ಪುಲ್ವಾಮಾದಲ್ಲಿ ನಡೆದ ದಾಳಿ ಜನರ ಮನಸ್ಸಿನಲ್ಲಿ ಪಾಕಿಸ್ತಾನದ ವಿರುದ್ಧ ಕಿಚ್ಚು ದಿನೇ ದಿನೇ ಹೆಚ್ಚುತ್ತಿದೆ. ಇಡೀ ದೇಶದ ಜನರೇ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಕಿಚ್ಚು ಹೆಚ್ಚಿಸುವಂತೆ ಯೋಧರೊಬ್ಬರ ವೀಡಿಯೋ ವೈರಲ್ ಆಗಿದೆ.ಪ್ರಧಾನಿ ಮೋದಿ ಅನುಮತಿ ನೀಡಿದರೆ ಸಾಕು, ನಾವು ನಾಲ್ಕು ಮಂದಿ ಸ್ನೇಹಿತರಿದ್ದೇವೆ, ಉಳಿದವರು ವೀಡಿಯೋದಲ್ಲಿ ಬರಲು ಇಷ್ಟಪಡುತ್ತಿಲ್ಲ. ನಾವು ನಾಲ್ಕು ಯೋಧರು ಯಾವುದೋ ಒಂದು ಮಾರ್ಗದಿಂದ ಪಾಕಿಸ್ತಾನದೊಳಗೆ ನುಗ್ಗುತ್ತೇವೆ.
ನಮ್ಮ 40 ಹುತಾತ್ಮ ಯೋಧರಿಗೆ ಪ್ರತೀಕಾರವಾಗಿ ಪಾಕಿಸ್ತಾನದ 400 ತಲೆಗಾಳನ್ನಾದರೂ ತರುತ್ತೇವೆ. ಪಾಕಿಸ್ತಾನಕ್ಕೆ ನುಗ್ಗಲು ಅನುಮತಿ ನೀಡಿ ಎಂದು ತರುಣ ಯೋಧ ಘರ್ಜಿಸಿರುವ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.