No menu items!
8.1 C
Munich
Tuesday, April 14, 2026

ಪ್ರತಿನಿತ್ಯದ ಊಟಕ್ಕೂ ಪಾಲಕರಿಂದ ಹಣ ಪಡೀತಾ ಇದ್ದಾರೆ ಅಂಡರ್-19 ಆಟಗಾರರು..!

Must read

ಟೀಂ ಇಂಡಿಯಾದ ದಿ ವಾಲ್ ರಾಹುಲ್ ದ್ರಾವಿಡ್ ಅವರ ಭಾರತ ಅಂಡರ್-19 ತಂಡದ ಆಟಗಾರರು ಈಗ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ದ್ರಾವಿಡ್ ಸೇರಿದಂತೆ ತಂಡದ ಎಲ್ಲಾ ಆಟಗಾರರು ಬಿಸಿಸಿಐ ದಿನಭತ್ಯೆ ನೀಡದೆ ಇರೋದ್ರಿಂದ ಹಣಕಾಸಿನ ಒತ್ತಡದಲ್ಲಿದ್ದಾರೆ. ಲೋಧಾ ಶಿಫಾರಸ್ಸನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ಬಿಸಿಸಿಐಗೆ ಸುಪ್ರೀಂ ಕೋರ್ಟ್ ಭಾರಿ ಶಾಕ್ ನೀಡಿತ್ತು. ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಪ್ರಧಾನ ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ವಜಾಗೊಳಿಸಿ ಬಿಸಿ ಮುಟ್ಟಿಸಿದರು. ಇದರ ಪರಿಣಾಮವಾಗಿ ಈಗ ಭಾರತ ಅಂಡರ್-19 ತಂಡ ಹಣಕಾಸಿನ ತೊಂದರೆಯಿಂದ ಬಳಲುತ್ತಿದೆ. ಬಿಸಿಸಿಐನಿಂದ ಹಣ ಬಿಡುಗಡೆಯಾಗ್ಬೇಕು ಅಂದ್ರೆ ಅದಕ್ಕೆ ಕಾರ್ಯದರ್ಶಿಯ ಸಹಿ ಬೇಕು ಆದ್ರೆ ಕಾರ್ಯದರ್ಶಿಯನ್ನು ಅಧಿಕಾರದಿಂದ ಕಿತ್ತುಹಾಕಿರುವ ಕಾರಣ ತಂಡದ ಎಲ್ಲಾ ಸದಸ್ಯರು ರಾತ್ರಿ ಊಟಕ್ಕೆ ಪೋಷಕರೊಂದಿಗೆ ಹಣ ಪಡೆಯುವಂತಹ ಸ್ಥಿತಿ ಬಂದಿದೆ. ಪ್ರವಾಸಿ ಇಂಗ್ಲೆಂಡ್ ವಿರುದ್ದ ಸರಣಿ ಆರಂಭಿಸಿ ಒಟ್ಟು 15 ದಿನಗಳೆ ಕಳೆದು ಹೋಗಿದ್ರೂ ಇಲ್ಲಿಯವರೆಗೂ ಬಿಸಿಸಿಐ ಆರ್ಥಿಕ ಸಹಾಯ ನೀಡಿಲ್ಲ ಎಂದು ತಿಳಿದು ಬರ್ತಾ ಇದೆ. ಈ ಹಿಂದೆ ಬಿಸಿಸಿಐ ಪ್ರತಿ ಆಟಗಾರರಿಗೆ ದಿನಕ್ಕೆ 6800ರೂ. ಭತ್ಯೆ ನೀಡ್ತಾ ಬಂದಿತ್ತು.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಶಾಹಿದ್‍ರನ್ನು ಕೊಲ್ಲಲು ಬಯಸಿದ್ರು ಸಾನಿಯಾ ಯಾಕೆ ಗೊತ್ತಾ..?

ಪ್ರಥಮ್- ರಿಷಿಕಾ ಲಾಂಗ್ ಡ್ರೈವ್ ವೇಳೆ ಸ್ಮಾಲ್ ಆಕ್ಸಿಡೆಂಟ್..! ಮುಂದೇನಾಯ್ತು..?

ಆಡಿದ್ದು 72 ಬಾಲ್ ಗಳಿಸಿದ್ದು 300 ರನ್..! ಲಾರಿ ಚಾಲಕನ ಮಗನ ಬ್ಯಾಟಿಂಗ್ ಕಮಾಲ್..

ಈ ನಟನ ಪ್ರತಿ ತಿಂಗಳ ಖರ್ಚು 13.5 ಕೋಟಿ ಅಂತೆ

ನನ್ನನ್ನು ಸಿಎಂ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿದ್ರು: ಪನ್ನೀರ್ ಸೆಲ್ವಂನ ಹೊಸ ಬಾಂಬ್..!

ಸತ್ರೂ ಲವ್ ಮ್ಯಾರೇಜ್ ಆಗಲ್ವಂತೆ ಈ ನಟಿ.

ಹಳ್ಳಿಡಾಕ್ಟ್ರು – ಇವರಿಂದಲೇ ಹಳ್ಳಿಯ ಸೊಗಡು ಇನ್ನು ಉಳಿದಿರೋದು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article