ಇಂದಿನ ಟಾಪ್ 10 ಸುದ್ದಿಗಳು..! 29.01.2016

1
88

1. ಐತಿಹಾಸಿಕ ಸರಣಿ ಗೆದ್ದ ಭಾರತ ಮಹಿಳಾ ಕ್ರಿಕೆಟ್ ತಂಡ
ಆಸ್ಟ್ರೇಲಿಯಾ ತಂಡವನ್ನು 10 ವಿಕೆಟ್ಗಳಿಂದ ಸೋಲಿಸುವ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಿಂದ ಗೆದ್ದು ಭಾರತೀಯ ಮಹಿಳಾ ಕ್ರಿಕೆಟ್ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ.

2. ಏಕದಿನ ಸರಣಿ ಸೋಲಿನ ಸೇಡು ತೀರಿಸಿಕೊಂಡ ಧೋನಿ ಬಾಯ್ಸ್..!
ಆಸ್ಟ್ರೇಲಿಯಾ ತಂಡದ ಎದುರಿನ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಸತತ ನಾಲ್ಕು ಪಂದ್ಯಗಳನ್ನು ಸೋಲುವ ಮೂಲಕ ಹೀನಾಯ ಸೋಲನ್ನು ಕಂಡ ಭಾರತ ಕ್ರಿಕೆಟ್ ತಂಡ ಆ ಸೋಲಿಗೆ ಉತ್ತರವೆಂಬಂತೆ ಟಿ20 ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಗೆದ್ದು ಸೇಡು ತೀರಿಸಿಕೊಂಡಿದೆ.
ಮೇಲ್ಬನರ್್ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗಿಳಿದ ಭಾರತ ರೋಹಿತ್ ಶರ್ಮಾ(60), ಧವನ್ (42), ಕೋಹ್ಲಿ (ಅಜೇಯ59)ಯ ಉತ್ತಮ ಆಟದ ನೆರವಿನಿಂದ ಮೂರು ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತ್ತು. ಗುರು ಬೆನ್ನು ಹತ್ತಿದ ಆಸ್ಟ್ರೇಲಿಯಾ ಧೋನಿ ಬಾಯ್ಸ್ ಬೌಲಿಂಗ್ ದಾಳಿಗೆ ತತ್ತರಿಸಿ ನಿಗಧಿತ ಓವರ್ ಮುಕ್ತಾಯಕ್ಕೆ ಎಂಟು ವಿಕೆಟ್ ನಷ್ಟಕ್ಕೆ 157ರನ್ಗಳನ್ನಷ್ಟೇಗಳಿಸಲು ಶಕ್ತವಾಯಿತು. ನಾಯಕ ಫಿಂಚ್(74) ಏಕಾಂಗಿ ಹೋರಟದ ನಡುವೆಯೂ ಆಸ್ಟ್ರೇಲಿಯಾ 27ರನ್ಗಳ ಸೋಲನ್ನು ಅನುಭವಿಸಿತು.
3.. ಸಾನಿಯಾ-ಮಾರ್ಟಿನಾ ಜೋಡಿಗೆ ಆಸ್ಟ್ರೇಲಿಯನ್ ಓಪನ್ ಕಿರೀಟ

ವಿಶ್ವದ ನಂ.1 ಮಹಿಳಾ ಡಬಲ್ಸ್ ಜೋಡಿ ಎನಿಸಿಕೊಂಡಿರುವ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ರವರು ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಮಹಿಳೆಯರ ಡಬಲ್ಸ್  ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಸತತ ಮೂರನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಮೆಲ್ಬೋರ್ನ್ ನಲ್ಲಿ ನಡೆದ ಫೈನಲ್ಸ್ ನಲ್ಲಿ ಅಗ್ರ ಶ್ರೇಯಾಂಕದ ಸಾನಿಯಾ- ಹಿಂಗಿಸ್ ಜೋಡಿ ಸತತ 36ನೇ ಗೆಲುವು ದಾಖಲಿಸಿದೆ. ಜೆಕ್ ರಿಪಬ್ಲಿಕ್ ನ 7ನೇ ಶ್ರೇಯಾಂಕದ ಲೂಸಿಯಾ ಹ್ರಡೇಕಾ ಮತ್ತು ಆಂಡ್ರಿಯಾ ಹ್ಲಾವಕೊವ ಜೋಡಿಯನ್ನು 7-6, 6-3 ನೇರ ಸೆಟ್ ಗಳ ಅಂತರದಿಂದ ಸೋಲಿಸಿದ್ದಾರೆ.

4. ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಆಪ್ ಶಾಸಕನ ಬಂಧನ
ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ ಆಮ್ ಆದ್ಮಿ ಪಕ್ಷದ ಶಾಸಕ ಮಹೇಂದ್ರ ಯಾದವ್ ರನ್ನು ಬಂಧನಕ್ಕೊಳಪಡಿಸಲಾಗಿದೆ . ಮಹೇಂದ್ರ ಯಾದವ್ ಅವರು ದೆಹಲಿಯಲ್ಲಿ ಅಧಿಕಾರ ಹೊಂದಿರುವ ಆಮ್ ಪಕ್ಷದ ನಾಯಕರಾಗಿದ್ದು, ಇವರು ವಿಕಾಸ್ಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.

5. ಕೇರಳ ಸೋಲಾರ್ ಫಲಕ ಹಗರಣ: ಚಾಂಡಿ ವಿರುದ್ಧ ಪ್ರತಿಭಟನೆ

ಸೋಲಾರ್ ಫಲಕ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಪ್ರತಿಪಕ್ಷಗಳ ಒತ್ತಡ, ಪ್ರತಿಭಟನೆ ತಾರಕಕ್ಕೇರುತ್ತಿದೆ. ಇಂದು ವಿರೋಧ ಪಕ್ಷದ ಕಾರ್ಯಕರ್ತರು ತಿರುವನಂತಪುರದ ರಸ್ತೆಗಳಲ್ಲಿ ಪ್ರತಿಭಟನೆ ವೇಳೆ ಪೊಲೀಸರೊಂದಿಗೆ ಚಕಮಕಿ ನಡೆಸುತ್ತಿದ್ದರು.

6. ಕ್ರಿಮಿನಲ್ ಕೇಸ್ ಗೆ ಸುಪ್ರೀಂ ತಡೆಯಾಜ್ಞೆ: ಧೋನಿ ನಿರಾಳ

ಜಾಹೀರಾತು ಒಂದರಲ್ಲಿ ತನ್ನನ್ನು ಭಗವಾನ್ ವಿಷ್ಣುವಿನಂತೆ ತೋರಿಸಿ ಕೈಯ್ಯಲ್ಲಿ ಶೂ ಹಿಡಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಮಹೇಂದ್ರ ಸಿಂಗ್ ದೋನಿ ವಿರುದ್ಧದ ಕ್ರಿಮಿನಲ್ ಖಟ್ಲೆಗೆ ಸುಪ್ರೀಂಕೋಟರ್್ ತಡೆಯಾಜ್ಞೆ ನೀಡಿದೆ. ಪ್ರಕರಣವನ್ನು ಅನಂತಪುರದಿಂದ ಬೆಂಗಳೂರಿಗೆ ವರ್ಗಾಯಿಸುವಂತೆ ಕೋರಿ ಧೋನಿ ಸಲ್ಲಿಸಿರುವ ಮನವಿ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಆಂಧ್ರಪ್ರದೇಶ ಪೊಲೀಸರಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.

7. ಬನ್ನೇರುಘಟ್ಟ ಮೃಗಾಲಯದಿಂದ ಕರಡಿ ಎಸ್ಕೇಪ್

ಬೆಂಗಳೂರು ಹೊರವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಹಿಮಾಲಯನ್ ಕರಡಿ ತಪ್ಪಿಸಿಕೊಂಡಿದೆ. ಕೆಲ ತಿಂಗಳ ಹಿಂದಷ್ಟೇ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಈ ಹಿಮಾಲಯನ್ ಕರಡಿ ಪಂಜರದಿಂದ ನೆಗೆದು ಕಾಡು ಸೇರಿದೆ. ಇಡೀ ದಿನ ಸಿಬ್ಬಂದಿ ಹುಡುಕಾಟ ನಡೆಸಿದರೂ ಕರಡಿ ಸುಳಿವು ಸಿಗಲಿಲ್ಲ. ಇದರಿಂದ ಕಾಡಂಚಿನ ಹಳ್ಳಿಗರಲ್ಲಿ ಆತಂಕ ಮನೆ ಮಾಡಿದೆ. ಉದ್ಯಾನವನದ ಪ್ರಾಣಿ ಪುರ್ನವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಹಿಮಾಲಯನ್ ಕರಡಿ ಬೆಳಗ್ಗೆ ಬಯಲು ಪಂಜರದ 30 ಅಡಿ ಎತ್ತರದ ತಂತಿ ಬೇಲಿ ನೆಗೆದು ಹೊರ ಬಂದಿದೆ. ಕೂಡಲೇ ಸಿಬ್ಬಂದಿ ಹಿಂಬಾಲಿಸಿದ್ದಾರೆ, ಗಾಬರಿಗೊಂಡ ಕರಡಿ ಅಲ್ಲೇ ಇದ್ದ ಕಲ್ಲು ಕಾಪೌಂಡ್ ಹಾರಿ ಕಾಡು ಸೇರಿದೆ.

8. ಕಡಲ ತೀರಕ್ಕೆ ಬಂದು ಬಿದ್ದ ಬೃಹತ್ ತಿಮಿಂಗಲ

30 ಅಡಿ ಉದ್ದದ ಬೃಹತ್ ತಿಮಿಂಗಿಲವೊಂದು ಮುಂಬೈಯ ಜುಹು ಕಡಲತೀರಕ್ಕೆ ರಾತ್ರಿ ಬಂದು ಬಿದ್ದಿದೆ. ಸುಮಾರು 4 ಟನ್ ತೂಕದ ಈ ಈ ತಿಮಿಂಗಿಲ ಕಾಣಿಸಿಕೊಂಡಿದೆ. ಪೊಲೀಸರು ಮತ್ತು ಅರಣ್ಯ ಇಲಾಖಾ ಅಧಿಕಾರಿಗಳು ತಿಮಿಂಗಿಲವನ್ನು ಪರಿಶೀಲಿಸುತ್ತಿದ್ದು, ತಜ್ಞರು ಇದು ಬ್ರೈಡೇ ತಿಮಿಂಗಿಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ತಿಮಿಂಗಿಲದ ಅವಶೇಷವನ್ನು ತೆಗೆಯಲು ಸ್ಥಳಕ್ಕೆ ಕ್ರೇನ್ ಗಳಿಗೆ ಕರೆಸಲಾಗಿದ್ದು, ಎರಡು-ಮೂರು ದಿನಗಳ ಹಿಂದೆಯೇ ಈ ತಿಮಿಂಗಿಲ ಸಾವನ್ನಪ್ಪಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ

9. ಬಿಲ್ ಗೇಟ್ಸ್ ವಿಶ್ವದ ಧನಿಕ

ವಿಶ್ವದ 50 ಭಾರಿ ಶ್ರೀಮಂತರ ಪಟ್ಟಿ ಪ್ರಕಟಿಸಲಾಗಿದ್ದು, ಅಮೆರಿಕಾದ ಬಿಲ್ ಗೇಟ್ಸ್ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಪಟ್ಟಿಯಲ್ಲಿ ಭಾರತದ ಮುಖೇಶ್ ಅಂಬಾನಿ, ಅಜಿಂ ಪ್ರೇಮ್ ಜಿ ಮತ್ತು ದಿಲೀಪ್ ಸಾಂಘ್ವಿ ಸ್ಥಾನ ಪಡೆದಿದ್ದಾರೆ. ಬಿಸಿನೆಸ್ ಇನ್ ಸೈಡರ್ ಸಹಯೋಗದಲ್ಲಿ ವೆಲ್ತ್ ಎಕ್ಸ್ ಸಮೀಕ್ಷೆ ನಡೆಸಿದ್ದು ಬಿಲ್ ಗೇಟ್ಸ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸ್ಪಾನಿಷ್ ಉದ್ಯಮಿ ಅಮಾನ್ಸಿಯೊ ಒರ್ಟಿಗಾ ಮತ್ತು ವಾರೆನ್ ಬಫೆಟ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಫೇಸ್ ಬುಕ್ ನ ಸಹ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಈ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದು ಅತಿ ಕಿರಿ ವಯಸ್ಸಿನ ಉದ್ಯಮಿಯಾಗಿದ್ದಾರೆ.

10. ತೆರಿಗೆ ವಂಚಿಸಿದ ಫುಟ್ಬಾಲ್ ತಾರೆ ನೇಮರ್ಗೆ ದಂಡ
ತೆರಿಗೆ ವಂಚಿಸಿದ ಆರೋಪದ ಮೇಲೆ ಬ್ರೆಜಿಲ್ ಮತ್ತು ಬಾರ್ಸಿಲೋನಾ ಕ್ಲಬ್ ನ ಸ್ಟಾರ್ ಫುಟ್ಬಾಲ್ ಆಟಗಾರ ನೇಮರ್ಗೆ ಬರೊಬ್ಬರಿ 1 ಲಕ್ಷದ 12 ಸಾವಿರ ಡಾಲರ್, ಅಂದರೆ 76 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

1 COMMENT

LEAVE A REPLY

Please enter your comment!
Please enter your name here