ಒಂಭತ್ತನೇ ವಯಸ್ಸಿನಲ್ಲಿ ಅವಳ ಮೇಲೆ ಅತ್ಯಾಚಾರವಾಗಿತ್ತು..! ಇವತ್ತವರು ಸಾವಿರಾರು ಕೋಟಿಯ ಒಡತಿ..!

Date:

ಇವತ್ತು ಅವಳ ಆಸ್ತಿ ಹತ್ತಿರತ್ತಿರ ಮೂರು ಬಿಲಿಯನ್ ಡಾಲರ್..! ಅಂದ್ರೆ 2046 ಕೋಟಿ ರೂಪಾಯಿಯಷ್ಟು..! ಆದ್ರೆ ಇದೇ ಮಹಿಳೆಯ ಮೇಲೆ ಅವರ ಒಂಭತ್ತನೇ ವಯಸ್ಸಿನಲ್ಲಿ ಅತ್ಯಾಚಾರವಾಗಿತ್ತು..! ಹದಿನಾಲ್ಕು ವರ್ಷ ವಯಸ್ಸಿನಲ್ಲಿ ಅವಳು ಗರ್ಭಿಣಿಯಾಗಿದ್ಲು..! ಕಿತ್ತು ತಿನ್ನೋ ಬಡತನವನ್ನು ಮೀರಿ ಬೆಳೆದ ಅವರು ಇವತ್ತು ವಿಶ್ವದ ನಂಬರ್ ವನ್ ಟಿವಿ ನಿರೂಪಕಿ ಅಂದ್ರೆ ನಿಮಗೆ ಆಶ್ಚರ್ಯವಾಗಬಹುದು.
ಇದೆಲ್ಲವೂ ನಿಜ, ಅವರ ಹೆಸರು ಓಪ್ರಾ ವಿನ್ಫ್ರೆ. ದಿ ಓಪ್ರಾ ವಿನ್ಫ್ರೆ ಶೋ’ ಎಂಬ ಟಿವಿ ಕಾರ್ಯಕ್ರಮದ ಮೂಲಕ ಜಗತ್ತಿನ ನಂಬರ್ ವನ್ ನಿರೂಪಕಿಯಾದ ಈಕೆ ಇಂದು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿರೋ ಏಕೈಕ ಬ್ಲ್ಯಾಕ್ ಅಮೆರಿಕನ್..! ಇಡೀ ವಿಶ್ವ ಇವಳನ್ನು ಕರೆಯೋದು `ಜಗತ್ತಿನ ಮಹಾನ್ ಪರೋಪಕಾರಿ’ ಅಂತಲೇ..! ಅಮೆರಿಕದ ಅತ್ಯಂತ ಉನ್ನತ ಬಿರುದಾದ `ಪ್ರೆಸಿಡೆಂಟ್ ಮೆಡಲ್ ಅಫ್ ಫ್ರೀಡಂ’ ಸಹ ಇವರಿಗೆ ಸಿಕ್ಕಿದೆ..! ಆದ್ರೆ ಇದೆಲ್ಲದರ ಹಿಂದೆ ಇದ್ದಿದ್ದು ಕಿತ್ತು ತಿನ್ನೋ ಬಡತನ, ನಿಜವಾದ ತಂದೆ ಯಾರು ಅಂತಲೇ ತಿಳಿಯದ ಯಾತನೆ, ತನ್ನ ಕುಟುಂಬ ಸದಸ್ಯರಿಂದಲೇ ಲೈಂಗಿಕ ಕಿರುಕುಳಕ್ಕೊಳಗಾದ ಕೆಟ್ಟ ಅನುಭವಗಳು..! ಅವೆಲ್ಲವನ್ನೂ ಮೀರಿ, ಅದೆಲ್ಲವನ್ನೂ ದಿಟ್ಟತನದಿಂದ ಎದುರಿಸಿ, ಇಡೀ ವಿಶ್ವವೇ ಅಹುದಹುದೆನುವಂತೆ ಬೆಳೆದಾಕೆಯೇ ಈ ಓಪ್ರಾ ವಿನ್ಫ್ರೆ..!
ಓಪ್ರಾ ಹುಟ್ಟಿದ್ದು ಅಮೆರಿಕದ ಮಿಸ್ಸಿಸಿಪ್ಪಿಯಲ್ಲಿ. ಆಗ ಒಪ್ರಾ ತಾಯಿಗೆ ಇನ್ನೂ ಹದಿಹರೆಯ. ಮನೆಕೆಲಸದವಳಾಗಿ ಕೆಲಸ ಮಾಡುತ್ತಿದ್ದ ಓಪ್ರಾ ತಾಯಿ ಓಪ್ರಾಳನ್ನ ಹೆತ್ತಾಗ ಅವರ ತಂದೆ ಅನಿಸಿಕೊಡವನಿಂದ ದೂರವಾಗಿದ್ರು..! ನನ್ನಿಂದ ಇವಳನ್ನು ನೋಡಿಕೊಳ್ಳೋಕೆ ಸಾಧ್ಯವಿಲ್ಲ ಅಂತ ಹೇಳಿ ಅಜ್ಜಿಯ ಮನೆಯಲ್ಲಿ ಒಪ್ರಾಳನ್ನು ಬಿಟ್ಟುಬಿಟ್ರು. ಅಜ್ಜಿ ಆರು ವರ್ಷದವರೆಗೆ ಒಪ್ರಾಳನ್ನು ಚೆನ್ನಾಗಿಯೇ ನೋಡಿಕೊಂಡರಾದ್ರೂ ಆಗಾಗ ಸಣ್ಣಸಣ್ಣ ತಪ್ಪಿಗೂ ಅಜ್ಜಿಯಿಂದ ರಕ್ತ ಕಿತ್ತು ಬರೋ ಹಾಗೆ ಬೆತ್ತದ ಏಟು ತಿಂತಿದ್ರು. ಹಾಕಲು ಬಟ್ಟೆ ಇಲ್ಲದೇ ಆಲೂಗಡ್ಡೆ ಚೀಲದಲ್ಲಿ ಬಟ್ಟೆ ಹೊಲಿಸಿಕೊಂಡು ಹಾಕಿಕೊಳ್ತಿದ್ರು. ಓಪ್ರಾಳನ್ನು ನೋಡಿ ಪುಟ್ಟ ಮಕ್ಕಳೆಲ್ಲಾ ಹೀಯಾಳಿಸಿ ನಗೋರು. ಅವಮಾನ ತಾಳಲಾರದೇ ಬಿಕ್ಕಿಬಿಕ್ಕಿ ಅಳ್ತಿದ್ರಂತೆ ಓಪ್ರಾ..! ಇಷ್ಟೆಲ್ಲಾ ಆದ್ರೂ ಅಜ್ಜಿ ಮಾಡಿದ ಒಳ್ಳೆಯ ಕೆಲಸ ಅಂದ್ರೆ ಒಪ್ರಾಳಿಗೆ ಓದು ಬರಹ ಕಲಿಸಿದ್ದು. ಮೂರನೇ ವಯಸ್ಸಿನಲ್ಲೇ ಓಪ್ರಾ ಓದು ಬರಹ ಕಲಿಯೋದರ ಜೊತೆಗೆ ಪಟಪಟ ಅಂತ ಬೈಬಲ್ ಪಟಿಸ್ತಾ ಇದ್ರು..! ಆರನೇ ವಯಸ್ಸಿನಲ್ಲಿ ಮತ್ತೆ ಅಮ್ಮನ ಬಳಿ ಓಪ್ರಾ ವಾಪಸ್ ಬಂದ್ರು. ಆದ್ರೆ ಅಜ್ಜಿಗೆ ಇದ್ದ ಕಾಳಜಿ ಅಮ್ಮನಲ್ಲಿ ಕಾಣಲಿಲ್ಲ. ಅದೇ ಸಮಯಕ್ಕೆ ಅವರಮ್ಮ ಮತ್ತೊಂದು ಮಗುವಿಗೆ ಜನ್ಮ ಕೊಟ್ರು, ಇಬ್ಬರನ್ನೂ ಸಾಕೋಕಾಗಲ್ಲ ಅಂತ ಓಪ್ರಾ ಹುಟ್ಟಿಗೆ ಕಾರಣವಾಗಿದ್ದವರ ಬಳಿ ಒಪ್ರಾಳನ್ನು ಸ್ವಲ್ಪ ಸಮಯದವರೆಗೆ ನೋಡಿಕೊಳ್ಳಿ ಅಂತ ಬಿಟ್ಟು ಬಂದ್ರು..! ಅಲ್ಲಿಯೂ ಓಪ್ರಾಗೆ ಬದುಕು ಸರಿ ಹೊಂದಲಿಲ್ಲ. ಮತ್ತೆ ಅಮ್ಮನ ಬಳಿ ವಾಪಸ್ ಬರುವಾಗ ಆ ತಾಯಿ ಮತ್ತೊಂದು ಮಗುವಿಗೆ ಜನ್ಮ ನೀಡಿದ್ರು.! ಅಲ್ಲಿಂದ ಓಪ್ರಾ ಬದುಕು ಕೆಟ್ಟ ತಿರುವು ಪಡೀತು. ಅಮ್ಮನ ಸಂಬಂಧಿಕರು, ಕುಟುಂಬದವರೇ ಓಪ್ರಾಗೆ ಲೈಂಗಿಕ ಕಿರುಕುಳ ನೀಡೋಕೆ ಶುರು ಮಾಡಿದ್ರು. ಒಂಬತ್ತನೇ ವಯಸ್ಸಿನಲ್ಲಿದ್ದಾಗ ಓಪ್ರಾ ಅತ್ಯಾಚಾರಕ್ಕೊಳಗಾದ್ರು..! ಅದಾದ ನಂತರವೂ ತನ್ನ ಹದಿಮೂರನೇ ವಯಸ್ಸಿನವರೆಗೂ ಮತ್ತೆ ಮತ್ತೆ ಲೈಂಗಿಕ ಕಿರುಕುಳಕ್ಕೊಳಗಾಗಿ ಇನ್ನು ಜೀವನವೇ ಬೇಡ ಅನ್ನೋ ಹಂತ ತಲುಪಿದಾಗ ಮನೆ ಬಿಟ್ಟು ಓಡಿ ಹೋಗಿದ್ರು ಓಪ್ರಾ..! ಪದೇಪದೇ ಲೈಂಗಿಕ ಕಿರುಕುಳ, ಅತ್ಯಾಚಾರದ ಪರಿಣಾಮದಿಂದಾಗಿ ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರಾದ್ರೂ ಆ ಮಗು ಬದುಕುಳಿಯಲಿಲ್ಲ..! ಈ ಘಟನೆಯ ನಂತರ ಎಲ್ಲೆಲ್ಲೋ ದುಡಿದು, ಕಷ್ಟಪಟ್ಟು ಶಾಲೆಗೆ ಹೋಗೋಕೆ ಶುರು ಮಾಡಿದ್ರು. ಸ್ಕಾಲರ್ ಶಿಪ್ ಪಡೆದು ಚೆನ್ನಾಗಿ ಓದಬೇಕು ಅಂತ ನಿರ್ಧಾರ ಮಾಡಿದ್ರು. ಮತ್ತೆ ಅಮ್ಮನ ಬಳಿ ವಾಪಸ್ ಹೋಗಿ, ಅಮ್ಮನ ದುಡ್ಡು ಕದ್ದು ಅದರಲ್ಲಿ ತನ್ನ ಖರ್ಚು ನಿಭಾಯಿಸ್ತಿದ್ಲು. ಇದು ಗೊತ್ತಾಗಿ ಅಮ್ಮ ಮಗಳಿಗೆ ದೊಡ್ಡ ಜಗಳವೇ ನಡೀತಿತ್ತು..! ಇದು ಹೀಗೇ ಮುಂದುವರೆದಿದ್ದರ ಪರಿಣಾಮ ಒಪ್ರಾಳನ್ನು ಮತ್ತೆ ತನ್ನ ತಂದೆಯ ಬಳಿ ಬಿಟ್ಟು ಬಂದ್ರು ಅವರಮ್ಮ.! ಆದ್ರೆ ಈ ಸಲ ಓಪ್ರಾ ತಂದೆ ಬದಲಾಗಿದ್ದರು. ಮಗಳ ಓದಿನ ಆಸಕ್ತಿ ಬಗ್ಗೆ ಗೊತ್ತಿದ್ದರಿಂದ ಅವಳನ್ನು ಒಳ್ಳೆಯ ಶಾಲೆಗೆ ಸೇರಿಸಿ ಸಂಪೂರ್ಣವಾಗಿ ಓಪ್ರಾ ವಿದ್ಯಾಭ್ಯಾಸದ ಕಡೆ ಗಮನ ಕೊಡೋ ಹಾಗೆ ಮಾಡಿದ್ರು..! ಆದ್ರೂ ತನ್ನ ೧೭ನೇ ವಯಸ್ಸಿನಲ್ಲಿ ಕಿರಾಣಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು ತನ್ನ ಖರ್ಚು ತಾನು ನೋಡಿಕೊಳ್ತಿದ್ರು..!ಅದೇ ವರ್ಷ `ಮಿಸ್ ಬ್ಲ್ಯಾಕ್ ಬ್ಯೂಟಿ ಪೇಜೆಂಟ್’ ಗೆದ್ದರು..! ಇದರಿಂದಾಗಿ ಕಪ್ಪು ವರ್ಣೀಯರ ರೇಡಿಯೋವೊಂದರಲ್ಲಿ ಓಪ್ರಾಗೆ ಅವಕಾಶ ಸಿಕ್ತು. ಬಿಡುವಿನ ವೇಳೆಯಲ್ಲಿ ಹೋಗಿ ಆ ರೇಡಿಯೋದಲ್ಲಿ ಕೆಲಸ ಮಾಡಲು ಆರಂಭಿಸಿದ ಓಪ್ರಾಗೆ ಸ್ಥಳೀಯ ವಾಹಿನಿಗಳಿಂದ ಕೆಲಸಕ್ಕೆ ಆಫರ್ ಗಳು ಬರಲು ಶುರುವಾಯ್ತು. ಪರಿಣಾಮವಾಗಿ, ಮೊದಲ `ಬ್ಲ್ಯಾಕ್ ನ್ಯೂಸ್ ಆಂಕರ್’ ಆಗಿ ನ್ಯಾಶ್ ವಿಲ್ಲೆಯವರ ಡಬ್ಯೂಎಲ್ಲೆಸ್ ವಾಹಿನಿಯಲ್ಲಿ ಕಾಣಿಸಿಕೊಂಡ್ರು. ಅಷ್ಟೇ, ಅಲ್ಲಿಂದ ಓಪ್ರಾ ತಿರುಗಿ ನೋಡಲೇ ಇಲ್ಲ..! 1976ರಿಂದ 1986 ರವರೆಗೆ, ಅಲ್ಲಿ ಇಲ್ಲಿ, ಇಲ್ಲಿ ಅಲ್ಲಿ ಅಂತ ಐದಾರು ಟಿವಿಗಳಲ್ಲಿ ನಿರೂಪಕಿಯಾಗಿ, ಸಹ ನಿರೂಪಕಿಯಾಗಿ ಮನೆ ಮಾತಾದ್ರು ಓಪ್ರಾ. ಆದ್ರೆ ಅವರ ಜೀವನದ ಅತ್ಯಂತ ಅದ್ಭುತ ವರ್ಷ 1986..! ಕಿಂಗ್ ವರ್ಲ್ಡ್ ಟೆಲಿವಿಶನ್ ಪ್ರೊಡಕ್ಷನ್ ಕಂಪನಿ ` ದಿ ಓಪ್ರಾ ವಿನ್ಫ್ರೆ ಶೋ’ ಅಂತ ಒಂದು ಟಾಕ್ ಶೋ ಆರಂಭಿಸುತ್ತೆ. ಅದು ಇಲ್ಲಿಯವರೆಗೆ ಅಮೆರಿಕದ ಟಾಪ್ ಶೋ ಅಂದ್ರೆ ಅತಿಶಯೋಕ್ತಿ ಅಲ್ಲ..! ಜನ ಹುಚ್ಚೆದ್ದು ಓಪ್ರಾ ಶೋ ನೋಡೋಕೆ ಶುರು ಮಾಡಿದ್ರು. ಟೈಮ್ಸ್, ವಾಲ್ ಸ್ಟ್ರೀಟ್ ಜರ್ನಲ್ ಸೇರಿದಂತೆ ದೊಡ್ದದೊಡ್ಡ ಪತ್ರಿಕೆಗಳೆಲ್ಲಾ ಓಪ್ರಾರನ್ನು ಹೊಗಳಿ ಬರೆದವು..! 1986ರ ಸೆಪ್ಟೆಂಬರ್ 8ರಿಂದ 2011ರ ಮೇ 25ರವರೆಗೆ 25 ಸರಣಿಯಲ್ಲಿ 4561 ಎಪಿಸೋಡ್ ಗಳು ಪ್ರಸಾರವಾಗಿವೆ..! ವಿಶ್ವದ ಮಹಾನ್ ನಾಯಕರುಗಳೆಲ್ಲಾ ಇವರ ಶ
ೋನಲ್ಲಿ ಭಾಗವಹಿಸೋಕೆ ಕಾದು ಕೂರೋರು..! ಯಾವ ಟಿವಿ ಕಾರ್ಯಕ್ರಮವೂ ಮಾಡದಷ್ಟು ಬಿಸ್ನೆಸ್ ಓಪ್ರಾ ಶೋ ಮಾಡ್ತಿತ್ತು..! ನೋಡನೋಡ್ತಿದ್ದ ಹಾಗೆ ಜಗತ್ತಿನ ಮಹಾನ್ ನಿರೂಪಕಿಯಾಗಿ ಬೆಳೆದುಬಿಟ್ರು ಓಪ್ರಾ..! ಇವತ್ತವರು ಎರಡು-ಮೂರು ಕಂಪನಿಗಳ ಮಾಲಕಿಯಾಗಿ, ಸಿನಿಮಾ ಟಿವಿ ನಟಿಯಾಗಿ, ದಾನ ಧರ್ಮದಲ್ಲಿ ದೊಡ್ದ ಹೆಸರಾಗಿ ಬೆಳೆದಿದ್ದಾರೆ..!ಇವತ್ತು ಅವರ ಆಸ್ತಿ ಬರೋಬ್ಬರಿ 2046 ಕೋಟಿ ರೂಪಾಯಿ..!
ಇವತ್ತು ಓಪ್ರಾ ವಿನ್ಫ್ರೆಯವರ 62ನೇ ಹುಟ್ಟುಹಬ್ಬ. ಇವತ್ತಿಗೂ ಅದೇ ಉತ್ಸಾಹ, ಚೈತನ್ಯ ಅವರಲ್ಲಿದೆ.. 9 ವರ್ಷದಲ್ಲಿ ಅತ್ಯಾಚಾರವಾದಾಗ ಬದುಕು ಇಷ್ಟೆ ಅನ್ಕೊಂಡಿದ್ರೆ, ತಾಯಿ ತಿರಸ್ಕಾರ ಮಾಡಿದಾಗ ನೊಂದುಕೊಂಡು ಸುಮ್ಮನಾಗಿದ್ರೆ, ಲೈಂಗಿಕ ಕಿರುಕುಳಕ್ಕೆ ಹೆದರಿ ಸಾವಿನ ಹಾದಿ ಹಿಡಿದಿದ್ರೆ ಇವತ್ತು ಓಪ್ರಾ ವಿನ್ಫ್ರೆ ಅನ್ನೋ ಹೆಸರು ಯಾರಿಗೂ ಗೊತ್ತಾಗ್ತಿರಲಿಲ್ಲ..! ಗೆಲ್ಲುವ ಛಲವೊಂದಿದ್ದರೆ ಲೈಫ್ ಸೂಪರ್ ಗುರು..!

  • ಕೀರ್ತಿ ಶಂಕರಘಟ್ಟ

Like us on Facebook  The New India Times

 

POPULAR  STORIES :

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

 

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...