`ಟಿವಿಯಲ್ಲಿ ನಮ್ಮ ಕಂಪನಿಯ ಜಾಹೀರಾತು ಕೊಡೋದಾ..? ಏನ್ ತಮಾಷೆ ಮಾಡ್ತಿದೀರಾ..? ಅದಕ್ಕೆಲ್ಲಾ ಕೋಟಿಗಟ್ಟಲೇ ದುಡ್ಡಿರಬೇಕು..!’ ಇಂತಹ ತಪ್ಪುಕಲ್ಪನೆಯಲ್ಲಿ ಈಗಲೂ ಅದೆಷ್ಟೋ ಕಂಪನಿಗಳಿವೆ. ಆದರೆ ಕರ್ನಾಟಕದ ಮಟ್ಟದಲ್ಲಿ ಇಂತಹ ತಪ್ಪುಕಲ್ಪನೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಅತಿಹೆಚ್ಚು ಶ್ರಮಿಸುತ್ತಿರುವ ಸಂಸ್ಥೆ ಐ.ಎ.ಎಂ ಅಂದ್ರೆ ಇನ್ನೋವೇಟಿವ್ ಅಡ್ವಾನ್ಸ್ಡ್ ಮೀಡಿಯಾ..!,
ಹೌದು ಒಂದು ಕಾಲ ಹಾಗಿತ್ತು, ಚಿಕ್ಕಪುಟ್ಟ ಕಂಪನಿಗಳೆಲ್ಲಾ ಟಿವಿಗಳಲ್ಲಿ ಜಾಹೀರಾತು ಕೊಡೋದರ ಬಗ್ಗೆ ಕನಸಿನನಲ್ಲೂ ಯೋಚನೆ ಮಾಡಲಾಗದ ಕಾಲ..! ಅಂತಹ ಟೈಮಲ್ಲಿ ಹುಟ್ಟಿಕೊಂಡ ಸಂಸ್ಥೆ ಐ.ಎ.ಎಂ. ದೊಡ್ಡದೊಡ್ಡ ಬ್ರ್ಯಾಂಡ್ಗಳು ಟಿವಿಗಳಲ್ಲಿ ಜಾಹೀರಾತುಗಳು ನಮಗಷ್ಟೇ ಸೀಮಿತ ಅಂತ ಮೆರೆಯುತ್ತಿದ್ದ ಸಮಯದಲ್ಲಿ ಪ್ರಾದೇಶಿಕ ಬ್ರ್ಯಾಂಡ್ಗಳ ಪಾಲಿಗೆ ವರವಾಗಿ ಹುಟ್ಟಿಕೊಂಡಿತ್ತು ಐ.ಎ.ಎಂ..!
ಜಿ.ಕೆ.ಮಧುಸೂಧನ್, ಆರ್.ಚಂದ್ರಶೇಖರ್ ಮತ್ತು ತಂಡ, ಅವರ ಗುರಿಯ ಬಗ್ಗೆ ಸ್ಪಷ್ಟವಾಗಿದ್ರು. ಪ್ರಾದೇಶಿಕ ಬ್ರ್ಯಾಂಡ್ಗಳಿಗೆ ಅವರ ಕೈಗೆಟುಕುವ ಬೆಲೆಯಲ್ಲಿ ಟಿವಿಗಳಲ್ಲಿ ಜಾಹೀರಾತು ಪ್ರಸಾರ ಮಾಡಿಸಬೇಕು. ಪ್ರಸಾರವಾಗಲು ಬೇಕಾಗೋ ಜಾಹೀರಾತನ್ನು ಐ.ಎ.ಎಂ ಸಂಸ್ಥೆಯಿಂದಲೇ ಸಾಧ್ಯವಾದಷ್ಟೂ ಕಡಿಮೆ ಬೆಲೆಯಲ್ಲಿ ನಿರ್ಮಾಣ ಮಾಡಿಕೊಡಬೇಕು ಅನ್ನೋದು..! ಹಾಗೆಯೇ 1998ರಿಂದ ತನ್ನ ಚಟುವಟಿಕೆ ಆರಂಭಿಸ್ತು. ಕ್ರಿಕೆಟ್ ಮತ್ತು ಕಾರ್ಪೋರೇಟ್ ಕಂಪನಿಗಳ ಅಬ್ಬರದ ನಡುವೆ ಹೋರಾಟ ಮಾಡಲಾಗದೇ ಮರುಗುತ್ತಿದ್ದ ಪ್ರಾದೇಶಿಕ ಕಂಪನಿಗಳಿಗೆ ಸಾಥ್ ಕೊಟ್ಟ ಐ.ಎ.ಎಂ ಸಂಸ್ಥೆ ಜಾಹೀರಾತು ನಿರ್ಮಾಣ, ಪ್ರಸಾರ, ಮೀಡಿಯಾ ಬಯ್ಯಿಂಗ್, ಮೀಡಿಯಾ ಪ್ಲ್ಯಾನಿಂಗ್, ಬ್ರ್ಯಾಂಡ್ ಬಿಲ್ಡಿಂಗ್ ಸೇರಿದಂತೆ ಹಲವು ವಿಭಾಗಗಳಲ್ಲಿ ಶ್ರಮಿಸಿ, ಇಂದು ದೊಡ್ಡದೊಡ್ಡ ಜಾಹೀರಾತು ಸಂಸ್ಥೆಗಳ ನಿದ್ದೆಗೆಡಿಸಿದೆ..! ಯಾವುದೇ ಕಂಪನಿ ತಮ್ಮ ಬ್ರ್ಯಾಂಡ್ ಹಿಡಿದು ಐಎಎಂ ಸಂಸ್ಥೆಗೆ ಬಂದರೆ ಅವರ ಅರ್ಧ ತಲೆನೋವು ಕಡಿಮೆಯಾದಂತೆ..! ಆ ಬ್ರ್ಯಾಂಡ್ ಅನ್ನು ಹೇಗೆಮನೆಮನೆಗೆ ತಲುಪಿಸಬೇಕು..? ಅದು ಎಷ್ಟರ ಮಟ್ಟಿಗೆ ರೀಚ್ ಆಗಿದೆ..? ಇದನ್ನು ಹೇಗೆಲ್ಲಾ ಜನರಿಗೆ ತಲುಪಿಸಬಹುದು..? ಯಾವ ಮಾಧ್ಯಮದ ಮುಖಾಂತರ ಇದನ್ನು ಜನರಿಗೆ ತಲುಪಿಸಬಹುದು..? ಈ ಬ್ರ್ಯಾಂಡನ್ನು 20 ಸೆಕೆಂಡ್ ಜಾಹೀರಾತಿನ ಮೂಲಕ ಜನರಿಗೆ ಹೇಗೆ ತಲುಪಿಸಬಹುದು..? ಇದೆಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ಕಾರ್ಯನಿರ್ವಹಿಸುತ್ತೆ ಐಎಎಂ..! ಇಂತಹ ಪ್ರತಿಷ್ಟಿತ ಐಎಎಂ ಇಂದು ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ, ಈಗಾಗಲೇ ಸಾವಿರಾರು ಜಾಹೀರಾತುಗಳನ್ನು ನಿರ್ಮಿಸಿರೋ ಈ ಸಂಸ್ಥೆ, ಈಗ ಸಿಲ್ವರ್ ಸ್ಕ್ರೀನ್ ಕಡೆ ಮುಖ ಮಾಡಿದೆ. ಅಂದ್ರೆ ಐಎಎಂ ಹಾಗಗೂ ಅದರ ಸಹವರ್ತಿ ಸಂಸ್ಥೆ ಬ್ರೇನ್ ಶೇರ್ ಕ್ರಿಯೇಶನ್ಸ್, ಸಿನಿಮಾ ನಿರ್ಮಾಣಕ್ಕೆ ಕೈಹಾಕಿದ್ದಾರೆ..!
ಬ್ರೈನ್ ಶೇರ್ನ ಚಂದ್ರಶೇಖರ್ ಇದರ ನಿರ್ಮಾಣದ ಹೊಣೆಹೊತ್ತಿದ್ದರೆ, ಜಾಹೀರಾತು ಕ್ಷೇತ್ರದಲ್ಲಿ ಅತ್ಯಂತ ಕ್ರಿಯಾಶೀಲ ಅಂತ ಗುರುತಿಸಿಕೊಂಡಿರೋ ಮಧುಸೂಧನ್ ಇದರ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ..! ಸಾವಿರಾರು ಜಾಹೀರಾತುಗಳಲ್ಲಿ ತಮ್ಮ ಐಡಿಯಾ, ಕ್ರಿಯೇಟಿವಿಟಿ, ನಿರ್ದೇಶನದ ಟೆಕ್ನಿಕ್ಸ್ ತೋರಿಸಿರೋ ಮಧುಸೂಧನ್ ಅವರಿಗೆ ಒಂದು ಕ್ವಾಲಿಟಿ ಸಿನಿಮಾ ಮಾಡೋದು ಕಷ್ಟದ ಕೆಲಸವಲ್ಲ. ಕನ್ನಡದಲ್ಲಿ ಅಷ್ಟಾಗಿ ಒಳ್ಳೆಯ ಕಥೆಗಳಿಗೆ ಹೆಚ್ಚು ಮಹತ್ವ ಕೊಡೋದಿಲ್ಲ, ಆದ್ರೆ ಈ ತಂಡ ಕಥೆ ಹಾಗೂ ಚಿತ್ರಕತೆಗೆ ಹೆಚ್ಚಿನ ಎಫರ್ಟ್ ಹಾಕ್ತಿದೆ..! ಸಿನಿಮಾದ ಕಥೆ ಅದ್ಭುತವಾಗಿದ್ರೆ ಮುಂದಿನದೆಲ್ಲ ಸಲೀಸಾಗಿ ಸಾಗುತ್ತೆ ಅನ್ನೋದು ಚಂದ್ರಶೇಖರ್ ಹಾಗೂ ಮಧುಸೂಧನ್ ಅವರ ಅಭಿಪ್ರಾಯ. ಅದು ನಿಜವೂ ಹೌದು..! ಜಾಹೀರಾತು ಕ್ಷೇತ್ರದಲ್ಲಿ ಮಿಂಚಿದ್ದ ಕಾರ್ಪೋರೇಟ್ ಸಂಸ್ಥೆಯೊಂದು, ಈಗ ಸಿನಿಮಾ ಕ್ಷೇತ್ರದತ್ತ ಮುಖ ಮಾಡಿದೆ. ಕ್ರಿಯೇಟಿವಿಟಿಗೆ ಯಾವುದೇ ಕೊರತೆಯಿಲ್ಲದ ಈ ಟೀಮಿನಿಂದ ಉತ್ತಮ ಮೆಸೇಜ್ ಇರೋ ಒಂದು ಅದ್ಭುತ ಮನರಂಜನಾ ಚಿತ್ರ ಕನ್ನಡದ ಪ್ರೇಕ್ಷಕನಿಗೆ ಸಿಗೋದರಲ್ಲಿ ಅನುಮಾನವಿಲ್ಲ. ಸ್ಕ್ರಿಪ್ಟ್ ಯಾರನ್ನು ಕೇಳುತ್ತೋ ಅವರೇ ಸಿನಿಮಾದ ನಾಯಕ ಅಂತ ಸಿನಿಮಾದ ಹೀರೋ ಬಗ್ಗೆ ಹೇಳೋ ಮಧುಸೂಧನ್, ಒಂದು ಕಮರ್ಶಿಯಲ್ ಸಿನಿಮಾ ಆದ್ರೂ ಎಲ್ಲೂ ಲಾಜಿಕ್ ಬಿಟ್ಟುಕೊಡದೇ ಒಂದು ಒಳ್ಳೇ ಸಿನಿಮಾ ಮಾಡೋ ವಿಶ್ವಾಸದಲ್ಲಿದ್ದಾರೆ. ಅವರಿಗೆ ನಿಮ್ಮ ಕಡೆಯಿಂದಾನೂ ಒಂದು ಆಲ್ ದಿ ಬೆಸ್ಟ್ ಹೇಳಿಬಿಡಿ.
– ಕೀರ್ತಿ ಶಂಕರಘಟ್ಟ