No menu items!
11.1 C
Munich
Wednesday, April 29, 2026

ಅಮ್ಮ ಹಾಡಿಗೆ ಮತ್ತೆ ಧನಿಯಾದ ಪ್ರೇಮ್…

Must read

ಅಮ್ಮಮಗನ ಬಾಂಧವ್ಯವನ್ನು ತೆರೆಮೇಲೆ ಅದ್ಭುತವಾಗಿ  ಬಣ್ಣಿಸುವಲ್ಲಿ ಜೋಗಿ ಪ್ರೇಮ್ ಕೂಡ ಒಬ್ಬರು. ಹೌದು, ಜೋಗಿ ಚಿತ್ರದ ಬೇಡುವೇನು ವರವನ್ನು ಹಾಡು ಕೇಳಿದ ಕೂಡಲೇ ನಿಮಗೆ ಗೊತ್ತಿಲ್ಲದ ರೀತಿ ಕಣಂಚಿನಲ್ಲಿ ನೀರು ಬರುವುದು ಖಂಡಿತ. ಇದೀಗ ಇದೇ‌ ಮೋಡಿ ಮಾಡಲು ಹೊರಟ್ಟಿದ್ದಾರೆ ಜೋಗಿ ಪ್ರೇಮ್..

ಪ್ರೇಮ್ ಕಂಠದಲ್ಲಿ ಬರ್ತಿದೆ ಮತ್ತೊಂದು ಹಾಡು. ಚಿರಂಜೀವಿ ಸರ್ಜಾ ಅಭಿನಯದ ಸಿಂಗ ಚಿತ್ರದಲ್ಲಿ ಪ್ರೇಮ್ ಸೆಂಟಿಮೆಂಟ್ ಸಾಂಗ್ ಹಾಡುತ್ತಿದ್ದಾರೆ. ತಾಯಿ ಎಂಬ ವಿಷಯ ಬಂದಾಗ ತಲೆಗೆ ಬಂದದ್ದು ನಿರ್ದೇಶಕ ಪ್ರೇಮ್. ಯಾಕೆಂದರೆ ಮಗತಾಯಿಯ ಬಾಂಧವ್ಯದ ಬಗ್ಗೆ ಪ್ರೇಮ್ ಚೆನ್ನಾಗಿ ತಿಳಿದುಕೊಂಡಿದ್ದಾರೆ ಎಂದ ಸಿಂಗ ಸಿನಿಮಾ ನಿರ್ದಶಕ ವಿಜಯ್ ಕಿರಣ್.

ಹೀಗಾಗಿ ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಸಾಹಿತ್ಯಕ್ಕೆ  ಪ್ರೇಮ್ ಧನಿಗೂಡಿಸಿದ್ದಾರೆ, ಧರ್ಮ ಇದಕ್ಕೆ ಸಂಗೀತ ನೀಡಿದ್ದಾರೆ. ಉದಯ್ ಕೆ.ಮೆಹ್ತಾ ನಿರ್ಮಾಣದ ಈ ಸಿನಿಮಾದಲ್ಲಿ ವಿಜಯ್ ಕಿರಣ್ ಮತ್ತು ಚಿರಂಜೀವಿ ಸರ್ಜಾ ಮತ್ತೆ ಒಂದಾಗಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article