No menu items!
8 C
Munich
Saturday, May 2, 2026

ಸೋಲಿನ ಮೇಲೆ ಸಿಂಹಾಸನ ಹಾಕಿ ಕೂರೋದೇ ನನ್ನ ಬದುಕು ಎಂದ ಜಗ್ಗೇಶ್…!

Must read

ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ನಟ ಜಗ್ಗೇಶ್ ಸೋಲು ಕಂಡಿದ್ದಾರೆ. ಸುಮಾರು 45 ಸಾವಿರ ಮತಗಳ‌ ಅಂತರದ ಸೋಲು ಕಂಡಿರುವ ಜಗ್ಗೇಶ್ ತಮ್ಮ ಸೋಲಿನ ಬಗ್ಗೆ ಮಾತಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ‌ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಸೋಲಿನ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಜಗ್ಗೇಶ್, ಹಣ , ಹೆಂಡ ಈ ಚುನಾವಣೆಯಲ್ಲಿ ಗೆದ್ದಿದೆ ಅಂದಿದ್ದಾರೆ. ಇದು ನನ್ನ ಸೋಲಲ್ಲ. ನನ್ನ ಮೇಲಿನ ಅಭಿಮಾನ ಗೆದ್ದಿದೆ ಎಂದು ಟ್ವೀಟ್ ಮಾಡಿದ್ದಾರೆ.

 

ಟಿಕೆಟ್ ಸಿಕ್ಕಿದ್ದು ಕೊನೆಯ ಘಳಿಗೆಯಲ್ಲಿ . ಸಿಕ್ಕ ಕಡಿಮೆ‌ ಸಮಯದಲ್ಲಿ ಜನರ ಅಭಿಮಾನಗಳಿಸಿಕೊಂಡಿದ್ದೀನಿ. ಒಂದು ವೇಳೆ ಮೂರು ತಿಂಗಳ ಮುಂಚೆಯೇ ಅವಕಾಶ ನೀಡಿದ್ದರೆ ಚಿತ್ರಣವೇ ಬೇರೆ ಆಗ್ತಿತ್ತು ಎಂದಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ ನಾನು 15 ದಿನದ ಅಭ್ಯರ್ಥಿ. ನನ್ನ ಫಲಿತಾಂಶಕ್ಕಿಂತ ನನಗೆ ನನ್ನ ಪಕ್ಷದ ಫಲಿತಾಂಶ ಮುಖ್ಯ. ರಾಯರ ದಯೆಯಿಂದ ನನ್ನ ಪಕ್ಷ ಗಡಿತಲುಪಿದೆ ಎಂದು ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article