ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರವೇ ಈ ಪೊಗರು. ಪೊಗರು ಚಿತ್ರದ ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಫೆಬ್ರವರಿ ಕೊನೆ ವಾರದಲ್ಲಿ ಆರಂಭವಾಗುತ್ತಿದೆ. ಇನ್ನು ಈ ಸಿನಿಮಾಗೆ ವಿಲನ್ ಆಗಿ ತೆಲುಗಿನ ಖ್ಯಾತ ನಟ ಆಯ್ಕೆಯಾಗಿದ್ದಾರೆ. ಯಾರು ಗೊತ್ತಾ ಆ ಖಳನಾಯಕ.. ?
ಪೊಗರು ಚಿತ್ರಕ್ಕೆ ವಿಲನ್ ಆಗಿ ದಕ್ಷಿಣ ಭಾರತದ ಖ್ಯಾತ ನಟ ಜಗಪತಿ ಬಾಬು ನಟಿಸುತ್ತಿದ್ದಾರೆ. ಹೌದು, ಧ್ರುವ ಹಾಗೂ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದು, ಜಗಪತಿಬಾಬು ವಿಲನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರ ಧ್ರುವ ಸರ್ಜಾ ಎರಡು ಶೇಡ್ ನಟಿಸುತ್ತಿದ್ದಾರೆ. ಇದಕ್ಕಾಗಿ ಅವರು ಭಾರೀ ತೂಕವನ್ನೂ ಇಳಿಸಿಕೊಂಡಿದ್ದರು.
ಇದೇ ತಿಂಗಳು ಕೊನೆಯಲ್ಲಿ ನಡೆಯುವ ಎರಡನೇ ಹಂತದ ಶೂಟಿಂಗ್ ಹಾಗಾಗಿ ಧ್ರುವ ಇಳಿಸಿಕೊಂಡಿದ್ದ ತೂಕವನ್ನು ಮತ್ತೆ ಏರಿಸಿಕೊಂಡಿದ್ದಾರೆ. ಅಲ್ಲದೆ ಸದ್ಯದಲ್ಲೇ ರಾಘವೇಂದ್ರ ರಾಜ್‌ಕುಮಾರ್ ಕೂಡ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ರವಿಶಂಕರ್ ಸಾಧು ಕೋಕಿಲಾ, ಕುರಿ ಪ್ರತಾಪ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.