ಚಾಳಿ ಬಿಡದ ಪಾಕ್: ಮತ್ತೆ ಕದನ ವಿರಾಮ ಉಲ್ಲಂಘನೆ..!

Date:

ಅದೇನೋ ಅಂತಾರಲ್ಲ ಹುಟ್ಟು ಗುಣ ಸುಟ್ಟರೂ ಹೋಗಲ್ಲ ಅಂತ.. ಅದು ಪಾಕ್‍ಗೆ ಅನ್ವಯಿಸುತ್ತೆ ಅನ್ಸತ್ತೆ ನೋಡಿ.. ಉರಿ ದಾಳಿ ನಮ್ಮ ಸೈನಿಕರು ಪ್ರತಿಕಾರ ತಿರಿಸಿಕೊಂಡು 35ಕ್ಕೂ ಹೆಚ್ಚು ಉಗ್ರರನ್ನು ಸಂಹಾರ ಮಾಡಿ ತಮ್ಮ ಪ್ರಾಬಲ್ಯ ಎನೆಂಬುದು ತೋರಿಸಿಕೊಟ್ಟ ಬೆನ್ನಲ್ಲೇ ಪಾಕ್ ಮತ್ತೆ ತನ್ನ ಹಳೇ ಮುಖ ತೋರಿಸಿದೆ. ನಮ್ಮವರು ಮುಟ್ಟಿ ನೋಡುಕೊಳ್ಳುವಷ್ಟು ಪೆಟ್ಟು ನೀಡಿದ್ದರೂ ಕೂಡ ಪಾಕ್ ಮತ್ತೆ ಕದನ ವಿರಾಮ ಉಲ್ಲಂಘಿಸಿ ಭಾರತೀಯರನ್ನು ಕೆರಳುವಂತೆ ಮಾಡಿದ್ದಾರೆ. ಕಣಿವೆ ರಾಜ್ಯ ಕಾಶ್ಮೀರದ ಅಕ್ನೂರ್ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆ ಬಳಿ ಪಾಕಿ ಸೈನಿಕರು ಗುಂಡಿನ ದಾಳಿ ನಡೆಸಿ ಮತ್ತೆ ಮತ್ತೆ ಕಾಲು ಕೆರೆದು ಬರುತ್ತಿದೆ. ಇನ್ನು ಪಾಕ್ ಕಳೆದ ಒಂದೂವರೆ ದಿನದ ಒಳಗಾಗಿ ಐದನೇ ಬಾರಿ ಯುದ್ದ ವಿರಾಮ ಇದಾಗಿದೆ. ಅಲ್ಲದೇ ಇದೇ ತಿಂಗಳ ಅಂತ್ಯದ ವೇಳೆಗೆ ಪಾಕ್‍ನಿಂದಾದ ಆರನೇ ಕದನ ವಿರಾಮವಾಗಿದೆ.
ಕಳೆದ ರಾತ್ರಿಯಿಂದ ಇಂದು ಮುಂಜಾನೆಯವರೆಗೂ ಜಮ್ಮುವಿನ ಪಲ್ಲಾನ್‍ವಲಾ, ಚಾಪ್ರಿಯಲ್ ಮತ್ತು ಸಮ್‍ನಾಮ್ ಪ್ರದೇಶಗಳಲ್ಲಿ ಪಾಕ್ ಸೈನಿಕರು ಸಣ್ಣ ಪ್ರಮಾಣದ ಶಸ್ತ್ರಾಸ್ತ್ರ ಪ್ರಯೋಗ ಮಾಡಿದ್ದಾರೆ ಎಂದು ಜಮ್ಮು ಡೆಪ್ಯೂಟಿ ಕಮಿಷನರ್ ಸಿಮ್ರನ್‍ದೀಪ್ ಸಿಂಗ್ ಹೇಳಿದ್ದಾರೆ.
ಭಾರತೀಯ ಯೋಧನ ಸೆರೆ ಸುಳ್ಳು..
ಇನ್ನು ಭಾರತೀಯ ಸೈನಿಕನೊಬ್ಬನನ್ನು ಪಾಕ್ ಸೇನೆ ಬಂಧಿಸಿಟ್ಟಿದ್ದಾರೆ ಎಂದು ಹೇಳಿಕೊಳ್ಳುತ್ತರುವ ಪಾಕ್‍ಗೆ ತಿರುಗೇಟು ನೀಡಿರುವ ಭಾರತ ಕಳೆದ ಎರಡು ದಿನಗಳಿಂದ ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಯಾವೊಬ್ಬ ಭಾರತೀಯನೂ ಸಾವನ್ನಪ್ಪಿಲ್ಲ ಹಾಗೂ ಸೆರೆ ಸಿಕ್ಕಿಲ್ಲ. ಪಾಕ್ ಸೈನಿಕರು ಎಂಟು ಭಾರತೀಯ ಸೈನಿಕರನ್ನು ಸದೆ ಬಡಿದಿದ್ದಾರೆ ಹಾಗೂ ಒಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂಬುದು ಸುಳ್ಳು ಎಂದು ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಸ್ಪಷ್ಟ ಪಡಿಸಿದ್ದಾರೆ. ಅಲ್ಲದೇ ಕಳೆದ ಬಾರಿ ಗಡಿ ಉಲ್ಲಂಘನೆ ಮಾಡಲಾಗಿದೆ ಎಂದು ಪಾಕ್ ಸೈನಿಕರು ನಮ್ಮ ದೇಶದ ಸೈನಿಕನಾದ ಚಂದೂ ಬಾಬುಲಾಲ್ ಎಂಬಾತನನ್ನು ಬಂಧಿಸಿದ್ದಾರೆಯೇ ವಿನಃ ನಿನ್ನೆ ನಡೆದ ಕಾರ್ಯಚರಣೆಯಲ್ಲಿ ಅಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಇನ್ನು ಪಾಕ್ ವಶದಲ್ಲಿರು ಭಾರತೀಯ ಯೋಧನ ಬಿಡುಗಡೆಗೊಳಿಸುವ ಕುರಿತಾಗಿ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎಂದೂ ಸಹ ಅವರು ಹೇಳಿದ್ದಾರೆ.

Like us on Facebook  The New India Times

POPULAR  STORIES :

ವಿದ್ಯಾರ್ಥಿಯ ಮೇಲೆ ಲೇಡಿ ಕಂಡಕ್ಟರ್‍ನ ಗೂಂಡಾಗಿರಿ..! Lady Conductor Fight

ಕೇಳ್ಬೇಡ ಕಣೇ ಸುಮ್ಕಿರೆ…! Cauvery Issue Comedy Song

ಎಚ್ಚರಿಕೆ.. ದೇಶದ ಪ್ರಮುಖ ನಗರಗಳಲ್ಲಿ ಪಾಕ್ ಉಗ್ರರು ದಾಳಿ ನಡೆಸುವ ಸಾಧ್ಯತೆ..!

ಅರ್ಜುನ್ ತೆಂಡೂಲ್ಕರ್ ರಮೇಶನಾದ್ರೆ..!! ಸುರೇಶ್ ಯಾರು ಗೊತ್ತಾ..?

ಬಿಗ್ ಬಾಸ್ ಮನೆಯ ರಹಸ್ಯ ಲೀಕ್..!

ಜಿಯೋ ಕಾಲ್‍ಡ್ರಾಪ್ ಸಮಸ್ಯೆ: ಏರ್‍ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?

Share post:

Subscribe

spot_imgspot_img

Popular

More like this
Related

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ ಬೆಳಗಾವಿ ಜಿಲ್ಲೆಯ ಖಾನಾಪುರ...

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ ಮೈಸೂರು: ಬಿಹಾರ...

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..?

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..? ಬೆಂಗಳೂರು:...

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ ಬೇಕು

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ...