No menu items!
12.4 C
Munich
Wednesday, April 29, 2026

ಕಾಣದಂತೆ ಮಾಯವಾಯಿತು ಲಾಟರಿ ಟಿಕೆಟ್ ನಂಬರ್..! ಬಟ್ಟೆಯನ್ನು ತೊಳೆದರೆ ಕೊಳೆಯೇ ಇರಲ್ಲ, ಅಂಥದ್ರಲ್ಲಿ..

Must read

ಲಾಟರಿ ಖರೀದಿಸುವುದು, ಅದರ ನಂಬರನ್ನು ಪ್ರತಿದಿನ ನೋಡುವುದು ಸಾಮಾನ್ಯ. ಕೆಲವರು ಲಾಟರಿ ಹಿಂದೆ ಬಿದ್ದು ದಿವಾಳಿಯಾಗಿದ್ದಾರೆ. ಇನ್ನೂ ಕೆಲವರು ಲಾಟರಿಯಿಂದಲೇ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಆದ್ದರಿಂದ ಲಾಟರಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಕೆಲವರಂತೂ ಲಾಟರಿಯನ್ನು ದೇವರ ಮುಂದಿಟ್ಟು ಪೂಜಿಸುವುದುಂಟು. ಆದರೆ ಇಲ್ಲೋರ್ವ ಮಹಿಳೆ ಮಾತ್ರ ಲಾಟರಿಯನ್ನು ಪ್ಯಾಂಟ್ ನಲ್ಲಿಟ್ಟು ಅದನ್ನು ಗೊತ್ತಿಲ್ಲದೇ ತೊಳೆದು ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾಳೆ.

ಆಕೆ ಖರೀದಿಸಿದ್ದ ಲಾಟರಿ ಟಿಕೇಟ್ ಗೆ ಬರೋಬ್ಬರಿ 317 ಕೋಟಿ ರೂ. ಬಹುಮಾನ ಬಂದಿದೆ. ಆದರೆ ಏನು ಮಾಡುವುದು ಅದನ್ನು ಪಡೆಯುವ ಅದೃಷ್ಟ ಆಕೆಗೆ ಇದ್ದಂತಿಲ್ಲ. ಇದಕ್ಕೆ ಕಾರಣವಾಗಿರುವುದು ಆಕೆ ಮಾಡಿಕೊಂಡಿರುವ ಯಡವಟ್ಟು.
ಯೆಸ್.. ಸುಜಾನ್ ಮಹಿಳೆಯೊಬ್ಬರು ಖರೀದಿಸಿದ್ದ ಲಾಟರಿ ಟಿಕೇಟ್ ಗೆ 33 ಮಿಲಿಯನ್ ಪೌಂಡ್ (ಅಂದಾಜು 317 ಕೋಟಿ ರೂ.) ಬಹುಮಾನ ಬಂದಿದೆ. ಆದರೆ ಈ ಮಹಿಳೆ ಲಾಟರಿ ಟಿಕೇಟ್ ತನ್ನ ಜೀನ್ಸ್ ಪ್ಯಾಂಟ್ ಕಿಸೆಯಲ್ಲಿದ್ದುದನ್ನು ಮರೆತು ಅದನ್ನು ಹಾಗೆಯೇ ವಾಷಿಂಗ್ ಮೆಷಿನ್ ಗೆ ಹಾಕಿ ಬಟ್ಟೆಯನ್ನು ತೊಳೆದಿದ್ದಾಳೆ. ಆದ್ದರಿಂದ ಲಾಟರಿ ಟಿಕೆಟ್ ಮೇಲಿನ ನಂಬರ್ ಹಾಗೆಯೇ ಇದ್ದು, ದಿನಾಂಕ ಮಾತ್ರ ಗುರುತಿಸಲಾಗದ ಸ್ಥಿತಿಯಲ್ಲಿದೆ..!
ಟಿಕೆಟ್ ಖರೀದಿಸಿ ಅದನ್ನು ಪ್ಯಾಂಟ್ ನಲ್ಲಿಟ್ಟಿದ್ದ ಸುಜಾನ್ ಅದನ್ನು ಮರೆತು ವಾಶ್ ಮಾಡಿದ್ದಾಳೆ. ಆದರೆ ಕೆಲ ಸಮಯದ ಬಳಿಕ ಡ್ರಾ ಆದ ನಂಬರನ್ನು ನೋಡಿದಾಗ, ಆ ಸಂಖ್ಯೆಯೂ ಹಾಗೂ ತನ್ನ ಲಾಟರಿ ಟಿಕೆಟ್ ಮೇಲಿನ ನಂಬರ್ ನ್ನು ಗಮನಿಸಿದಾಗ ಒಂದೇ ಆಗಿತ್ತು. ಆದರೆ ದಿನಾಂಕ ಮಾತ್ರ ತೊಳೆದುಹೋಗಿತ್ತು.
ತಾನು ಖರೀದಿಸಿದ್ದ ಟಿಕೇಟ್ ಗೆ ಬಹುಮಾನ ಬಂದಿದ್ದನ್ನು ಅರಿತ ಸುಜಾನ್ ಟಿಕೇಟ್ ಖರೀದಿಸಿದ್ದ ಅಂಗಡಿಯವರ ಬಳಿ ನಡೆದ ಪ್ರಮಾದವನ್ನು ಹೇಳಿಕೊಂಡಿದ್ದಾಳೆ. ಇದೀಗ ಅವರು ಲಾಟರಿ ಸಂಸ್ಥೆಯ ಗಮನಕ್ಕೆ ಈ ವಿಷಯವನ್ನು ತಂದಿದ್ದು, ಆಧುನಿಕ ತಂತ್ರಜ್ಞಾನದ ಮೂಲಕ ಬಹುಮಾನ ಬಂದಿರುವ ಟಿಕೇಟ್ ಅದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುವುದಾಗಿ ಲಾಟರಿ ಸಂಸ್ಥೆ ಭರವಸೆ ನೀಡಿದೆ. ಒಟ್ಟಿನಲ್ಲಿ ಈ ಮಹಿಳೆಗೆ ಈಗ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗಿದೆ.

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

11ರ ಪೋರ 8 ಮಕ್ಕಳ ಪ್ರಾಣರಕ್ಷಿಸಿದ ಧೀರ..! ತನ್ನ ಪ್ರಾಣವನ್ನೇ ಒತ್ತೆಯಾಗಿಟ್ಟು ಸಹಪಾಠಿಗಳ ಪ್ರಾಣ ಉಳಿಸಿದ ಕೆಚ್ಚೆದೆಯ ಬಾಲಕ..!

ಜುಕರ್ ಬರ್ಗ್ ಯಾಕೆ ಒಂದೇ ಬಣ್ಣದ ಶರ್ಟ್ ಧರಿಸುತ್ತಾರೆ..?

ಟ್ರಾಫಿಕ್ ಪೊಲೀಸ್ ಮೇಲೆ ಯುವತಿಯಿಂದ ಹಲ್ಲೆ…! ನಾರಿ ಮುನಿದರೆ ಮಾರಿ ಅನ್ನೋದು ಇದಕ್ಕೇ ಇರಬೇಕು..?!

ಜೈಲಲ್ಲಿ ಅರಳಿದ ಪ್ರೀತಿ..! ಜೈಲು ದಾಂಪತ್ಯ ನಡೆಸಿದ ಜೋಡಿಗಳೀಗ ದೂರ ದೂರ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article