿಸಿದರೆ ದೀರ್ಘಕಾಲಿಕ ಕೆಮ್ಮು, ದಮ್ಮುಗಳೂ ಶಮನಕಾರಿ.
• ಅಸಿಡಿಟಿ, ಹೊಟ್ಟೆ ಉರಿ ಅಥವಾ ಜಠರದ ಹುಣ್ಣಿನಲ್ಲಿ ಇದು ಶಮನಕಾರಿ, ಜಠರದ ಒಳ ಪದರದ ಮೇಲೆ ರಸಾಯನ ಹಾಗೂ ಶೀತಲ ಗುಣದಿಂದ ಅಧಿಕ ಅಮ್ಲತೆಯನ್ನು ಕಡಿಮೆ ಮಾಡಿ ಜಠರದ ಹುಣ್ಣನ್ನು ಒಣಗಿಸುತ್ತದೆ.
• ವಿವಿಧ ಕಾರಣಗಳಿಂದ ಉಂಟಾಗುವ ಬಿಳಿಮುಟ್ಟು, ದೇಹದಲ್ಲಿ ಉಷ್ಣಾಧಿಕ್ಯತೆ, ಸರ್ವಿಸೈಟಿಸ್ ಮೊದಲಾದ ಗರ್ಭಾಶಯದ ಭಾಗದ ಸೋಂಕು ಮುಂತಾದವುಗಳಲ್ಲಿಯೂ ಸಂಸ್ಕರಿತ ಯಷ್ಟಿಮಧುವಿನ ತುಪ್ಪ ಅಥವಾ ಇತರೆ ಮೂಲಿಕೆಯೊಂದಿಗೆ ತಯಾರಿಸಲಾಗುವ ತುಪ್ಪದ ಸೇವನೆ ಹಾಗೂ ಲೇಪನ ಶಮನಕಾರಿ
• ಜ್ಯೇಷ್ಟಮಧುವಿನ ಜೊತೆಗೆ ಒಂದಲಗದ ಸೇವನೆ ಮೆದುಳು ಹಾಗೂ ನರಗಳ ರಸಾಯನವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
• ಕಣ್ಣುಗಳಿಗೂ ಇದು ಟಾನಿಕ್ ನಂತೆ. ಆದ್ದರಿಂದ ‘ಚಕ್ಷುಷ್ಯ’ ಎಂದೂ ಕರೆಯಲಾಗಿದೆ. ಇದರ ಪ್ರಭಾವವು ಕಣ್ಣುಗಳ ದೃಷ್ಟಿ ಮತ್ತು ಆರೋಗ್ಯಕ್ಕೆ ಮುಖ್ಯ ಕಾರಣವಾಗಿರುವ ‘ಆಲೋಚಕ’ ಪಿತ್ತದ ಮೇಲೆ ಹಿತಕರ ಪರಿಣಾಮ ಬೀರುತ್ತದೆ.
• ವ್ರಣ ಅಥವ ಗಾಯಗಳಲ್ಲಿ ಯಷ್ಟಿಮಧುವಿನ ಲೇಪನವನ್ನು ಮಾಡುವುದರಿಂದ ಬೇಗ ಗುಣವಾಗುತ್ತದೆ.
• ಮೂಳೆ ವಿಕಾರಗಳಲ್ಲಿ, ಮೂಳೆ ಸವೆತ, ಮೂಳೆ ಮುರಿತದಂತಹ ವಿಕಾರಗಳಲ್ಲಿ ಹಾಲು ಮತ್ತು ತುಪ್ಪದೊಂದಿಗೆ ಸೇವಿಸುವುದರಿಂದ ಮೂಳೆಗಳಿಗೆ ಅಗತ್ಯ ಶಕ್ತಿಯೊಂದಿಗೆ ವಿಶೇಷ ರಸಾಯನ ಗುಣ ಪ್ರಾಪ್ತಿಯಾಗುತ್ತದೆ.

  • ಡಾ. ಮಹೇಶ್ ಶರ್ಮಾ
    9964022654

POPULAR  STORIES :

ಮೂವರು ಪ್ರಮುಖ ಕ್ರಿಕೆಟ್ ಅಧಿಕಾರಿಗಳ ಬಂಧನ..!

ಅಯ್ಯಯ್ಯೋ…ಚೂಯಿಂಗ್ ಗಮ್ ನುಂಗ್ ಬಿಟ್ರೇ..!

ಈತ 14 ವರ್ಷದ ಪೋರ ನಿತ್ಯ 3 ಕಿ.ಮೀ ಈಜಿ ಕೊಂಡು ಸ್ಕೂಲ್ ಗೆ ಹೋಗ್ತಾನೆ.!

`ನಿಧಿ’ಯನ್ನ ಹುಡುಕಿ ತಂದ ಪ್ರೇಮಕಥೆ ಇದು…!

ಮತ್ತೊಮ್ಮೆ ಮತ್ತೊಂದು ಜೋಗಿಯಂತಹ ಸಿನಿಮಾ..!!!

ಸೈನಾ ಸಾಧನೆಗೆ ಕಾರಣ ಕೊಹ್ಲಿಯಂತೆ.. ಅದ್ಹೇಗೆ…?

ಮಗು ಕಳೆದುಕೊಂಡರೂ ಅವರು ಅಪ್ಪ ಅಮ್ಮ ಆದ್ರು..!

ಬಡವರಿಗೆ ಉಚಿತ ಚಿಕಿತ್ಸೆ ನೀಡದ 5 ಖಾಸಗಿ ಆಸ್ಪತ್ರೆಗಳಿಗೆ 700 ಕೋಟಿ ದಂಡ!

ಹ್ಯಾಟ್ರಿಕ್ ಹೀರೊನ `ಖದರ್’ ಸಿನಿಮಾಗೆ ಸಿಕ್ಕಳು ನಾಯಕಿ..!

1 COMMENT

LEAVE A REPLY

Please enter your comment!
Please enter your name here