ಈ ಬಾರಿ ಸಮಸ್ತ ಕನ್ನಡಿಗರಿಗೆಂದೆ ಸಿದ್ದವಾಗಿರುವ ಹೊಸ ರಿಯಾಲಿಟಿ ಶೋ ‘ಕನೆಕ್ಷನ್’ ಈ ವಾರ ಜನರನ್ನು ನಕ್ಕು ನಲಿಸಲು ಸಿದ್ದವಾಗಿ ನಿಂತಿದ್ದು, ಪ್ರತೀ ವಾರ ಬೇರೆ ಬೇರೆ ಸ್ಟಾರ್ ಆಕ್ಟರ್‍ಗಳನ್ನು ಕರೆತಂದು ನಿಮ್ಮನ್ನು ನಕ್ಕು ನಲಿಸಲಿದ್ದಾರೆ. ಅದೇ ರೀತಿ ಈ ವಾರ ಒಬ್ಬ ಹೊಸ ಅಥಿತಿಯನ್ನು ಈ ಕನೆಕ್ಷನ್ ಕಾರ್ಯಕ್ರಮಕ್ಕೆ ಕರೆ ತಂದಿದ್ದಾರೆ.
ಈ ಹೊಸ ಅಥಿತಿ ಯಾರಪ್ಪ ಅಂತ ಕೇಳ್ತೀರಾ..? ಬೇರ್ಯಾರೂ ಅಲ್ಲ ಯೂಟ್ಯೂಬ್ ಸ್ಟಾರ್ ಅಂತಾನೆ ಕರೆಯಲ್ಪಟ್ಟ, ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್..! ಹೌದು ಈ ವಾರದ ಮೋಸ್ಟ್ ಡೇಂಜರಸ್ ಮ್ಯಾನ್, ನೇರ ಮಾತು ವಿವಾದಗಳಿಂದ ಸದಾ ಸುದ್ದಿಯಾಗಿರುವ ಹುಚ್ಚಾ ವೆಂಕಟ್ ಅವರು ಈ ವಾರದ ವಿಶೇಷ ಅಥಿತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕನೆಕ್ಷನ್ ಅಡ್ಡಾದಲ್ಲಿ ವೆಂಕಟ್ ಜಬರ್ದಸ್ತ್ ಆಟವಾಡುವುದರ ಜೊತೆಯಲ್ಲಿ ಹಾಡು, ಮೋಜು- ಮಸ್ತಿಯಲ್ಲಿ ತಲ್ಲೀನರಾಗಿದ್ದಾರೆ. ಇವರ ಈ ಲವಲವಿಕೆಯ ಆಟ ಪ್ರೇಕ್ಷಕರಿಗೆ ಫುಲ್ ಮಜಾ ಕೊಡೊದಂತೂ ಗ್ಯಾರಂಟಿ..!
ಈ ಬಾರಿ ಇವರು ಬರೀ ಮಾತು ವಿವಾದಗಳನ್ನು ಸೃಷ್ಠಿಸಿಲ್ಲ, ಬದಲಾಗಿ ತಮ್ಮ ಮನದಾಳದ ಮಾತುಗಳನ್ನು ಈ ಶೋನಲ್ಲಿ ಬಿಚ್ಚಿಟ್ಟಿದ್ದಾರೆ.. ಚಿತ್ರರಂಗದಲ್ಲಿ ತಾವು ಬೆಳೆದು ಬಂದ ಧೀರ್ಘ ಪಯಣ, ಸಿನಿಮಾಗಳ ಲಿಂಕ್ ಜೊತೆಗೆ ಸಂಬಂಧಗಳ ಸಿಂಕ್ ನೆನದು ಹುಚ್ಚಾ ವೆಂಕಟ್ ಬಾವುಕರಾಗಿ ಮಾತನಾಡಿದ್ದಾರೆ..!
ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಪಕ್ಕಾ ಅಭಿಮಾನಿಯಾದ ಹುಚ್ಚಾ ವಡಂಕಟ್ ಅವರಂತೆ ಮಿಮಿಕ್ರಿಯನ್ನು ಮಾಡಿ ಜನರನ್ನು ರಂಜಿಸಲಿದ್ದಾರೆ. ಜೊತೆಗೆ ತಾವೇ ಹಾಡಿದ್ದ ಹುಟ್ಟಿದ ಊರನ್ನು ಬಿಟ್ಟು ಬಂದ ಮೇಲೆ ಹಾಡನ್ನು ಕನೆಕ್ಷನ್ ಶೋನ ವೇದಿಕೆಯಲ್ಲಿ ಮತ್ತೆ ಹಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ ತಮ್ಮ ಹೊಸ ಚಿತ್ರ ‘ತಿಲಕ’ದ ಒಂದು ಭರ್ಜರಿ ಡೈಲಾಗ್ ಹೊಡೆದು ಎಲ್ಲರನ್ನು ರಂಜಿಸಿದ್ದಾರೆ. ಅಲ್ಲದೇ ಫೈರಿಂಗ್ ಸ್ಟಾರ್ ವೆಂಕಟ್ ಚೆಂದುಳ್ಳಿ ಚೆಲುವೆ ಶ್ರಾವ್ಯ ಅವರ ಜೊತೆಗೂಡಿ ಸಖತ್ ಡ್ಯಾನ್ಸ್ ಕೂಡ ಮಾಡಿದ್ದಾರೆ.
POPULAR STORIES :
18 ವರ್ಷ ತುಂಬುದ್ರೆ 37 ಸಾವಿರ ಆಫರ್…!
ಸ್ಮಶಾನದಲ್ಲಿದೆ ನಮ್ಮೂರ ಶಾಲೆ: ಒಬ್ರು ಸತ್ರೆ ಮೂರ್ ದಿನ ಶಾಲೆ ರಜೆ..!
ಲಂಡನ್ ಒಲಂಪಿಕ್‍ನಲ್ಲಿ ಕಂಚು ಗೆದ್ದಿದ್ದ ಯೋಗೆಶ್ವರ್‍ಗೆ ಬೆಳ್ಳಿ ಭಾಗ್ಯ..!!
ನಿಮ್ಮ ಸ್ಕಿನ್ ಸಾಫ್ಟ್ ಆಗಬೇಕೆ..? ಹಾಗಿದ್ರೆ ಅಲೋವೇರಾಕ್ಕೆ ಮೊರೆ ಹೋಗಿ….!
ಪಬ್ಲಿಕ್ ಪ್ಲೇಸ್‍ನಲ್ಲೇ ಸೆಕ್ಸ್ ಮಾಡಿ ಸಿಕ್ಕಿಬಿದ್ದ ಹಾಲಿವುಡ್ ಸೆಲೆಬ್ರೆಟಿ…!