ಇನ್ನೂ ನೀವು `ಐ ಲವ್ ಯೂ' ಹೇಳಿಲ್ವಾ..? ಇವರ ಸ್ಟೋರಿಯ ಹಾಗೆ ನಿಮ್ಮ ಸ್ಟೋರಿ ಆಗದಿರಲಿ…!

0
86
ಸುಮಂತ್ ಗೆ ತಾಯಿ ಬಿಟ್ಟರೆ ಬೇರೇ ಯಾರೂ ಇರಲಿಲ್ಲ! ಆತ 18ನೇ ವರ್ಷದಲ್ಲಿಯೇ ಕ್ಯಾನ್ಸರ್ ನಿಂದ ಬಳಲುತ್ತಿದ್ದ! ಕ್ಯಾನ್ಸರ್ ಇದೆ ಅಂತ ಗೊತ್ತಾದಾಗ ಕುಗ್ಗಿ ಹೋಗ್ತಾನೆ! ಪಿಯುಸಿ ಓದನ್ನೂ ಅರ್ಧಕ್ಕೆ ನಿಲ್ಲಿಸ್ತಾನೆ, ಕ್ಯಾನ್ಸರ್ ಗೆ ಚಿಕೆತ್ಸೆ ತಗೊಂಡ್ರೂ ಅದೇನು ಗುಣ ಆಗಲ್ಲ ಅಂಥ ಅವ್ನು ಆಸ್ಪತ್ರೆಗೂ ಹೋಗಲ್ಲ! ಸಾವು ಯಾವಾಗ ಬೇಕಾದ್ರೂ ಬರುತ್ತೇ ಅಮ್ಮಾ, ನಾನೂ ಸಾಯೋ ತನಕ ನಿನ್ನ ಬಿಟ್ಟು ಒಂದು ಕ್ಷಣವೂ ಇರಲ್ಲ, ನಾನೂ ಈಗ ಹಾಸ್ಪೆಟಲ್ ಗೆ ಹೋದ್ರೂ, ಪ್ರಯೋಜನ ಇಲ್ಲ! ನಾನೇ ನಿನ್ನ ನೋಡಿಕೊಳ್ಳಬೇಕಿತ್ತು, ಆದ್ರೆ ಬೇಗ ನಾನು ಸತ್ತು ಹೋಗುತ್ತೇನೆ, ಆದ್ರಿಂದ ನನಗಂತ ದುಡ್ಡು ಖರ್ಚು ಮಾಡಬೇಡ! ಅಪ್ಪ ಮಾಡಿಟ್ಟುರುವ ಹಣ ನಿನ್ನ ಮುಂದಿನ ಖಚರ್ಿಗೆಜೀವ್ನಕ್ಕೆ ಇರ್ಲಿ ಅಂದಿರ್ತಾನೆ!
ದಿನಾ ಬೆಳಿಗ್ಗೆ ಎದ್ದು, ತಾಯಿ ಜೊತೆ ದೇವಸ್ಥಾನಕ್ಕೆ ಹೋಗಿ ಬರುವುದು ಮಾತ್ರ ಇವನ ಕೆಲಸವಾಗಿತ್ತು! ಒಮ್ಮೆ ದೇವಸ್ಥಾನಕ್ಕೆ ಹೋದಾಗ ಆಕಸ್ಮಿಕವಾಗಿ ಪಲ್ಲವಿ ಪರಿಚಯವಾಗುತ್ತೆ!
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಪರಿಚಿತಳಾದ ಪಲ್ಲವಿ ಮೂರ್ನಾಲ್ಕು ದಿನಕ್ಕೆ ತುಂಬಾ ಕ್ಲೋಸ್ ಆಗ್ತಾಳೆ! ಅವರ ಮನೆ ಪರಿಸ್ಥಿತಿಯನ್ನೂ ತಿಳಿಯುತ್ತಾಳೆ. ಸುಮಂತ್ ತಂದೆ ತೀರಿಕೊಂಡಿದ್ದಾರೆ, ಸುಮಂತ್ ಕ್ಯಾನ್ಸರ್ ಪೇಷೆಂಟ್! ಅದಕ್ಕಾಗಿಯೇ ಅವ್ನು ಮನೆಯಲ್ಲೇ ಕಾಲ ಕಳೀತಿದಾನೆ ಅಂತ ಗೊತ್ತಾಗುತ್ತೆ!
ಅವಳು ಮರುದಿನ ಅವರ ಮನೆಗೆ ಬರುವಾಗ ರಾಂಡಿಪಾಶ್ ರ “ದಿ ಲಾಸ್ಟ್ ಲೆಕ್ಚರರ್” ಎಂಬ ಪುಸ್ತಕ ಮತ್ತು ಸಿಡಿ ಅನ್ನು ತಂದು ಕೊಡುತ್ತಾಳೆ! ಅವಳೇ ಸಿಡಿಯನ್ನು ಪ್ಲೇ ಕೂಡ ಮಾಡುತ್ತಾಳೆ! ರಾಂಡಿಪಾಶ್ ಅಮೇರಿಕಾದಲ್ಲಿ ಕಂಪ್ಯೂಟರ್ ಸೈನ್ಸ್ ಪ್ರೊಪೆಸರ್ ಆಗಿದ್ದವರು. ಅವರು ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಾರೆ! ಆದ್ರೆ ಅವರು ತಮ್ಮ ಕೊನೆಯ ಆಸೆಯಂತೆ ಒಂದು ಕಡೆ ಉಪನ್ಯಾಸಕ್ಕೆ ಹೋಗುತ್ತಾರೆ! ಅದನ್ನು ನೋಡಿದ ಮೇಲೆ ಸುಮಂತ್ ಸಂಪೂರ್ಣ ಬದಲಾಗುತ್ತಾನೆ! “ನಾಳೆ ಸಾಯುತ್ತೇನೆಂದು ಇಂದು ಏಕೆ ಸುಮ್ಮನಿರಲಿ” ಎಂದು ಕೆಲಸಕ್ಕೆ ಹೋಗುವ ಯೋಚನೆ ಮಾಡ್ತಾನೆ! ಪಲ್ಲವಿ ಸುಮಂತ್ ಗೆ ಒಂದು ಚಿಕ್ಕ ಕಂಪನಿಯಲ್ಲಿ ಕೆಲಸ ಮಾಡಲು ಬೇಕಾಗಿರುವ ಕಂಪ್ಯೂಟರ್ ಪಾಠವನ್ನೂ ಮಾಡುತ್ತಾಳೆ! ಆತ ಐದು ಸಾವಿರ ರೂಪಾಯಿ ಸಂಬಳಕ್ಕೆ ಕೆಲಸಕ್ಕೂ ಸೇರಿ ಕೊಂಡ!
ಅಂದು ಪಲ್ಲವಿಯಿಂದಾಗಿ ಐದು ಸಾವಿರ ರೂ. ಸಂಬಳದ ಕೆಲಸಕ್ಕೆ ಸೇರಿಕೊಂಡ ಸುಮಂತ್ ನಾಲ್ಕೈದು ಕಂಪನಿಯನ್ನು ಬದಲಾಯಿಸಿ 20 ಸಾವಿರ ಸಂಬಳದ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದ! ಈಗ ಅದಕ್ಕೂ ಹೆಚ್ಚಿನ ಸಂಬಳ ಪಡೆಯುವ ಕೆಲಸಕ್ಕೆಂದು ಹೈದರಾಬಾದ್ ಗೆ ಹೋಗಿದ್ದ! ಅವನಿಗೆ ಕ್ಯಾನ್ಸರ್ ಬಂದು 8 ವರ್ಷಗಳಾಗಿವೆ! ನಿನ್ನೆ ಮೊನ್ನೆವರೆಗೂ ಕ್ಯಾನ್ಸರ್ ರೋಗಿ ಎಂಬ ನೆನಪೇ ಅವನಿಗೆ ಇರಲಿಲ್ಲ! ಕೆಲವೊಮ್ಮೆ ಬ್ಲಡ್ ವಾಮಿಟ್ ಆಗ್ತಾ ಇದ್ರೂ! ಪಲ್ಲವಿ ಹೇಳಿಕೊಟ್ಟ ಪಾಠದಿಂದ ದೈರ್ಯದಿಂದ ಬದುಕಿದ್ದ! ಮಗ ಕಣ್ಣೆದುರೇ ಸಾಯುವುದನ್ನು ನೋಡಬೇಕಲ್ಲಾ? ಅವನ ಚಿತೆಗೆ ನಾನೇ ಬೆಂಕಿ ಇಡಬೇಕಲ್ಲಾ ಅಂತ ತುಂಬಾ ದುಃಖಪಡುತ್ತಿದ್ದ ಸುಮಂತ್ ತಾಯಿ ವರ್ಷದ ಹಿಂದಷ್ಟೇ ಹಾಟರ್ಾಟ್ಯಾಕ್ನಿಂದ ಸಾವನ್ನಪಿದರು. ಅವರ ಸಾವಿನ ನಂತರ ಸುಮಂತ್ ತುಂಬಾ ನೊಂದಿದ್ದ! ಮತ್ತೆ ಪಲ್ಲವಿಯೇ ಅವನಿಗೆ ಸಮಾಧಾನ ಮಾಡಿದ್ಲು!
ಅಷ್ಟರಲ್ಲೇ, ಅವರಿಬ್ಬರೂ ತುಂಬಾ ಅಂದ್ರೆ ತುಂಬಾ ನೇ ಕ್ಲೋಸ್ ಆಗಿಬಿಟ್ಟಿದ್ರು! ಚ್ಯಾಟಿಂಗ್, ಚ್ಯಾಟಿಂಗ್, ಚ್ಯಾಟಿಂಗ್! ಮೂರು ಹೊತ್ತು ಚ್ಯಾಟಿಂಗ್! ದಿನಕ್ಕೊಂದು ಸಲ ಫೋನಲ್ಲಿ ಮಾತಾಡ್ತಾ ಇದ್ರು! ಅದೂ ಎಷ್ಟೋತ್ತು ಅಂತಿರಾ? ಹೆಚ್ಚು ಕಡಿಮೆ ಎರಡು ಗಂಟೆ! ಇವ್ನು ಒಂದ್ ದಿನ ಫೋನ್ ಮಾಡಿದ್ರೆ ನಾಳೆ ಅವ್ಳು ಫೋನ್ ಮಾಡ್ತಾ ಇದ್ಲು! ಆಫೀಸ್ ಅಲ್ಲಿ ತಲೆಹೋಗೋ ಕೆಲಸ ಇದ್ರೂ ಚ್ಯಾಟಿಂಗ್ ಮಾಡೋದು ಬಿಡ್ತಾನೆ ಇರ್ಲಿಲ್ಲ! ಹಾಗಂತ ಕೆಲಸಾನೂ ಮಾಡ್ತಾನೇ ಇದ್ರು!
ಆದ್ರೆ…ಅವತ್ತೊಂದು ದಿನ ಇದ್ದಕ್ಕಿದ್ದ ಪಲ್ಲವಿಗೆ ಫೋನ್ ಮಾಡ್ತಾನೆ ಸುಮಂತ್, ಪಲ್ಲವಿ ಫೋನ್ ಪಿಕ್ ಮಾಡಲ್ಲ! `ಏನು ಹೇಳೋ’ ಅಂತ ಮೆಸೇಜ್ ಹಾಕ್ತಾಳೆ, ಅದಕ್ಕೆ ಅವ್ನಿಂದ ರಿಪ್ಲೇನೆ ಬರಲ್ಲ! ಮತ್ತೆ ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಕಾಲ್ ಮಾಡ್ತಾನೆ! ಆಗಲೂ ಸಹ ಪಲ್ಲವಿ ಪಿಕ್ ಮಾಡಲ್ಲ! ಏನೋ? ಈಗ ಫೋನ್ ಮಾಡ್ತಾ ಇದ್ದಿಯಲ್ಲಾ? ಯಾಕೋ? ಮೆಸೇಜ್ ಮಾಡೋ? ನಾನು ಮಾಮೂಲಿ ಟೈಮಿಗೇನೇ ಕಾಲ್ ಮಾಡ್ತೀನಿ ಕಣೋ! ಅಂಥ ಮೆಸೇಜ್ ಹಾಕ್ತಾಳೆ!  ಏಕಂದ್ರೆ ಅವತ್ತು ಫೋನ್ ಮಾಡ್ಬೇಕಾಗಿದ್ದ ಸರದಿ ಪಲ್ಲವಿದು!
ಅಂದ್ರೆ ಹಿಂದಿನ ದಿನ ಸುಮಂತ್ ಫೋನ್ ಮಾಡಿದ್ದು! ಇವತ್ತು ನನ್ನ ಸರದಿ ಅಂತ ಪಲ್ಲವಿ ಕಾಲ್ ಪಿಕ್ ಮಾಡಲ್ಲ! ಮತ್ತೆ ರಿಟನರ್್ ಫೋನ್ ಕೂಡ ಮಾಡಲ್ಲ! ಏಕಂದ್ರೆ ಡೈಲಿ ಅವರಿಬ್ಬರು ಫೋನಲ್ಲಿ ಮಾತಡೋದು ರಾತ್ರಿ 10ಗಂಟೆಗೆ! ಅಲ್ಲಿ ತನಕ ಬರೀ ಚಾಟಿಂಗ್, ಚಾಟಿಂಗ್, ಚಾಟಿಂಗ್! ಅದಕ್ಕೆ ಪಲ್ಲವಿ, ಅವ್ನ ಫೋನ್ ಅನ್ನ ರಿಸೀವ್ ಮಾಡಿರಲ್ಲ!  ಇವತ್ತು ಏನೋ ಮಿಸ್ ಆಗಿ ಫೋನ್ ಮಾಡಿದ್ದಾನೇನೋ ಅನ್ಕೊಂಡು ಪಲ್ಲವಿ ಸುಮ್ನೆ ಆಗ್ತಾಳೆ! ಅವನಿಂದ ಮೆಸೇಜ್ ಗೆ ರಿಪ್ಲೆ ಬರ್ದೇ ಇರುವಾಗ ಪಾಪ, ಆಫೀಸಲ್ಲಿ ಬ್ಯುಸಿ ಇದ್ದಾನೇನೋ ಅಂಥ ಸುಮ್ನೆ ಆಗ್ತಾಳೆ!
ರಾತ್ರಿ ಮನೆಗೆ ಬಂದವಳು ಅವನಿಗೆ ಫೋನ್ ಮಾಡ್ತಾಳೆ. ಅವನ ಫೋನ್ ರಿಂಗ್ ಆಗ್ಲೇ ಇಲ್ಲ! ಅದು ಸ್ವಿಚ್ ಆಫ್!
ವಾರ ಕಳೆದರೂ ಅವನ ಫೋನ್ ಸ್ವಿಚ್ ಆಫ್! ಊಟ, ತಿಂಡಿ ಬಿಟ್ಟು ಅವನ ನೆನಪಿನಲ್ಲೇ ಕಾಲ ಕಳೀತಾ ಇರುವಾಗ, ಅವಳಿಗೊಂದು ಕೊರಿಯರ್ ಬರುತ್ತೆ. ಅದರಲ್ಲಿ ಸುಮಂತ್ ಅವಳಿಗಾಗಿ ಬರೆದ ಪತ್ರವೊಂದಿತ್ತು! ಅವನು ಅವನ ಬ್ಯಾಂಕ್ ಅಕೌಂಟ್ ಗೆ ಇವಳನ್ನೇ ನಾಮ್ನಿ ಮಾಡಿದ್ದ! ಅಮ್ಮ ಅವನ ಹೆಸರಿಗೆ ಮಾಡಿಟ್ಟಿದ್ದನ್ನೂ, ಅವನ ಮನೆಯನ್ನೂ ಸಹ ಪಲ್ಲವಿ ಹೆಸರಿಗೆ ಮಾಡಿಟ್ಟಿದ್ದ! ಆದ್ರೆ ಅದ್ಯಾವುದನ್ನು ಅವಳಿಗೆ ಇಷ್ಟು ತನಕ ಹೇಳಿರಲಿಲ್ಲ! ಈ ಪತ್ರದಲ್ಲಿ “ಪಲ್ಲವಿ, ನೀನು ನನ್ನ ಬದುಕಿಗೆ ದಾರಿ ತೋರಿದೆ. ನಿನ್ನ ಪ್ರೀತಿಯೇ ನನ್ನ ಇಷ್ಟು ವರ್ಷ ಬದುಕಿಸಿದೆ! ನೀನಿಲ್ಲದೇ ಇದ್ದಿದ್ದರೆ, ನಾನು ನನ್ನ ಕ್ಯಾನ್ಸರ್ ಅನ್ನು ಮರೆಯಲೇ ಆಗುತ್ತಿರಲಿಲ್ಲ! ನಿನ್ನ ನಾನೂ ತುಂಬಾ ಪ್ರೀತಿಸುತ್ತೇನೆ! ಇದನ್ನು ಹೇಳಲು ನನಗೆ ಧೈರ್ಯವಿಲ್ಲ! ನೀನು ನನ್ನ ಮದುವೆ ಆಗಲು ಒಪ್ಪಿದರೂ ನಿನ್ನನ್ನು ಚಿಕ್ಕ ವಯಸ್ಸಲ್ಲಿ ವಿಧವೆ ಮಾಡಲು ಇಷ್ಟವಿಲ್ಲ. ಆದ್ರೂ ತುಂಬಾ ಪ್ರೀತಿಸ್ತೀನಿ ಕಣೇ ಅಂತ ಬರೆದಿದ್ದ!
ಅದನ್ನು ಓದುತ್ತಿರುವಾಗಲೇ ಇವಳಿಗೆ ಅವನ ಮೊಬೈಲ್ ನಿಂದ ಫೋನ್ ಬರುತ್ತೆ! ಖುಷಿಯಿಂದ ರಿಸೀವ್ ಮಾಡಿದ್ರೆ ಅದು ಅವನ ದನಿ ಆಗಿರಲಿಲ್ಲ! ಫೋನ್ ಮಾಡಿದವ ಸುಮಂತ್ ನ ಫ್ರೆಂಡ್! ಪಾರ್ಸಲ್ ತಲಿಪಿತೇ, ಅದನ್ನು ಕಳುಹಿಸಲು ಸುಮಂತ್ ಹೇಳಿದ್ದ! ಬ್ಲಡ್ ವಾಮಿಟ್ ಜಾಸ್ತಿ ಆಗಿ  ಸಾಯ್ತೀನಿ ಅಂತ ಗೊತ್ತಾದ ಮೇಲೆ ಅವನು ಫೋನ್ ಮಾಡಿದ್ರೂ ನೀವು ರಿಸೀವ್ ಮಾಡಿಲ್ಲ! ಆಮೇಲೆ ನೀವು ಕೊಟ್ಟ ಬಟ್ಟೆ ಹಾಕಿಕೊಂಡು ನಿಮ್ಮ ಫೋಟೋ ನೋಡ್ತಾನೆ ಪ್ರಾಣ ಬಿಟ್ಟ! ಅಂತ ಹೇಳ್ತಾನೆ!
ಪಲ್ಲವಿಗೆ ದುಃಖ ತಾಳಲಾಗಲಿಲ್ಲ. ಸುಮಂತ್ ಪತ್ರವನ್ನು ಇಟ್ಟುಕೊಂಡು, “ಹೇ, ಸುಮ್ಮಿ, ನಾನು ನಿನ್ನ ತುಂಬಾ ಪ್ರೀತಿಸುತ್ತೇನೆ ಕಣೋ, ನಿನ್ನ ಹೆಂಡತಿಯಾಗಿ ಇರುವಷ್ಟು ದಿನ ನಿನ್ನ ಜೊತೆಗಿರಬೇಕೆಂದಿದ್ದೆ! ಇದನ್ನು ನಿನ್ನ ಬಳಿ ಹೇಳಿದರೆ ನಿನ್ನ ಸ್ನೇಹವೂ ಬೇಡ ಅಂಥ ಎಲ್ಲಿ ನನ್ನ ಬಿಟ್ಟು ಬಿಡ್ತಿಯೋ ಅನ್ನೋ ಭಯದಿಂದ ಏನೂ ಹೇಳಿರಲಿಲ್ಲ! ಏಳು ವರ್ಷದ ಮೊದಲೇ ನೀನೇ ನನಗೆ ಈ ಪತ್ರ ಕೊಟ್ಟಿದ್ರೆ ಏನೋ ಆಗ್ತಾ ಇತ್ತು! ಇಷ್ಟು ಹೊತ್ತಿಗೆ ಕನಿಷ್ಟ ಆರರಿಂದ, ಏಳು ವರ್ಷವಾದರೂ ನಿನ್ನ ಹೆಂಡತಿಯಾಗಿ ಇರ್ತಿದ್ದೆನಲ್ಲೋ ಎಂದು ಬಿಕ್ಕಿಕ್ಕಿ ಅತ್ತಳು! ಇವತ್ತಿಗೂ ಅವಳಿಗೆ ಅವನ ನೆನಪಿನಿಂದ ಹೊರ ಬರಲು ಸಾಧ್ಯವೇ ಆಗುತ್ತಿಲ್ಲ!
ಫ್ರೆಂಡ್ಸ್, ನೀವೂ ಅಷ್ಟೆ ಯಾರನ್ನಾದ್ರೂ ಪ್ರೀತಿಸುತ್ತಿದ್ರೆ, ತಡಮಾಡದೆ ಈಗಲೇ ನಿಮ್ಮ ಪ್ರೀತಿಯನ್ನು ಹೇಳಿ ಬಿಡಿ, ಅವರೂ ಒಪ್ಪುತ್ತಾರೆ! ಒಪ್ಪದೇ ಇದ್ದರೂ ಪರವಾಗಿಲ್ಲ, ಅವರಿಗೆ ಮುಂದೊಂದು ದಿನ ನಿಮ್ಮ ಪ್ರೀತಿ ಅರ್ಥವಾಗುತ್ತೆ! ಸುಮಂತ್ ಗೆ ಕ್ಯಾನ್ಸರ್ ಬಂದಿತ್ತು, ಆದ್ರೂ ಏನೇನೂ ಟ್ರೀಟ್ಮೆಂಟ್ ಇಲ್ಲದೆ ಪಲ್ಲವಿ ಪ್ರೀತಿಯಿಂದಲೇ ಬದುಕಿದ್ದ! ಅವರಿಬ್ಬರೂ ಪ್ರೀತಿಯನ್ನು ಪರಸ್ಪರ ಹೇಳಿಕೊಳ್ಳಲಿಲ್ಲ..ಕೊನೆಗೆ ಏನಾಯ್ತು ಹೇಳಿ..! ನಮ್ಮ ಜೀವದ ಬಗ್ಗೆ ಯಾವ ಗ್ಯಾರಂಟೀನೂ ಇಲ್ಲ..! ನಾವು ಇವತ್ತಿದ್ದೇವೆ, ನಾಳೆ ಇರ್ತೀವಿ ಅಂಥ ಗ್ಯಾರೆಂಟಿ ಇದ್ಯಾ? ಸೋ, ಇನ್ನೂ ಲೇಟ್ ಮಾಡ್ಲೇ ಬೇಡಿ, ನೀವು ಪ್ರೀತಿಸುವವರಿಗೆ ಹೇಳಿ ಬಿಡಿ ಐ ಲವ್ ಯೂ….!
– ಶಶಿಧರ ಡಿ ಎಸ್ ದೋಣಿಹಕ್ಲು

LEAVE A REPLY

Please enter your comment!
Please enter your name here