ನಟ ಹುಚ್ಚವೆಂಕಟ್ ತಾವು ಐಶ್ವರ್ಯ ಎಂಬುವವರನ್ನು ಮದುವೆಯಾಗಿರುವುದಾಗಿ ಇತ್ತೀಚೆಗೆ ಹೇಳಿಕೊಂಡಿದ್ದರು. ಇದೀಗ ನಾನು ಮದುವೆಯಾಗಿಲ್ಲ. ನಾನೊಬ್ಬನೇ ಎಂದು ಹೇಳಿದ್ದಾರೆ…!
ಡಿಕ್ಟೇಟರ್ ಹುಚ್ಚವೆಂಕಟ್ ಚಿತ್ರದ ನಾಯಕಿ ಐಶ್ವರ್ಯ ಅವರನ್ನು ಮದುವೆಯಾಗಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಒಂದನ್ನು ಹರಿಬಿಟ್ಟಿದ್ದ ಹುಚ್ಚವೆಂಕಟ್ , ಈಗ ಅದು ಸುಳ್ಳು ಎನ್ನುತ್ತಿದ್ದಾರೆ.
ಐಶ್ವರ್ಯ ಅವರನ್ನು ಮದುವೆ ಆಗಿರುವುದು ಸಿನಿಮಾದಲ್ಲಿರುವ ದೃಶ್ಯ. ಅದನ್ನೇ ವಿಡಿಯೋ ಮಾಡಿ ರಿಲೀಸ್ ಮಾಡಿದ್ದೇನೆ. ನಾನು ಯಾವತ್ತಿಗೂ ಒಬ್ಬನೇ, ನನಗೆ ಯಾರೂ ಬೇಕಾಗಿಲ್ಲ ಎಂದಿದ್ದಾರೆ ವೆಂಕಟ್.
ಮದುವೆಯ ವಿಚಾರದ ಬಗ್ಗೆ ಐಶ್ವರ್ಯ ಈ ರೀತಿ ಮಾಡಲು ಹೇಳಿದ್ದರು. ಹಾಗಾಗಿ ನಾನು ಮದುವೆಯಾಗಿದ್ದೇನೆಂದು ವಿಡಿಯೋ ಮಾಡಿದೆ. ಆದರೆ ನನಗೆ ಈ ರೀತಿ ಮಾಡುವುದು ಇಷ್ಟವಿಲ್ಲ. ಅದಕ್ಕಾಗಿ ನಿಮ್ಮ ಮುಂದೆ ಎಲ್ಲವೂ ಹೇಳಿದ್ದೇನೆ ಎಂದು ಹುಚ್ಚ ವೆಂಕಟ್ ವಿಡಿಯೋದಲ್ಲಿ ಹೇಳಿದ್ದಾರೆ.
ಹುಚ್ಚ ವೆಂಕಟ್ ಫೇಸ್‍ಬುಕ್ ಲೈವ್ ಬಂದು ತಮ್ಮ ಮದುವೆ ಬಗ್ಗೆ ಎಲ್ಲರಿಗೂ ತಿಳಿಸಿದ್ದರು. ಕಳೆದ ವಾರ ತಲಕಾವೇರಿಯಲ್ಲಿ ನಾನು ಐಶ್ವರ್ಯರನ್ನು ಮದುವೆ ಆದೆ. ಮದುವೆ ಆದ ನಂತರ ಐಶ್ವರ್ಯ ಅವರ ದೊಡ್ಡಮ್ಮ ತೀರಿಕೊಂಡರು. ಹಾಗಾಗಿ ಮದುವೆ ಆದ ವಿಷಯವನ್ನು ನಾವು ಮನೆಯವರಿಂದ ಹಾಗೂ ಎಲ್ಲರಿಂದ ಮುಚ್ಚಿಟ್ಟಿದ್ದೀವಿ ಎಂದು ಹುಚ್ಚ ವೆಂಕಟ್ ತಮ್ಮ ಫೇಸ್‍ಬುಕ್ ಲೈವ್ ನಲ್ಲಿ ಹೇಳಿದ್ದರು.
ನಾವಿಬ್ಬರೂ ಮದುವೆಯಾಗಿ ಜೊತೆಯಲ್ಲಿ ಇದ್ದೇವೆ. ನಾನು ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೀನಿ ಹಾಗೂ ಆಕೆಯನ್ನು ತುಂಬಾ ಪ್ರೀತಿಸ್ತೀನಿ. ಅವಳು ಕೂಡ ನನ್ನನ್ನು ತುಂಬಾನೇ ಪ್ರೀತಿಸುತ್ತಾಳೆ. ನಾವು ಯಾವುದೇ ತಪ್ಪು ಮಾಡಿಲ್ಲ. ಇಬ್ಬರು ಪ್ರೀತಿಸಿ ಮದುವೆ ಆಗಿದ್ದೀವಿ ಹಾಗೂ ನಾವಿಬ್ಬರು ಮೇಜರ್. ಬಲವಂತವಾಗಿ ನಾವು ಮದುವೆಯಾಗಿಲ್ಲ. ನಮ್ಮಿಬ್ಬರನ್ನು ದೂರ ಮಾಡಬೇಡಿ ಎಂದು ಹುಚ್ಚ ವೆಂಕಟ್ ಮನವಿ ಮಾಡಿಕೊಂಡಿದ್ದರು.