ವಾಲ್ಮೀಕಿ ತನ್ನ ತಪ್ಪನ್ನು ತಿದ್ದಿಕೊಂಡಿದ್ದರಿಂದ ಮಹರ್ಷಿಯಾದರು..! ವಾಲ್ಮೀಕಿ ಜಯಂತಿಯ ಶುಭಾಶಯಗಳು..!

0
79

ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣವನ್ನು ರಚಿಸಿದ ವಾಲ್ಮೀಕಿ ಬಗ್ಗೆ ಸಾಮಾನ್ಯವಾಗಿ ನೀವೆಲ್ಲಾ ಕೇಳಿರುತ್ತೀರಿ..! ವಾಲ್ಮೀಕಿ ಬರೆದ ರಾಮಾಯಣ ಮಾನವೀಯತೆಯ ಪಾಠವನ್ನು ಬೋಧಿಸುತ್ತೆ…! ಧರ್ಮ, ಸಂಸ್ಕೃತಿ, ನಿಷ್ಠೆ, ನ್ಯಾಯ, ನೀತಿಯನ್ನು ಎಳೆಎಳೆಯಾಗಿ ಬಿಚ್ಚಿಡುತ್ತೆ..! ರಾಮಾಯಾಣ ಪ್ರತಿಯೊಬ್ಬರ ಬದುಕಿಗೆ ಕೈಪಿಡಿ ಆಗಬಲ್ಲದು..! ಅದೇರೀತಿ ರಾಮಾಯಣ ಬರೆದ ವಾಲ್ಮೀಕಿ ಮಹರ್ಷಿಯ ಜೀವನ ಕೂಡ ನಮ್ಮೆಲ್ಲರಿಗೂ ಆದರ್ಶ..! ತಪ್ಪು ಮಾಡೋದು ಸಹಜ ಕಣೋ.. ತಿದ್ದಿ ನಡೆಯೋನು ಮನುಜಕಣೋ ಅನ್ನುವಂತೆ ವಾಲ್ಮೀಕಿ ತನ್ನ ತಪ್ಪನ್ನು ತಿದ್ದಿಕೊಂಡಿದ್ದರಿಂದ ಮಹರ್ಷಿಯಾದರು..! ರಾಮಾಯಣವನ್ನು ಬರೆದು ಮಹಾನ್ ಪುಣ್ಯಪುರುಷರಾದರು…! ವಾಲ್ಮೀಕಿ ಮಹರ್ಷಿಯಾಗಿ.. ರಾಮಾಯಣ ಮಹಾಕಾವ್ಯವನ್ನು ಬರೆಯುವ ಮೊದಲು ಏನಾಗಿದ್ದರು ಗೊತ್ತಾ..? ಅವರು ಅವರ ಕೆಟ್ಟ ಬುದ್ಧಿಯನ್ನು ಬದಲಾಯಿಸಿಕೊಳ್ಳದೇ ಇದ್ದಿದ್ದರೆ ಇವತ್ತು ನಾವ್ಯಾರೂ ಅವರನ್ನು ನೆನಪು ಮಾಡಿಕೊಳ್ತಾ ಇರ್ಲಿಲ್ಲ..! ಅವರು ಒಳ್ಳೆಯವರಾಗಿ ಬದಲಾದರು.. ತಪ್ಪನ್ನು ತಿದ್ದಿಕೊಂಡು ಸಮಾಜವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಶ್ರಮಿಸಿದರು..! ರಾಮಾಯಣದ ಮೂಲಕ ಇಡೀ ಜಗತ್ತಿಗೆ ಮಾನವೀಯತೆ.., ನ್ಯಾಯ, ನಿಷ್ಠೆಯನ್ನು ಬೋಧಿಸಿದರು..!
ವಾಲ್ಮೀಕಿಯವರ ಜೀವನಕ್ಕೆ ಸಂಬಂಧಿಸಿದಂತೆ ಹತ್ತು ಹಲವಾರು ದಂತೆಕತೆಗಳಿವೆ..! ಆ ದಂತೆಕತೆಗಳಲ್ಲಿ ಒಂದು ಕತೆಯ ಪ್ರಕಾರ, ವಾಲ್ಮೀಕಿ ಮಹರ್ಷಿಗಳು ಸನ್ಯಾಸಿ ಆಗೋ ಮೊದಲು `ರತ್ನ’ಎಂಬ ಹೆಸರಿನ ದೊಡ್ಡ ಡಕಾಯಿತ ಆಗಿದ್ದರಂತೆ..! ಕಾಡಿನ ಹಾದಿಯಲ್ಲಿ ಹೋಗುವ-ಬರುವ ಮುಗ್ಧ ಪ್ರಯಾಣಿಕರನ್ನು ಹೆದರಿಸಿ, ಬೆದರಿಸಿ ಅವರ ಬಳಿಯಲ್ಲಿದ್ದುದನ್ನೆಲ್ಲಾ ದೋಚಿ ಜೀವನ ನಡೆಸ್ತಾ ಇದ್ದರಂತೆ..! ಹೀಗೆ ಜೀವನ ನಡೆಸ್ತಾ ಇರಬೇಕಾದ್ರೆ ಈ ರತ್ನರಿಗೆ (ವಾಲ್ಮೀಕಿ) ನಾರದ ಎದುರಾಗ್ತಾರೆ..! ಒಮ್ಮೆ ಆ ನಾರದರನ್ನು ದೋಚಲು ಪ್ರಯತ್ನ ಪಡ್ತಾರೆ..! ಆಗ ನಾರದ ಈ ರತ್ನರಿಗೆ ಉಪದೇಶ ಮಾಡ್ತಾರೆ..! ನಾರದರ ಉಪದೇಶದಿಂದ ಬದಲಾದ ರತ್ನರಿಗೆ ಜ್ಞಾನೋದಯವಾಗುತ್ತಂತೆ..! ಅದೇರೀತಿ ವಾಲ್ಮೀಕಿ ಪ್ರಚೇತಸ ಮುನಿಯ ಮಗನಂತೆ..! ಅದಕ್ಕಾಗಿ ಇವರಿಗೆ ಪ್ರಾಚೇತಸ ಎಂಬ ಇನ್ನೊಂದು ಹೆಸರೂ ಕೂಡ ಇದೆ..! ಇನ್ನೊಂದು ಕತೆಯಂತೆ, ದೇವರ ಧ್ಯಾನದಲ್ಲಿ ತಲ್ಲೀನರಾಗಿ ತಪಸ್ಸು ಮಾಡ್ತಾ ಇದ್ದ ಅವರ ಸುತ್ತ ಹುತ್ತ ಬೆಳೆಯಿತಂತೆ..! ಹುತ್ತಕ್ಕೆ ಸಂಸ್ಕೃತದಲ್ಲಿ ವಲ್ಮೀಕ ಅಂತ ಹೆಸರಿದೆ…! ಈ ವಲ್ಮಿಕವನ್ನು ಭೇದಿಸಿದ ಇವರು `ವಾಲ್ಮೀಕಿ’ ಆಗ್ತಾರಂತೆ..!
ಏನೇ ಆಗಲಿ, ತಪ್ಪನ್ನು ತಿದ್ದಿಕೊಳ್ಳುವ ಮನಸ್ಸು ಮಾಡಿದರೆ, ಬೇರೆಯವರ ಒಳ್ಳೆಯ ಮಾತನ್ನು ಕೇಳಿಸಿಕೊಂಡರೆ.., ಒಳ್ಳೆಯದಾಗಿಯೇ ಆಗುತ್ತೆ..! ವಾಲ್ಮೀಕಿ ನಾರದರ ಮಾತನ್ನು ಕೇಳಿ ತಪ್ಪನ್ನು ತಿದ್ದಿಕೊಂಡರು.. ಇವತ್ತು ಇಡೀ ಜಗತ್ತಿಗೇ ವಾಲ್ಮೀಕಿ ಗೊತ್ತು..! ಇಂದು ವಾಲ್ಮೀಕಿ ಜಯಂತಿ..! ಎಲ್ಲರಿಗೂ ವಾಲ್ಮೀಕಿ ಜಯಂತಿಯ ಶುಭಾಶಯಗಳು..! ವಾಲ್ಮೀಕಿ ರಾಮಾಯಣ ಮತ್ತು ವಾಲ್ಮೀಕಿ ಜೀವನ ಎರಡೂ ಕೂಡ ಇಡೀ ಜಗತ್ತಿಗೇ ಮಾದರಿ..! ಇವುಗಳನ್ನು ತಿಳಿದು ನಾವೆಲ್ಲಾ ಬದಲಾಗೋಣ..!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ನಿಮ್ಮ ಪ್ರಕಾರ ಬಿಗ್ ಬಾಸ್ ಗೆಲ್ಲೋರು ಯಾರು..? ಈಗಲೇ ಕಮೆಂಟ್ ಮಾಡಿ, ಓಟ್ ಮಾಡಿ..!

ಇಡೀ ಹಳ್ಳಿಗೆ ವಿದ್ಯುತ್ ಭಾಗ್ಯ ಕರುಣಿಸಿದ ವಿದ್ಯಾರ್ಥಿ..!

ಆತನ ಆಸ್ತಿ ಬಗ್ಗೆ ಕೇಳಿದ್ರೆ ಬೆಚ್ಚಿಬೀಳ್ತೀರಿ..! ಲಕ್ಷ್ಮೀ ಇದ್ದರೂ ದುರಾದೃಷ್ಟ ಬೆನ್ನಿಗೇರಿಸಿಕೊಂಡವನೀತ..!

ಕಜಕಿಸ್ತಾನದಲ್ಲಿದೆ ಕುಂಭಕರ್ಣನೂರು..! ಇಲ್ಲಿನ ಜನರಿಗೆ ನಿದ್ರೆ ಮಾಡುವುದೇ ದೊಡ್ಡ ಕೆಲಸ

ಅಂಗವೈಕಲ್ಯತೆಯನ್ನು ಮೆಟ್ಟಿನಿಂತ ಆಟೋಡ್ರೈವರ್..! ಮನಮುಟ್ಟುವ ಈ ವೀಡಿಯೊವನ್ನು ತಪ್ಪದೇ ನೋಡಿ.

ಬಸ್ ಸ್ಟ್ಯಾಂಡ್ ನಲ್ಲಿ ನಿಂತಾಗ ಈಕೆಗೆ ಬಸ್ ಸಿಗದಿದ್ದರೆ ಏನ್ಮಾಡ್ತಾಳೆ ಗೊತ್ತಾ..?

45 ದಿನದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ..!

ಈ ಬಿಲ್ಡಿಂಗ್ ಕಟ್ಟಿರೋದೆ ಲವ್ ಲೆಟರ್ ನಲ್ಲಿ…! ಇದನ್ನು ಕಟ್ಟೋಕೆ ಎಷ್ಟು ಲವ್ ಲೆಟರ್ ಬಳಸಿದ್ದಾರೆ ಗೊತ್ತಾ..?

ಸೈಬರ್ ವಂಚನೆಯಿಂದ ಮಹಿಳೆಯನ್ನು ಕಾಪಾಡಿದ ಬ್ಯಾಂಕ್ ಉದ್ಯೋಗಿ..!

ಅಕ್ಕನ ನೆನಪು ಈ ಪುಟ್ಟ ತಮ್ಮನಿಗೆ ಎಷ್ಟೊಂದು ಕಾಡ್ತಾ ಇದೆ ಗೊತ್ತಾ..? ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬಲಿ..!

ಇಲ್ನೋಡ್ರೀ ಕೆಲಸ ಕಮ್ಮಿ, ಸಂಬಳ ಜಾಸ್ತಿ…!

ಭಾರತದ 50% ಆಸ್ತಿ 1% ಟಾಪ್ ಶ್ರೀಮಂತರ ಬಳಿಯೇ ಇದೆ..!

ತಾಳಿ ಕಟ್ಟಿದ ಐದೇ ನಿಮಿಷಕ್ಕೆ ತಾಳಿ ಕಿತ್ತು ವಾಪಸ್ ಕೊಟ್ಟ ವಧು..! ಅಷ್ಟಕ್ಕೂ ಅವಳು ಆ ನಿರ್ಧಾರ ಮಾಡಿದ್ದು ಯಾಕೆ ಗೊತ್ತಾ..?

ಬಡವರಿಗಾಗಿ ವಿಮಾನ ಖರೀದಿಸಿದ ನಿವೃತ್ತ ಇಂಜಿನಿಯರ್..! ವಿಮಾನ ಕೊಳ್ಳಲು ಭೂಮಿಯನ್ನೇ ಮಾರಿದರು..!

ಭಾರತೀಯ ನಟಿಯರನ್ನು ಕಂಡ ಕೋರಿಯನ್ನರಿಗೇಕೆ ಅಚ್ಚರಿ ಆಯಿತು..!

ಟಿ ಎಸ್ ಯು – ಸೋಷಿಯಲ್ ಮೀಡಿಯಾ ನೀವೂ ಉಪಯೋಗಿಸುವುದಕ್ಕೆ ಪ್ರೋತ್ಸಾಹ ಧನದ ರೂಪದಲ್ಲಿ ನಿಮಗೆ ದುಡ್ಡನ್ನೂ ಕೊಡ್ತಾರೆ..!

ನಾಲ್ಕನೇ ತರಗತಿಯಲ್ಲೇ ಪ್ರೀತಿಸಿದ್ದ ಜೋಡಿಹಕ್ಕಿಗಳು..! ಇಂಥಾ ಲವ್ ಸ್ಟೋರಿಯನ್ನು ನೀವೆಲ್ಲೂ ಕೇಳಿಲ್ಲ..ನೋಡಿಲ್ಲ.. ಓದಿಲ್ಲ..!

LEAVE A REPLY

Please enter your comment!
Please enter your name here