ಹಂಸಲೇಖ ಈಗ ಹೇಗಿದ್ದಾರೆ : ವೈಧ್ಯರು ಹೇಳಿದ್ದೇನು ?

admin
1 Min Read

ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ನಾದಬ್ರಹ್ಮ ಹಂಸಲೇಖ ಅವರು ರಾಜಾಜಿನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿ ಹಂಸಲೇಖ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಅದರೆ ಏನು ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಈ ಹಿಂದೆ ಹಂಸಲೇಖ ಅವರು ಒಪನ್ ಹಾರ್ಟ್ ಸರ್ಜರಿ ಮಾಡಿಸಿಕೊಂಡಿದ್ದರು. ಹೀಗಾಗಿ ಅಭಿಮಾನಿಗಳಲ್ಲಿ ಕೊಂಚ ಆತಂಕ ಮನೆ ಮಾಡಿತ್ತು. ಆದರೆ ವೈದ್ಯರು ಇದೀಗ ನಾದಬ್ರಹ್ಮನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ಸಧ್ಯಕ್ಕೆ ಯಾವುದೇ ತೊಂದರೆ ಇಲ್ಲ ಜನರಲ್ ವಾರ್ಡ್ ನಲ್ಲೆ ಒಂದು ದಿನ ರೆಸ್ಟ್ ಮಾಡುವಂತೆ ಸಲಹೆ ಕೊಡಲಾಗಿದೆ ಎಂದು ಹೇಳಿದರು. ಇನ್ನೂ ವೈದ್ಯರ ಸಲಹೆ ಮೇರೆಗೆ ಒಂದು ದಿನದ ಮಟ್ಟಿಗೆ ಆಸ್ಪತ್ರೆಯಲ್ಲೇ ಹಂಸಲೇಖ ಅವರು ಚಿಕಿತ್ಸೆ ಪಡೆಯಲಿದ್ದಾರೆ.

Share This Article
Leave a Comment